ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಾನಮತ್ತ ಚಾಲನೆ: 793 ಪ್ರಕರಣ ದಾಖಲು

By Ashwath
|
Google Oneindia Kannada News

ಬೆಂಗಳೂರು, ಮೇ.26: ಬೆಂಗಳೂರು ಸಂಚಾರ ಪೊಲೀಸರು ಮದ್ಯಪಾನ ಮಾಡಿ ವಾಹನ ಚಲಾಯಿಸಿದ 793 ವಾಹನ ಸವಾರರ ಚಾಲನಾ ಪತ್ರ ಅಮಾನತು ಮಾಡಲು ಸಾರಿಗೆ ಇಲಾಖೆಗೆ ಶಿಫಾರಸ್ಸು ಮಾಡಿದ್ದಾರೆ.

ಸಂಚಾರ ಪೊಲೀಸರು ಮೇ.24, ಶನಿವಾರ ನಗರದ 109 ಸ್ಥಳಗಳಲ್ಲಿ ರಾತ್ರಿ 9ರಿಂದ 2 ಗಂಟೆವರೆಗೂ ವಿಶೇಷ ಕಾರ್ಯಾಚರಣೆ ನಡೆಸಿ 10,639 ವಾಹನಗಳ ತಪಾಸಣೆ ಮಾಡಿದ್ದರು.[ಮದ್ಯಪಾನ ತಪಾಸಣೆ: ಪೊಲೀಸರಿಗೆ ಡಿಕ್ಕಿ ಹೊಡೆದ ಟೆಕ್ಕಿ]

drunk and drive
ಈ ತಪಾಸಣೆ ವೇಳೆ 1 ಬಸ್, 18 ಲಾರಿ, 29 ಆಟೋ, 93 ಕಾರು, 625 ದ್ವಿಚಕ್ರ ವಾಹನ, 12 ಮ್ಯಾಕ್ಸಿ ಕ್ಯಾಬ್ ಹಾಗೂ 15 ಟೆಂಪೋ ಚಾಲಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.[ಈ ಟ್ರಾಫಿಕ್‌ ಪೊಲೀಸ್‌ ಅಂದ್ರೆ ಜನರಿಗೆ ಅಚ್ಚುಮೆಚ್ಚು]

ರಾಜಾಜಿನಗರ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯೊಂದರಲ್ಲೇ 48 ಪ್ರಕರಣಗಳು ದಾಖಲಾಗಿದೆ. ಆಲ್ಕೋ ಮೀಟರ್‌ ಮೂಲಕ ತಪಾಸಣೆ ನಡೆಸಿದಾಗ ನಾಲ್ಕು ಮಂದಿ ಚಾಲಕರ ಮದ್ಯ ಸೇವನೆ ಪ್ರಮಾಣ 550 ಮಿ.ಗ್ರಾಂನಷ್ಟಿತ್ತು.

ಈ ಎಲ್ಲಾ ಸವಾರರ ವಾಹನ ಪರವಾನಗಿಯನ್ನು ಅಮಾನತಿನಲ್ಲಿಡುವಂತೆ ಸಾರಿಗೆ ಇಲಾಖೆಗೆ ಶಿಫಾರಸು ಮಾಡಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

English summary
Bangalore traffic police undertook a five-hour-long drive to crackdown on cases of drink and drive in the city on Saturday night and booked 793 offenders. The drive, which started at 9 pm and ended at 2 am, took place at 117 places in city and a total of 10,639 motorists were checked for alcohol consumption.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X