ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡಿ.ಕೆ.ಶಿವಕುಮಾರ್ ಬಂಧನಾನಂತರ ಪ್ರತಿಭಟನೆ: ರಾಜ್ಯಕ್ಕಾದ ನಷ್ಟವೆಷ್ಟು?

|
Google Oneindia Kannada News

Recommended Video

ಡಿ ಕೆ ಶಿವಕುಮಾರ್ ಅವರಿಂದ ಸರ್ಕಾರಕ್ಕೆ ಆದ ನಷ್ಟ ಎಷ್ಟು ಗೊತ್ತಾ..? | DK SHIVAKUMAR | GOVERNMENT

ಬೆಂಗಳೂರು, ಜನವರಿ 28: ಡಿ.ಕೆ.ಶಿವಕುಮಾರ್ ಬಂಧನದ ನಂತರ ಬೆಂಬಲಿಗರು ರಾಜ್ಯದಲ್ಲಿ ಮಾಡಿದ ಪ್ರತಿಭಟನೆಯಿಂದ ರಾಜ್ಯ ಸರ್ಕಾರ ಬೊಕ್ಕಸಕ್ಕೆ 82 ಕೋಟಿ ನಷ್ಟವಾಗಿದೆ.

ಬಂಧನದ ವಿರುದ್ಧ ನಡೆದ ಪ್ರತಿಭಟನೆ ಕುರಿತಾಗಿ ಕನಕಪುರ ತಾಲ್ಲೂಕಿನ ರವಿಕುಮಾರ್ ಕೆಂಚನಹಳ್ಳಿ ಎಂಬುವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ಮತ್ತೆ ದೆಹಲಿ ಪೊಲೀಸ್ ಠಾಣೆಗೆ ಹೋದ ಡಿ.ಕೆ.ಶಿವಕುಮಾರ್!ಮತ್ತೆ ದೆಹಲಿ ಪೊಲೀಸ್ ಠಾಣೆಗೆ ಹೋದ ಡಿ.ಕೆ.ಶಿವಕುಮಾರ್!

ಅರ್ಜಿಯ ವಿಚಾರಣೆ ಹೈಕೋರ್ಟ್‌ನಲ್ಲಿ ನಡೆದು, ವಿಚಾರಣೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಮಾಹಿತಿ ನೀಡಿದ್ದು, ಡಿ.ಕೆ.ಶಿವಕುಮಾರ್ ಬಂಧನದ ನಂತರ ರಾಮನಗರ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ನಡೆದ ಪ್ರತಿಭಟನೆಯಿಂದ ರಾಜ್ಯ ಸರ್ಕಾರಕ್ಕೆ 82 ಕೋಟಿ ನಷ್ಟವಾಗಿದೆ ಎಂದು ಮಾಹಿತಿ ನೀಡಿದೆ.

82 Crore Loss To Government Due To DK Shivakumar Followers Protest

ಡಿ.ಕೆ.ಶಿವಕುಮಾರ್ ಅವರು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿ (ಜಾರಿ ನಿರ್ದೇಶನಾಲಯ) ಇಂದ ಬಂಧಿತರಾಗಿದ್ದರು. ಸೆಪ್ಟೆಂಬರ್ ಮೂರರಂದು ಡಿ.ಕೆ.ಶಿವಕುಮಾರ್ ಬಂಧನವಾದ ನಂತರ ರಾಜ್ಯದ ಹಲವೆಡೆ ಪ್ರತಿಭಟನೆಗಳು ನಡೆದಿದ್ದವು. ರಾಮನಗರ, ಕನಕಪುರದಲ್ಲಿ ಬಸ್ಸುಗಳಿಗೆ ಕಲ್ಲು ತೂರಲಾಗಿತ್ತು.

ಕೆಪಿಸಿಸಿ ಅಧ್ಯಕ್ಷ ಸ್ಥಾನ ಘೋಷಣೆ ವಿಳಂಬ: ದೆಹಲಿಯಲ್ಲೇ ಬೀಡುಬಿಟ್ಟ ಡಿಕೆಶಿಕೆಪಿಸಿಸಿ ಅಧ್ಯಕ್ಷ ಸ್ಥಾನ ಘೋಷಣೆ ವಿಳಂಬ: ದೆಹಲಿಯಲ್ಲೇ ಬೀಡುಬಿಟ್ಟ ಡಿಕೆಶಿ

ಡಿ.ಕೆ.ಶಿವಕುಮಾರ್ ಬಂಧನದ ನಂತರ ನಡೆದ ಪ್ರತಿಭಟನೆಯಿಂದ ರಾಜ್ಯಕ್ಕೆ ನಷ್ಟಾಗಿದ್ದು, ಪ್ರತಿಭಟನೆ ಮಾಡಿದವ್ರನ್ನು ಹಾಗೂ ಪ್ರೇರೇಪಿಸಿದವರನ್ನು ಶಿಕ್ಷಿಸಬೇಕು ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹೂಡಲಾಗಿದ್ದು, ಅರ್ಜಿಯ ಮುಂದಿನ ವಿಚಾರಣೆ ಫೆಬ್ರವರಿ 3 ರಂದು ನಡೆಯಲಿದೆ.

English summary
Government says to court that government loss 82 crore worth property in DK Shivakumar arrest releated protest.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X