ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು; 8 ಡೆಮು ರೈಲು ಸಂಚಾರ ಆರಂಭ, ವೇಳಾಪಟ್ಟಿ

|
Google Oneindia Kannada News

ಬೆಂಗಳೂರು, ನವೆಂಬರ್ 08; ರೈಲ್ವೆ ಇಲಾಖೆ ಬೆಂಗಳೂರು ನಗರದ ಸುತ್ತಮುತ್ತಲಿನ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸಲು 8 ಡೆಮು ರೈಲುಗಳನ್ನು ಓಡಿಸಲು ಒಪ್ಪಿಗೆ ಕೊಟ್ಟಿದೆ. ಇದರಿಂದಾಗಿ ಬೆಂಗಳೂರು ವಿಮಾನ ನಿಲ್ದಾಣದ ಬಳಿಯ ಏರ್‌ಪೋರ್ಟ್ ರೈಲ್ವೆ ಹಾಲ್ಟ್‌ ಸ್ಟೇಷನ್‌ಗೆ ಸಹ ರೈಲು ಸಂಚಾರ ಆರಂಭವಾಗಲಿದೆ.

ನವೆಂಬರ್ 8 ರಿಂದಲೇ ಜಾರಿಗೆ ಬರುವಂತೆ ಕೋಲಾರ, ಚಿಕ್ಕಬಳ್ಳಾಪುರ, ಬಂಗಾರಪೇಟೆ, ಚನ್ನಪಟ್ಟಣಕ್ಕೆ Diesel Electric Multiple Unit (DEMU) ರೈಲುಗಳು ಸಂಚಾರ ನಡೆಸಲಿವೆ. ಕೋವಿಡ್ ಕಾರಣದಿಂದಾಗಿ 18 ತಿಂಗಳಿನಿಂದ ಈ ರೈಲುಗಳು ಸಂಚಾರ ರದ್ದುಗೊಂಡಿತ್ತು.

ಬೆಂಗಳೂರು ಏರ್‌ಪೋರ್ಟ್‌ಗೆ ರೈಲು ಸಂಚಾರ ರದ್ದುಬೆಂಗಳೂರು ಏರ್‌ಪೋರ್ಟ್‌ಗೆ ರೈಲು ಸಂಚಾರ ರದ್ದು

ಬೆಂಗಳೂರು ರೈಲ್ವೆ ವಿಭಾಗದ ಮ್ಯಾನೇಜರ್ ಶ್ಯಾಮ್ ಸಿಂಗ್ ಈ ಕುರಿತು ಮಾಹಿತಿ ನೀಡಿದ್ದಾರೆ. "18 ತಿಂಗಳ ಬಳಿಕ ಈ ರೈಲುಗಳು ಸಂಚಾರ ನಡೆಸುತ್ತಿವೆ. 8 ಬೋಗಿಗಳನ್ನು ಹೊಂದಿರುವ ರೈಲುಗಳು ಭಾನುವಾರ ಹೊರತುಪಡಿಸಿ ಉಳಿದ ದಿನ ಸಂಚಾರ ನಡೆಸಲಿವೆ" ಎಂದು ಹೇಳಿದ್ದಾರೆ.

ಹುಬ್ಬಳ್ಳಿ ವಲಯದಿಂದ ಮೊದಲ ಡೆಮು ರೈಲು; ಯಾವ ಮಾರ್ಗ? ಹುಬ್ಬಳ್ಳಿ ವಲಯದಿಂದ ಮೊದಲ ಡೆಮು ರೈಲು; ಯಾವ ಮಾರ್ಗ?

ಕೋಲಾರ-ಬಂಗಾರಪೇಟೆ ರೈಲು, ಕೋಲಾರ-ಬೆಂಗಳೂರು ಮಾರ್ಗದಲ್ಲಿ ಸಂಚಾರ ನಡೆಸುವ ಡೆಮು ರೈಲು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಬಳಿಯ ಏರ್‌ಪೋರ್ಟ್ ರೈಲ್ವೆ ಹಾಲ್ಟ್‌ ಸ್ಟೇಷನ್‌ನಲ್ಲಿ ನಿಲುಗಡೆಗೊಳ್ಳಲಿವೆ. ಹಲವು ತಿಂಗಳುಗಳಿಂದ ಏರ್‌ಪೋರ್ಟ್ ರೈಲ್ವೆ ಹಾಲ್ಟ್‌ ಸ್ಟೇಷನ್‌ಗೆ ರೈಲು ಸಂಪರ್ಕ ಸ್ಥಗಿತಗೊಂಡಿತ್ತು.

