ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರೊನಾ; ಬೆಂಗಳೂರಿನ ಆಸ್ಪತ್ರೆಗಳಲ್ಲಿ 78% ಹಾಸಿಗೆಗಳು ಖಾಲಿ...

|
Google Oneindia Kannada News

ಬೆಂಗಳೂರು, ಮೇ 31: ಬೆಂಗಳೂರಿನಲ್ಲಿ ಕೊರೊನಾ ಪ್ರಕರಣಗಳು ಕ್ರಮೇಣ ತಗ್ಗುತ್ತಿದ್ದು, ಆಸ್ಪತ್ರೆಗಳಲ್ಲಿ ಹಾಸಿಗೆಯ ಲಭ್ಯತೆ ಹೆಚ್ಚಿದೆ ಹಾಗೂ ಆಸ್ಪತ್ರೆಗೆ ಸೇರುವವರ ಸಂಖ್ಯೆಯಲ್ಲಿಯೂ ಇಳಿಕೆಯಾಗಿರುವುದಾಗಿ ತಿಳಿದುಬಂದಿದೆ.

ಬಿಬಿಎಂಪಿ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಮಾಹಿತಿ ಪ್ರಕಾರ ಸದ್ಯಕ್ಕೆ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸಾಕಷ್ಟು ಬೆಡ್‌ಗಳು ಲಭ್ಯವಿದ್ದು, ಪರಿಸ್ಥಿತಿ ಮುಂಚಿಗಿಂತ ಸುಧಾರಣೆ ಕಂಡುಬಂದಿದೆ ಎನ್ನಲಾಗುತ್ತಿದೆ. ಕೋವಿಡ್ ಜನರಲ್ ಬೆಡ್‌ಗಳ ಸಂಖ್ಯೆ ಹೆಚ್ಚಿರುವುದಾಗಿ ತಿಳಿದುಬಂದಿದೆ. ಸದ್ಯಕ್ಕೆ 7,195 ಹಾಸಿಗೆಗಳ ಪೈಕಿ 5,624 (78.1%) ಹಾಸಿಗೆಗಳು ಲಭ್ಯವಿವೆ ಎಂದು ತಿಳಿದುಬಂದಿದೆ.

ಕೋವಿಡ್ 19: ರಾಜ್ಯದ 23 ಜಿಲ್ಲೆಗಳಲ್ಲಿ ಏರುಗತಿಯಲ್ಲಿದೆ ಮರಣ ಪ್ರಮಾಣಕೋವಿಡ್ 19: ರಾಜ್ಯದ 23 ಜಿಲ್ಲೆಗಳಲ್ಲಿ ಏರುಗತಿಯಲ್ಲಿದೆ ಮರಣ ಪ್ರಮಾಣ

ಆಮ್ಲಜನಕ ಬೆಂಬಲಿತ 4945 ಬೆಡ್‌ಗಳ ಪೈಕಿ 2098 ಬೆಡ್‌ಗಳು ಲಭ್ಯವಿವೆ. ಆದರೆ ಐಸಿಯು ಹಾಗೂ ವೆಂಟಿಲೇಟರ್ ಒಳಗೊಂಡ ಐಸಿಯು ಬೆಡ್‌ಗಳ ಲಭ್ಯತೆ ಅಷ್ಟಾಗಿ ಇಲ್ಲ. 589 ಐಸಿಯು ಬೆಡ್‌ಗಳ ಪೈಕಿ 20 ಬೆಡ್‌ಗಳು ಹಾಗೂ ವೆಂಟಿಲೇಟರ್ ಹೊಂದಿರುವ 637 ಐಸಿಯು ಬೆಡ್‌ಗಳ ಪೈಕಿ ಕೇವಲ 10 ಹಾಸಿಗೆಗಳು ಲಭ್ಯವಿರುವುದಾಗಿ ತಿಳಿದುಬಂದಿದೆ.

