ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿವಾಹಿತೆಯನ್ನು ಛೇಡಿಸಿ 8ನೇ ತರಗತಿ ಬಾಲಕನಿಂದ ಗೂಂಡಾಗಿರಿ

|
Google Oneindia Kannada News

ಬೆಂಗಳೂರು, ಮೇ 13: ಹೆಂಡತಿಯನ್ನು ಚೇಡಿಸಿದ ಬಾಲಕನಿಗೆ ಬುದ್ಧಿವಾದ ಹೇಳಲು ಕೊನೆಗೆ ತಾನೇ ಏಟು ತಿಂದ ಘಟನೆ ಬೆಂಗಳೂರಲ್ಲಿ ನಡೆದಿದೆ.

ಎಂಟನೇ ತರಗತಿ ವಿದ್ಯಾರ್ಥಿಯೊಬ್ಬ ತನ್ನ ವಯಸ್ಸನ್ನು ಮೀರಿದ ವರ್ತನೆ ತೋರಿದ್ದಾನೆ, ವಿವಾಹಿತೆಯನ್ನು ಚೇಡಿಸಿದ್ದಾನೆ, ಅದು ತಪ್ಪು ಎಂದು ಬುದ್ಧಿವಾದ ಹೇಳಲು ಹೋದ ಪತಿಗೆ ಬಾಲಕನ ಪೋಷಕರು ಥಳಿಸಿರುವ ಘಟನೆ ಇದಾಗಿದೆ.

 ಕೆಲಸ ಕೊಡಿಸುವುದಾಗಿ ನಂಬಿಸಿ ವೃದ್ಧೆ ಮೇಲೆ ಸಾಮೂಹಿಕ ಅತ್ಯಾಚಾರ ಕೆಲಸ ಕೊಡಿಸುವುದಾಗಿ ನಂಬಿಸಿ ವೃದ್ಧೆ ಮೇಲೆ ಸಾಮೂಹಿಕ ಅತ್ಯಾಚಾರ

ಮಹಿಳೆಯು ರಾತ್ರಿ 9 ಗಂಟೆ ಸುಮಾರಿಗೆ ಕೆಲವು ವಸ್ತುಗಳನ್ನು ಖರೀದಿ ಮಾಡಿ ಮನೆಗೆ ಹಿಂದಿರುಗುತ್ತಿದ್ದಳು. ಅದೇ ಏರಿಯಾದಲ್ಲಿ ವಾಸವಿರುವ ಬಾಲಕ ಮಹಿಳೆ ಹೋಗುವ ದಾರಿಯಲ್ಲೇ ನಡೆದು ಹೋಗುತ್ತಿದ್ದ. ಆಕೆ ಹೋಗುವ ಅಶ್ಲೀಲ ಕಾಮೆಂಟ್ ಮಾಡಿದ್ದ, ಅವನ ವರ್ತನೆ ಕಂಡು ಬೇಜಾರಾದರೂ ಬುದ್ಧಿವಾದ ಹೇಳಿದ್ದಕ್ಕೆ ಆಕೆಯ ಬಳಿ ಇನ್ನೂ ಕೆಟ್ಟದಾಗಿ ಮಾತನಾಡಿದ್ದ.

8th standard boy abuses woman in open street

ಮಹಿಳೆ ತನ್ನ ಪತಿ ಬಳಿ ನಡೆದಿರುವ ವಿಷಯವನ್ನೆಲ್ಲಾ ಹೇಳಿಕೊಂಡಾಗ ತಾನು ಬಾಲಕನಿಗೆ ಬುದ್ಧಿವಾದ ಹೇಳುತ್ತೇನೆ ಎಂದು ಅವರ ಮನೆಗೆ ಹೋಗಿ ತಿಳಿ ಹೇಳಿದರೆ ಆತ ಹಾಗೂ ಪೋಷಕರೆಲ್ಲರೂ ಸೇರಿ ಮಹಿಳೆಯ ಪತಿ ಯೋಗೇಶ್‌ಗೆ ಥಳಿಸಿ ಮನೆಯಿಂದ ಕಳಿಸಿದ್ದಾರೆ. ಬಳಿಕ ಬ್ಯಾಟರಾಯನಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಮೈಸೂರಿನ ಸಾಮೂಹಿಕ ಅತ್ಯಾಚಾರ ಪ್ರಕರಣದ ತನಿಖೆ ಚುರುಕುಮೈಸೂರಿನ ಸಾಮೂಹಿಕ ಅತ್ಯಾಚಾರ ಪ್ರಕರಣದ ತನಿಖೆ ಚುರುಕು

ಮಕ್ಕಳ ತಪ್ಪನ್ನು ತಿದ್ದಿ ಬುದ್ಧಿವಾದ ಹೇಳಿ ಅವರನ್ನು ಸರಿದಾರಿಗೆ ತರಬೇಕಾದ ಪೋಷಕರೇ ಮಕ್ಕಳು ಹೇಳಿದ್ದಕ್ಕೆಲ್ಲಾ ತಲೆಯಾಡಿಸಿ ಅವರು ಮಾಡಿದ್ದೇ ಸರಿ ಎಂದು ವಾದ ಮಾಡಿದರೆ ಸಮಾಜದ ಸ್ವಾಸ್ತ್ಯ ಇನ್ನಷ್ಟು ಹಾಳಾಗುತ್ತದೆ. ಮಕ್ಕಳು ತಪ್ಪು ದಾರಿ ತುಳಿಯಲು ಪೋಷಕರೇ ದಾರಿ ಮಾಡಿಕೊಟ್ಟಂತಾಗುತ್ತದೆ.

English summary
A27-seven-year old husband was beaten up badly when he questioned a class 8 boy for teasing his wife.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X