ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಬ್ಬಬ್ಬಾ ಒಂದೇ ರಾತ್ರಿ ಇಷ್ಟೊಂದು ಮದ್ಯ ಕುಡಿದರಾ ಬೆಂಗಳೂರಿಗರು?

|
Google Oneindia Kannada News

ಬೆಂಗಳೂರು, ಜನವರಿ 01 : ಡಿಸೆಂಬರ್ 31ರ ರಾತ್ರಿ ಕರ್ನಾಟಕದಾದ್ಯಂತ ಹೊಸ ವರ್ಷಾಚರಣೆ ಜೋರಾಗಿ ನಡೆದಿದೆ. ಬೆಂಗಳೂರಲ್ಲೂ ಹೊಸ ವರ್ಷಾಚರಣೆ ನೆಪದಲ್ಲಿ ಮದ್ಯದ ನದಿಯೇ ಹರಿದಿದೆ.

ಬ್ರಿಗೇಡ್ ರಸ್ತೆಯಲ್ಲಿ ಜನರ ಮೇಲೆ ಐಸ್‌ಕ್ಯೂಬ್ ಎಸೆದು ಯುವಕರ ಪುಂಡಾಟ ಬ್ರಿಗೇಡ್ ರಸ್ತೆಯಲ್ಲಿ ಜನರ ಮೇಲೆ ಐಸ್‌ಕ್ಯೂಬ್ ಎಸೆದು ಯುವಕರ ಪುಂಡಾಟ

ಮದ್ಯ ಮಾರಾಟಗಾರರ ಸಂಘ ನೀಡಿರುವ ಮಾಹಿತಿ ಪ್ರಕಾರ, ನಿನ್ನೆ ಒಂದೇ ದಿನ ಬೆಂಗಳೂರಲ್ಲಿ 80 ಕೋಟಿ ಮೌಲ್ಯದ ಮದ್ಯ ಮಾರಾಟವಾಗಿದೆಯಂತೆ.

ಹೊಸ ವರ್ಷಾಚರಣೆ: ಗರ್ಭಿಣಿ ಪತ್ನಿ ಎದುರು ಪತಿಗೆ ಚಾಕುವಿನಿಂದ ಇರಿದ ದುಷ್ಕರ್ಮಿಗಳು ಹೊಸ ವರ್ಷಾಚರಣೆ: ಗರ್ಭಿಣಿ ಪತ್ನಿ ಎದುರು ಪತಿಗೆ ಚಾಕುವಿನಿಂದ ಇರಿದ ದುಷ್ಕರ್ಮಿಗಳು

ಹೌದು, ಇದು ಕೇವಲ ಬೆಂಗಳೂರು ನಗರದ ಒಳಗಿರುವ ಪರವಾನಗಿ ಹೊಂದಿರುವ ಬಾರುಗಳಲ್ಲಿ ಮಾರಾಟವಾಗಿರುವ ಮದ್ಯದ ಮೌಲ್ಯದ ಅಂಕಿ-ಅಂಶ. ಹೋಲ್‌-ಸೇಲ್‌ ಮಳಿಗೆಗಳಲ್ಲಿ ಮಾರಾಟವಾದ ಮದ್ಯದ ಪ್ರಮಾಣವನ್ನು ಇದರಿಂದ ಹೊರಗಿಡಲಾಗಿದೆ.

80 crore rupees alcohol soled on December 31st in Bengaluru

ಮದ್ಯ ಮಾರಾಟಗಾರರ ಮಳಿಗೆ ಸಂಘದ ಮಾಹಿತಿ ಪ್ರಕಾರ, ನಿನ್ನೆ ಒಂದೇ ದಿನ ಸುಮಾರು 80 ಕೋಟಿ ಮದ್ಯ ವ್ಯಾಪಾರವಾಗಿದ್ದು, ಮಳಿಗೆಗಳಿಗೆ 30% ಲಾಭಾಂಶ ಸಿಕ್ಕಿದೆ ಎಂದು ಹೇಳಲಾಗಿದೆ.

ಮೈಸೂರಿನಲ್ಲಿ ಸಂಚಾರಿ ನಿಯಮ ಪಾಲಿಸಿದವರಿಗೆ ಟ್ರಾಫಿಕ್ ಪೊಲೀಸರಿಂದ ಗಿಫ್ಟ್ ಮೈಸೂರಿನಲ್ಲಿ ಸಂಚಾರಿ ನಿಯಮ ಪಾಲಿಸಿದವರಿಗೆ ಟ್ರಾಫಿಕ್ ಪೊಲೀಸರಿಂದ ಗಿಫ್ಟ್

ಕಳೆದ ಬಾರಿಗಿಂತಲೂ ಈ ಬಾರಿ ಮದ್ಯ ಹೆಚ್ಚು ಮಾರಾಟವಾಗಿದೆ ಎಂದು ಮದ್ಯ ಮಾರಾಟಗಾರರ ಮಳಿಗೆ ಸಂಘದ ಉಪಾಧ್ಯಕ್ಷರು ಮಾಧ್ಯಮಗಳಿಗೆ ಹೇಳಿದ್ದು, ಕಳೆದ ಬಾರಿಗಿಂತಲೂ ಮದ್ಯ ಮಾರಾಟದಲ್ಲಿ ಶೇ 50ರಷ್ಟು ಹೆಚ್ಚಳವಾಗಿದೆ ಎಂದು ಹೇಳಿದರು.

English summary
80 crore rupees worth alcohol sold on December 31 in Bengaluru, said liquor shop union leader. Data saying that this time alcohol sales were good than last year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X