ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವರದಕ್ಷಿಣೆ ಕಿರುಕುಳ: ಬೆಂಗಳೂರಿನ ಬಗ್ಗೆ ಆಘಾತಕಾರಿ ಸಂಗತಿ ಬೆಳಕಿಗೆ

|
Google Oneindia Kannada News

ಬೆಂಗಳೂರು, ಜನವರಿ 11: ರಾಷ್ಟ್ರೀಯ ಅಪರಾಧ ದಾಖಲೆಗಳ ವಿಭಾಗ (ಎನ್‌ಸಿಆರ್‌ಬಿ) ದೇಶದಲ್ಲಿ ನಡೆದ ಅಪರಾಧಗಳ ಬಗ್ಗೆ ಅಂಕಿಅಂಶಗಳನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ. ಇದರಲ್ಲಿ ಸಿಲಿಕಾನ್ ಸಿಟಿ ಬೆಂಗಳೂರಿನ ಬಗ್ಗೆ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ.

ರಾಷ್ಟ್ರೀಯ ಅಪರಾಧ ದಾಖಲೆಗಳ ವಿಭಾಗದ 2018 ರ ಅಂಕಿಅಂಶದ ಪ್ರಕಾರ ಬೆಂಗಳೂರು 2018 ರಲ್ಲಿ ದೇಶದಲ್ಲೇ ಅತ್ಯಧಿಕ ವರದಕ್ಷಿಣೆ ಕಿರುಕುಳ ಪ್ರಕರಣಗಳನ್ನು ದಾಖಲಿಸಿಕೊಂಡ ನಗರವಾಗಿದೆ ಎಂದು ತಿಳಿದು ಬಂದಿದೆ. ಭಾರತದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ 20 ನಗರಗಳ ಪೈಕಿ ಅಂಕಿ ಅಂಶಗಳನ್ನು ತುಲನೆ ಮಾಡಿ ಎನ್‌ಸಿಆಆರ್ ವರದಿ ನೀಡಿದ್ದು, ಶೇ 81 ರಷ್ಟು ವರದಕ್ಷಿಣೆ ಕಿರುಕುಳ ಪ್ರಕರಣಗಳು ಆ ವರ್ಷದಲ್ಲಿ ಬೆಂಗಳೂರಿನಲ್ಲಿಯೇ ನಡೆದಿವೆ ಎಂದು ವರದಿ ಹೇಳಿದೆ.

ಕೌಟುಂಬಿಕ ದೌರ್ಜನ್ಯ ಮತ್ತು ಅದರ ವಿರುದ್ಧ ಇರುವ ಕಾನೂನುಗಳುಕೌಟುಂಬಿಕ ದೌರ್ಜನ್ಯ ಮತ್ತು ಅದರ ವಿರುದ್ಧ ಇರುವ ಕಾನೂನುಗಳು

2018 ರಲ್ಲಿ ಅತಿಹೆಚ್ಚು ಜನಸಂಖ್ಯೆ ಹೊಂದಿರುವ 20 ನಗರಗಳ ಪೇಕಿ 851 ಪ್ರಕರಣಗಳು ಒಟ್ಟಾರೆ ದಾಖಲಾಗಿದ್ದರೆ, ಅದರಲ್ಲಿ 692 ಪ್ರಕರಣಗಳು ಬೆಂಗಳೂರಿನಲ್ಲಿ ದಾಖಲಾಗಿವೆ. ದೆಹಲಿ, ಮುಂಬೈ, ಹೈದರಾಬಾದ ಹಾಗೂ ಚೆನ್ನೈನಲ್ಲಿ 159 ಪ್ರಕರಣಗಳು ದಾಖಲಾಗಿವೆ. ಈ ಎಲ್ಲ ಪ್ರಕರಣಗಳು ವರದಕ್ಷಿಣೆ ನಿಷೇಧ ಕಾಯ್ದೆಯಡಿ ದಾಖಲಾದ ಪ್ರಕರಣಗಳ ಅಂಕಿಅಂಶಗಳಾಗಿವೆ.

81 per cent Dowry Cases Reported in 2018. According To NCRB

ಬೆಂಗಳೂರು ಹೊರತುಪಡಿಸಿ ದೇಶದ ಇತರ 19 ನಗರಗಳಲ್ಲಿ ಅತ್ಯಂತ ಕಡಿಮೆ ಪ್ರಮಾಣದ ವರದಕ್ಷಿಣೆ ಕಿರುಕುಳಗಳು ದಾಖಲಾಗಿದ್ದರೆ, ಬೆಂಗಳೂರಿನಲ್ಲೇ ಅತ್ಯಧಿಕ ಪ್ರಕರಣಗಳು ದಾಖಲಾಗಿ ಅಚ್ಚರಿ ಮೂಡಿಸಿದೆ. ಮಹಿಳಾ ದೌರ್ಜನ್ಯ ಹಾಗೂ ವರದಕ್ಷಿಣೆ ಕಿರುಕುಳದ ಬಗ್ಗೆ ಪೊಲೀಸರು ಹಾಗೂ ಮಹಿಳಾ ಸಂಘಟನೆಗಳು ವ್ಯಾಪಕ ಜಾಗೃತಿ ಮೂಡಿಸಿರುವುದರಿಂದ ಹೆಚ್ಚಿನ ಪ್ರಕರಣಗಳು ದಾಖಲಾಗಿರಬಹುದು ಎಂದು ವರದಿ ಹೇಳಿದೆ.

English summary
81 per cent Dowry Cases Reported in 2018 accross the indian major cities. according to national crime records bureau.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X