ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇಂದು(ಫೆ.19) ಎಲೆಕ್ಟ್ರಿಕ್ ವಾಹನಗಳ ರೀಚಾರ್ಜ್ ಕೇಂದ್ರಕ್ಕೆ ಚಾಲನೆ

|
Google Oneindia Kannada News

ಬೆಂಗಳೂರು, ಫೆಬ್ರವರಿ 19 : ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲು ಸರ್ಕಾರ ಒತ್ತು ನೀಡಿದ್ದು, ಈ ನಿಟ್ಟಿನಲ್ಲಿ ವಾಹನಗಳ ರೀಚಾರ್ಜಿಂಗ್ ಕೇಂದ್ರಗಳನ್ನು ಆರಂಭಿಸುವ ಕ್ರಮ ಕೈಗೊಳ್ಳಲಾಗಿದೆ.

ನಗರದ ಪ್ರಮುಖ ರಸ್ತೆಗಳಲ್ಲಿ ರೀಚಾರ್ಜಿಂಗ್ ಕೇಂದ್ರಗಳನ್ನು ಆರಂಭಿಸಲು 85 ಸ್ಥಳಗಳನ್ನು ಗುರುತಿಸಲಾಗಿದೆ. ಬಿಬಿಎಂಪಿ ಜಾಗ ಒದಗಿಸಲಿದ್ದು, ಬೆಸ್ಕಾಂ ನೊಡೆಲ್ ಸಂಸ್ಥೆಯಾಗಿ ಕಾರ್ಯ ನಿರ್ವಹಿಸಲಿದೆ. ಇಂತಹ ಕೇಂದ್ರಗಳಿಗೆ ಇಂಧನ ಸಚಿವ ಡಿ.ಎಕ. ಶಿವಕುಮಾರ್ ಸೋಮವಾರ ಚಾಲನೆ ನೀಡಲಿದ್ದಾರೆ.

ಈ ಸೌಲಭ್ಯ ಇ-ಬಸ್, ಇ-ಕಾರ್, ಇ-ರಿಕ್ಷಾಗಳಿಗೆ ಸಿಗಲಿದೆ. ಸದ್ಯ 12 ಸ್ಥಳಗಳಲ್ಲಿ ತಕ್ಷಣವೇ ಸೌಲಭ್ಯ ಸಿಗಲಿದ್ದು, ಹಂತಗಳಲ್ಲಿ ಇತರೆಡೆಗೂ ವಿಸ್ತರಣೆಯಾಗಲಿದೆ.ತೈಲ ಬಂಕ್ ಅಥವಾ ಸಿಎನ್ ಜಿ ರೀಚಾರ್ಜ್ ರೀತಿ ಇ-ವಾಹನಗಳಿಗೂ ಇದೇ ರೀತಿಯ ಸೌಲಭ್ಯ ಸಿಗಲಿದೆ.

85 EV recharge centres will come up in Bengaluru

ಇ-ವಾಹನಗಳ ಬಳಕೆಗೆ ಉತ್ತೇಜನ: ದೇಶದ ಪ್ರಮುಖ ನಗರಗಳಲ್ಲಿ ಇ-ವಾಹನ ಬಳಕೆಗೆ ಕೇಂದ್ರ ಸರ್ಕಾರ ಉತ್ತೇಜನ ನೀಡಲು ಮುಂದಾಗಿದೆ. ಇದರ ಭಾಗವಾಗಿ ನಾನಾ ಬಗೆಯ ಎಲೆಕ್ಟ್ರಿಕ್ ವಾಹನಗಳು ರಸ್ತೆಗಿಳಿದಿವೆ. ಇದಕ್ಕೆ ಪರವಾನಗಿ ಜತೆಗೆ ಇಂಧನ ಪೂರೈಕೆ ರೀಚಾರ್ಜ್ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ.

ಕೇಂದ್ರ ಸರ್ಕಾರದ ಫೇಮ್ ಇಂಡಿಯಾ ಯೋಜನೆಯಡಿ ಇ-ವಾಹನ ಬಳಕಯನ್ನು ಉತ್ತೇಜಿಸಲು ನೆರವು ಘೋಷಿಸಿದೆ. ಈ ಯೋಜನೆಯಲ್ಲಿ ಬೆಂಗಳೂರು ನಗರಕ್ಕೆ 105 ಕೋಟಿ ರೂ ನೆರವು ಪ್ರಕಟಿಸಿದ್ದು ರೀಚಾರ್ಜ್ ಕೇಂದ್ರಕ್ಕೆ 15 ಕೋಟಿ ರೂ ಆದಾಯ ಸಿಗಲಿದೆ.

English summary
Energy minister DK Shivakumar will launch 12 Electric Vehicle's recharge centres. The BESCOM was identified as nodal agency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X