78 Percent Hospital Beds Vacant In Bengaluru

ನಗರದ ರೇನ್‌ಬೋ ಮಕ್ಕಳ ಆಸ್ಪತ್ರೆ, ಆನೇಕಲ್‌ನ ಸರ್ಕಾರಿ ಆಸ್ಪತ್ರೆ, ಕೆಸಿ ಜನರಲ್ ಆಸ್ಪತ್ರೆ, ಆಕ್ಸ್‌ಫರ್ಡ್ ಮೆಡಿಕಲ್ ಕಾಲೇಜು ಆಸ್ಪತ್ರೆ ಹಾಗೂ ರಿಸರ್ಚ್ ಸೆಂಟರ್, ಡಾ. ಬಿಆರ್ ಅಂಬೇಡ್ಕರ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ತಲಾ ಒಂದು ಬೆಡ್‌ ಲಭ್ಯವಿದೆ.

ಖಾಸಗಿ ಆಸ್ಪತ್ರೆಗಳಲ್ಲಿ 30% ತಗ್ಗಿದ ಬೇಡಿಕೆ: ಕೆಲವು ರೋಗಿಗಳು 15-20 ದಿವಸಗಳ ಕಾಲ ವೆಂಟಿಲೇಟರ್ ಬೆಂಬಲಿತವಾಗಿದ್ದಾರೆ. ಗಂಭೀರವಾದ ಕೊರೊನಾ ಪ್ರಕರಣಗಳಲ್ಲಿ ಗುಣಮುಖವಾಗುವ ಪ್ರಕ್ರಿಯೆ ದೀರ್ಘಾವಧಿಯದ್ದಾಗಿದೆ ಎಂದು ಬೆಂಗಳೂರು ಮೆಡಿಕಲ್ ಕಾಲೇಜು ಹಾಗೂ ಸಂಶೋಧನಾ ಸಂಸ್ಥೆಯ ಡೀನ್ ಹಾಗೂ ನಿರ್ದೇಶಕರಾದ ಡಾ. ಸಿ.ಆರ್. ಜಯಂತಿ ಹೇಳುತ್ತಾರೆ. ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಬೆಡ್‌ಗಳಿಗೆ ಬೇಡಿಕೆಯು 30% ಕಡಿಮೆಯಾಗಿದೆ ಎಂದು ಖಾಸಗಿ ಆಸ್ಪತ್ರೆ ಹಾಗೂ ನರ್ಸಿಂಗ್ ಹೋಂ ಅಸೋಸಿಯೇಷನ್ ಅಧ್ಯಕ್ಷ ಡಾ. ಎಚ್‌.ಎಂ. ಪ್ರಸನ್ನ ಮಾಹಿತಿ ನೀಡಿದ್ದಾರೆ.

ಐಸಿಯು ಬೆಡ್‌ಗಳು ಸಂಪೂರ್ಣ ಭರ್ತಿಯಾಗಿವೆ. ಹೈ ಡಿಪೆಂಡೆನ್ಸಿ ಯುನಿಟ್ ಬೆಡ್‌ಗಳ ಪೈಕಿ 20% ಖಾಲಿ ಇವೆ ಎಂದು ಅವರು ಹೇಳಿದ್ದಾರೆ.

Recommended Video

World No Tobacco Day: ವಿಶ್ವ ತಂಬಾಕು ದಿನದ ವಿಶೇಷ ಮಾಹಿತಿ !! | Oneindia Kannada

ಕಳೆದ 10-15 ದಿನಗಳಿಂದ ಹಾಸಿಗೆಗಳ ಲಭ್ಯತೆ ಹೆಚ್ಚಾಗಿದೆ. ಕ್ರಮೇಣ ಪ್ರಕರಣಗಳು ತಗ್ಗುತ್ತಿರುವುದು ಇದಕ್ಕೆ ಕಾರಣವಾಗಿದೆ ಎಂದು ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ತಿಳಿಸಿದ್ದಾರೆ. 28 ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಬಹುಪಾಲು ಹಾಸಿಗೆಗಳು ಖಾಲಿ ಉಳಿದಿವೆ ಎಂದು ಮಾಹಿತಿ ನೀಡಿದ್ದಾರೆ.

English summary
With a gradual decline in Covid-19 cases in Bengaluru, the hospital beds situation is improving in bengaluru, presently 78% of beds available in bengaluru
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X