ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಜಾಜಿನಗರ ಇಎಸ್‌ಐ ಆಸ್ಪತ್ರೆಯ 81 ವೈದ್ಯರ ದಿಢೀರ್ ವರ್ಗಾವಣೆ

|
Google Oneindia Kannada News

ಬೆಂಗಳೂರು, ಮಾರ್ಚ್ 11: ರಾಜಾಜಿನಗರದಲ್ಲಿರುವ ಇಎಸ್‌ಐ ಆಸ್ಪತ್ರೆಯ 81 ವೈದ್ಯರನ್ನು ಹೆಚ್ಚುವರಿ ಸಿಬ್ಬಂದಿ ಹೆರಿನಲ್ಲಿ ದಿಢೀರ್ ವರ್ಗಾವಣೆ ಮಾಡಿದ್ದಾರೆ.

ಉತ್ತರ ಭಾರತದ ರಾಜ್ಯಗಳಿಗೆ ವರ್ಗಾವಣೆ ಮಾಡಿದ್ದಾರೆ. ಇದರಿಂದ ಸೇವೆ ವ್ಯತ್ಯಯವಾಗು ಸಾಧ್ಯತೆ ಇದೆ. 1961ರಿಂದ ರಾಜಾಜಿನಗರದ ಇಎಸ್‌ಐ ಆಸ್ಪತ್ರೆ ಕಾರ್ಯನಿರ್ವಹಿಸುತ್ತಿದ್ದು, ವೈದ್ಯಕೀಯ ಶಿಕ್ಷಣ ಸಂಸ್ಥೆಯಾಗಿ ಗುಣಮಟ್ಟದ ಆರೋಗ್ಯ ಸೇವೆ ನೀಡುತ್ತಿದೆ. 500 ಹಾಸಿಗೆಯ ಸಾಮರ್ಥ್ಯದ ಆಸ್ಪತ್ರೆಯು 200 ಕಾಯಂ ವೈದ್ಯರು ಹಾಗೂ 63 ಗುತ್ತಿಗೆ ಸಿಬ್ಬಂದಿಯನ್ನು ಹೊಂದಿದೆ. ಇದೀಗ ಏಕಾಏಕಿ 81 ವೈದ್ಯರನ್ನು ವರ್ಗಾವಣೆ ಮಾಡಿದೆ.

ತಾಯಿ, ತಂಗಿಗೆ ಇಂಜೆಕ್ಷನ್‌ ಕೊಟ್ಟು ಕೊಲೆ ಮಾಡಿ, ಆತ್ಮಹತ್ಯೆಗೆ ಯತ್ನಿಸಿದ ವೈದ್ಯ ತಾಯಿ, ತಂಗಿಗೆ ಇಂಜೆಕ್ಷನ್‌ ಕೊಟ್ಟು ಕೊಲೆ ಮಾಡಿ, ಆತ್ಮಹತ್ಯೆಗೆ ಯತ್ನಿಸಿದ ವೈದ್ಯ

ರಾಜಾಜಿನಗರದ ಇಎಸ್‌ಐ ಆಸ್ಪತ್ರೆ ಒಂದರಲ್ಲಿ 11 ಲಕ್ಷ ನೋಂದಾಯಿತ ಸದಸ್ಯರಿದ್ದಾರೆ. ಇದರಿಂದಾಗಿ ಆಸ್ಪತ್ರೆಯಲ್ಲಿ ಹಾಸಿಗೆ ಸಮಸ್ಯೆ ಸಾಮಾನ್ಯವಾಗಿದೆ.

81 doctors of rajajinagar esi hospital transferred

ಬೆಂಗಳೂರು, ಚೆನ್ನೈ ಹಾಗೂ ಹೈದರಾಬಾದ್‌ನ ಇಎಸ್‌ಐ ಆಸ್ಪತ್ರೆಗಳ ವೈದ್ಯರನ್ನು ಮಾತ್ರ ಸಾಮೂಹಿಕ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. ಇದನ್ನು ವಿರೋಧಿಸಿ ವೈದ್ಯರು ಕೇಂದ್ರೀಯ ಆಡಳಿತ ನ್ಯಾಯ ಮಂಡಳಿಯಲ್ಲಿ ಮನವಿ ಸಲ್ಲಿಸಿದ್ದು, ಕ್ಯಾಟ್ ವರ್ಗಾವಣೆಗೆ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ.

English summary
Central government a hasty decision to transfer 81 doctors of Rajajinagar ESI hospital. They are transferred to North India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X