ಯಶವಂತಪುರ-ತುಮಕೂರು ನಡುವೆ ಓಡಲಿವೆ ಹೆಚ್ಚುವರಿ ರೈಲು ಯಶವಂತಪುರ-ತುಮಕೂರು ನಡುವೆ ಓಡಲಿವೆ ಹೆಚ್ಚುವರಿ ರೈಲು

ರೈಲು ಸಂಚಾರದ ಮಾಹಿತಿ

ರೈಲು ಸಂಚಾರದ ಮಾಹಿತಿ

ನವೆಂಬರ್ 8 ರಿಂದ 11ರ ತನಕ ಬೆಂಗಳೂರು ರೈಲು ವಿಭಾಗ 8 ಡೆಮು ರೈಲುಗಳ ಸಂಚಾರವನ್ನು ಆರಂಭಿಸಲಿದೆ. ಬೆಂಗಳೂರು ಕಂಟೋನ್ಮೆಂಟ್-ಕೋಲಾರ (06381) ನವೆಂಬರ್ 8ರಿಂದ ಸಂಚಾರ ನಡೆಸಲಿದೆ. ಕೋಲಾರ-ಕಂಟೋನ್ಮೆಂಟ್ (06382) ನವೆಂಬರ್ 10ರಿಂದ ಸಂಚರಿಸಲಿದೆ.

ನವೆಂಬರ್ 11 ರಿಂದ ಚನ್ನಪಟ್ಟಣ-ಕೋಲಾರ (06383), ಕೋಲಾರ-ಚನ್ನಪಟ್ಟಣ (06384) ಸಂಚಾರ ನಡೆಸಲಿದೆ. ನವೆಂಬರ್ 10 ರಿಂದ ಬಂಗಾರಪೇಟೆ-ಕೋಲಾರ (06385), ಕೋಲಾರ-ಬಂಗಾರಪೇಟೆ (06386), ನವೆಂಬರ್ 10 ರಿಂದ ಕೋಲಾರ-ಕಂಟೋನ್ಮೆಂಟ್ (03688) ರೈಲುಗಳು ಸಂಚಾರ ನಡೆಸಲಿವೆ.

ವಿಮಾನ ನಿಲ್ದಾಣದ ರೈಲು ವೇಳಾಪಟ್ಟಿ

ವಿಮಾನ ನಿಲ್ದಾಣದ ರೈಲು ವೇಳಾಪಟ್ಟಿ

ಡೆಮು ರೈಲುಗಳು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಬಳಿಯ ಏರ್‌ಪೋರ್ಟ್ ರೈಲ್ವೆ ಹಾಲ್ಟ್‌ ಸ್ಟೇಷನ್‌ನಲ್ಲಿ ನಿಲುಗಡೆಗೊಳ್ಳಲಿವೆ. ಚನ್ನಪಟ್ಟಣ-ಕೋಲಾರ (06383) ರೈಲು ಸಂಜೆ 4.50ಕ್ಕೆ ಚನ್ನಪಟ್ಟಣದಿಂದ ಹೊರಡಲಿದ್ದು, ಏರ್‌ಪೋರ್ಟ್ ರೈಲ್ವೆ ಹಾಲ್ಟ್‌ ಸ್ಟೇಷನ್‌ಗೆ ಸಂಜೆ 7.07ಕ್ಕೆ ತಲುಪಲಿದೆ. ಜ್ಞಾನ ಭಾರತಿ ಹಾಲ್ಟ್, ಕೆಎಸ್ಆರ್‌ ಬೆಂಗಳೂರು, ಯಶವಂತಪುರ, ಯಲಹಂಕ ಮಾರ್ಗವಾಗಿ ಸಾಗುವ ರೈಲು ಕೋಲಾರಕ್ಕೆ ರಾತ್ರಿ 9.30ಕ್ಕೆ ತಲುಪಲಿದೆ.

