ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸೋಂಕಿತರ ಸಂಖ್ಯೆ 511ಕ್ಕೆ ಏರಿಕೆ, ಬೆಂಗಳೂರಿಗಿಂದು ರಿಲೀಫ್

|
Google Oneindia Kannada News

ಬೆಂಗಳೂರು, ಏಪ್ರಿಲ್ 27: ರಾಜ್ಯದಲ್ಲಿ ಮತ್ತೆ 8 ಜನರಿಗೆ ಕೊರೊನಾ ಸೋಂಕು ದೃಢ ಪಟ್ಟಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಇಂದು ಮಧ್ಯಾಹ್ನ ಮಾಧ್ಯಮ ಪ್ರಕಟಣೆ ಮಾಡಿರುವ ಇಲಾಖೆ, ಒಟ್ಟು ಸೋಂಕಿತರ ಸಂಖ್ಯೆ 511ಕ್ಕೆ ಏರಿಕೆಯಾಗಿದೆ ಎಂದು ತಿಳಿಸಿದೆ.

ಹೊಸ 8 ಪ್ರಕರಣಗಳ ಪೈಕಿ ಬೆಂಗಳೂರು 1, ದಕ್ಷಿಣ ಕನ್ನಡ 2, ಬಾಗಲಕೋಟೆ ಜಿಲ್ಲೆಯ ಜಮಖಂಡಿ 2, ವಿಜಯಪುರ 2, ಮಂಡ್ಯ ಜಿಲ್ಲೆ ನಾಗಮಂಗಲದಲ್ಲಿ 1 ಪ್ರಕರಣ ಪತ್ತೆಯಾಗಿದೆ.

ಮನುಷ್ಯತ್ವ ಕಿತ್ತುಕೊಂಡ ಕೊರೊನಾ, ಹಸಿವಿಗೆ ಬೆಲೆ ನೀಡದ ಹೀನ ಮನಸ್ಥಿತಿ ಮನುಷ್ಯತ್ವ ಕಿತ್ತುಕೊಂಡ ಕೊರೊನಾ, ಹಸಿವಿಗೆ ಬೆಲೆ ನೀಡದ ಹೀನ ಮನಸ್ಥಿತಿ

ಈ ಕುರಿತು ಆರೋಗ್ಯ ಸಚಿವ ಶ್ರೀರಾಮುಲು ಟ್ವೀಟ್ ಮಾಡಿದ್ದು, ಈವರೆಗೆ 188 ಜನರು ಕೊರೊನಾದಿಂದ ಸಂಪೂರ್ಣ ಗುಣಮುಖರಾಗಿದ್ದಾರೆ. 19 ಜನರ ಚೇತರಿಕೆ ಕಾಣದೆ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

ಗುಡ್ ನ್ಯೂಸ್: ಕೊರೊನಾ ಕೊಲ್ಲಲು ಬಳಸಿದ ಅಸ್ತ್ರ ಭಾರತದಲ್ಲಿ ಯಶಸ್ವಿ!ಗುಡ್ ನ್ಯೂಸ್: ಕೊರೊನಾ ಕೊಲ್ಲಲು ಬಳಸಿದ ಅಸ್ತ್ರ ಭಾರತದಲ್ಲಿ ಯಶಸ್ವಿ!

ನಿನ್ನೆ ರಾಜ್ಯದಲ್ಲಿ ಕೇವಲ ಮೂರು ಸೋಂಕು ದೃಢಪಟ್ಟಿತ್ತು. ನಿನ್ನೆ ಸಂಜೆಯಿಂದ ಇಂದು ಮಧ್ಯಾಹ್ನದವರೆಗೂ 8 ಕೇಸ್ ವರದಿಯಾಗಿದೆ. ಸಿಲಿಕಾನ್ ಸಿಟಿಯಲ್ಲಿ ನಿನ್ನೆ ಒಂದು ಕೇಸ್‌ ಕೂಡ ಇರಲಿಲ್ಲ. ಇಂದು ಕೇವಲ ಒಂದು ಪ್ರಕರಣ ಮಾತ್ರ ಕಾಣಿಸಿಕೊಂಡಿದೆ. ಹಾಗಾಗಿ, ಬೆಂಗಳೂರಿಗೆ ಸ್ವಲ್ಪ ಮಟ್ಟಿಗೆ ರಿಲೀಫ್ ಸಿಕ್ಕಿದೆ.

8 New Coronavirus Case Reported In Karnataka Today

ಲಾಕ್‌ಡೌನ್‌ ವಿಸ್ತರಣೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ಜೊತೆ ಪ್ರಧಾನಿ ಮೋದಿ ವಿಡಿಯೋ ಕಾನ್ಫೆರೆನ್ಸ್ ಮೂಲಕ ಚರ್ಚೆ ಮಾಡುತ್ತಿದ್ದಾರೆ. ಮೇ 3ರ ಬಳಿಕ ರಾಜ್ಯದಲ್ಲಿ ಲಾಕ್‌ಡೌನ್‌ ಮುಂದುವರಿಯಬೇಕಾ ಅಥವಾ ತೆರವುಗೊಳಿಸಬೇಕಾ ಎಂಬುದು ಈ ಸಭೆಯ ಬಳಿಕ ತೀರ್ಮಾನವಾಗಲಿದೆ.

English summary
8 New coronavirus cases reported in karnataka. now total covid cases rise 511 in the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X