ವಿಮಾನ ನಿಲ್ದಾಣಕ್ಕೆ ರೈಲು

ವಿಮಾನ ನಿಲ್ದಾಣಕ್ಕೆ ರೈಲು

ಕೋಲಾರದಿಂದ ಬೆಳಗ್ಗೆ 6.15ಕ್ಕೆ ಹೊರಡುವ ರೈಲು ನಂಬರ್ 06384 ಬೆಳಗ್ಗೆ 8.22ಕ್ಕೆ ಏರ್‌ಪೋರ್ಟ್ ರೈಲ್ವೆ ಹಾಲ್ಟ್‌ ಸ್ಟೇಷನ್‌ ತಲುಪಲಿದೆ. 9.40ಕ್ಕೆ ಮೆಜೆಸ್ಟಿಕ್‌ನ ಕೆಎಸ್ಆರ್‌ ಬೆಂಗಳೂರು ರೈಲು ನಿಲ್ದಾಣಕ್ಕೆ ಆಗಮಿಸಲಿದೆ.

ಕೆಎಸ್ಆರ್ ಬೆಂಗಳೂರು-ಕೋಲಾರ ವಯಾ ಕಂಟೋನ್ಮೆಂಟ್ ರೈಲು (06387) ಕೆಎಸ್‌ಆರ್‌ ಬೆಂಗಳೂರು ನಿಲ್ದಾಣದಿಂದ ಬೆಳಗ್ಗೆ 8.35ಕ್ಕೆ ಹೊರಡಲಿದೆ. ಏರ್‌ಪೋರ್ಟ್ ರೈಲ್ವೆ ಹಾಲ್ಟ್‌ ಸ್ಟೇಷನ್‌ಗೆ 9.48ಕ್ಕೆ ತಲುಪಲಿದೆ.

ಕೋಲಾರದಿಂದ 2 ಗಂಟೆಗೆ ಹೊರಡುವ ರೈಲು ನಂಬರ್ 06388 ಏರ್‌ಪೋರ್ಟ್ ರೈಲ್ವೆ ಹಾಲ್ಟ್‌ ಸ್ಟೇಷನ್‌ಗೆ 4.08ಕ್ಕೆ ತಲುಪಲಿದೆ.

Recommended Video

Pakistanದಲ್ಲಿ Petrol ಬೆಲೆ ಎಷ್ಟು ಗೊತ್ತಾ | Oneindia Kannada
ರೈಲು ಸಂಚಾರ ರದ್ದುಗೊಂಡಿತ್ತು

ರೈಲು ಸಂಚಾರ ರದ್ದುಗೊಂಡಿತ್ತು

ನೈಋತ್ಯ ರೈಲ್ವೆ 2021 ಜನವರಿಯಲ್ಲಿ ಏರ್‌ಪೋರ್ಟ್ ರೈಲ್ವೆ ಹಾಲ್ಟ್‌ ಸ್ಟೇಷನ್‌ಗೆ ರೈಲು ಸಂಚಾರ ಆರಂಭಿಸಿತ್ತು. ಆದರೆ ಪ್ರಯಾಣಿಕರ ಕೊರತೆ ಕಾರಣ ಏಪ್ರಿಲ್‌ನಲ್ಲಿ ಎಲ್ಲಾ 10 ರೈಲುಗಳನ್ನು ಸ್ಥಗಿತಗೊಳಿಸಲಾಗಿತ್ತು. ಜನವರಿ ಇಂದ ಏಪ್ರಿಲ್ ತನಕ 2098 ಪ್ರಯಾಣಿಕರು ಮಾತ್ರ ವಿಮಾನ ನಿಲ್ದಾಣಕ್ಕೆ ರೈಲಿನಲ್ಲಿ ಸಂಚಾರ ನಡೆಸಿದ್ದರು. ಬಳಿಕ ಕೋವಿಡ್ ಹರಡುವಿಕೆ ತಡೆಗೆ ಲಾಕ್‌ಡೌನ್ ಘೋಷಣೆ ಮಾಡಿದ ಕಾರಣದಿಂದ ರೈಲು ಸಂಚಾರ ಆರಂಭಗೊಂಡಿರಲಿಲ್ಲ.

English summary
Railway board approved to re-introduction of 8 DEMU trains. From November 8 train will run Bengaluru, Kolar, Chikkaballapur, Bangarpet and Channapatna and it will also connects the KIA Halt station.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X