ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಹರ್ ಘರ್ ತಿರಂಗಾ' ಅಭಿಯಾನ ಬಿಬಿಎಂಪಿಯಿಂದ; ಎಲ್ಲೆಲ್ಲಿ ಧ್ವಜ ಮಾರಾಟ?

|
Google Oneindia Kannada News

ಬೆಂಗಳೂರು, ಆಗಸ್ಟ್ 10: 75ನೇ ಸ್ವಾತಂತ್ರ‍್ಯ ಅಮೃತ ಮಹೋತ್ಸವದ ಅಂಗವಾಗಿ ಆಗಸ್ಟ್ 13 ರಿಂದ 15 ರವರೆಗೆ ಹಮ್ಮಿಕೊಂಡಿರುವ 'ಹರ್ ಘರ್ ತಿರಂಗಾ' ಅಭಿಯಾನದ ಪ್ರಯುಕ್ತ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಆಡಳಿತಗಾರರು ರಾಕೇಶ್ ಸಿಂಗ್‌ಗೆ ಪೂರ್ವ ವಲಯದ ಜಂಟಿ ಆಯುಕ್ತರಾದ ಶಿಲ್ಪಾರಿಗೆ ಹಣವನ್ನು ನೀಡಿ ಧ್ವಜವನ್ನು ಸ್ವೀಕರಿಸಿದರು.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್, ಯಲಹಂಕ ವಲಯದ ಜಂಟಿ ಆಯುಕ್ತರಾದ ಪಿ. ವಿ. ಪೂರ್ಣಿಮಾಗೆ ಹಣವನ್ನು ನೀಡಿ ಧ್ವಜವನ್ನು ಸ್ವೀಕರಿಸಿದರು. ಇದೇ ವೇಳೆ ಪೌರ ಕಾರ್ಮಿಕರು ಹಾಗೂ ಹಿರಿಯ ನಾಗರಿಕರಿಗೆ ರಾಷ್ಟ್ರಧ್ವಜವನ್ನು ನೀಡಿ ತಮ್ಮ ತಮ್ಮ ಮನೆಗಳಲ್ಲಿ ಆಗಸ್ಟ್ 13 ರಿಂದ 15 ರವರೆಗೆ ಧ್ವಜಗಳನ್ನು ಹಾರಿಸಲು ಕರೆ ನೀಡಿದರು.

ಎನ್‌ಇಪಿಯಿಂದ ಯುವಕರಿಗೆ ಭವಿಷ್ಯ ನಿರ್ಧರಿಸುವ ಸ್ವಾತಂತ್ರ: ಪಿಎಂ ಮೋದಿಎನ್‌ಇಪಿಯಿಂದ ಯುವಕರಿಗೆ ಭವಿಷ್ಯ ನಿರ್ಧರಿಸುವ ಸ್ವಾತಂತ್ರ: ಪಿಎಂ ಮೋದಿ

ವಲಯವಾರು ಪ್ರಮುಖ ಸ್ಥಳ/ ಮಾಲ್ ಗಳಲ್ಲಿ ಧ್ವಜಗಳ ಮಾರಾಟ ನಡೆಯಲಿದೆ. ಹರ್ ಘರ್ ತಿರಂಗಾ ಅಭಿಯಾನದ ಅಂಗವಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಆಯಾ ವಲಯ ಜಂಟಿ ಆಯುಕ್ತರ ಕಛೇರಿ, ವಾರ್ಡ್ ಕಛೇರಿಗಳಲ್ಲಿ ನಾಗರಿಕರಿಗೆ ಧ್ವಜಗಳನ್ನು ಮಾರಾಟ ಮಾಡಲಾಗುತ್ತಿದೆ. ಅಲ್ಲದೆ ವಲಯದ ಪ್ರಮುಖ ಸ್ಥಳ/ ಮಾಲ್ ಗಳಲ್ಲಿ ಧ್ವಜಗಳನ್ನು ಮಾರಾಟ ಮಾಡಲಾಗುತ್ತಿದೆ.

75th Swatantrya Amrita Mahotsava, BBMP selling flags on this places, Details here

ಎಲ್ಲೆಲ್ಲಿ ಧ್ವಜ ಮಾರಾಟ; ಪಶ್ಚಿಮ ವಲಯದ ಮಂತ್ರಿ ಮಾಲ್, ಒರಾಯನ್ ಮಾಲ್, ಲುಲೂ ಮಾಲ್(ಗ್ಲೋಬಲ್ ಮಾಲ್), ಗೋಪಾಲನ್ ಮಾಲ್. ಪೂರ್ವ ವಲಯ: ಗರುಡ ಮಾಲ್, ಸೆಂಟ್ರಲ್ ಮಾಲ್, 1 ಎಂ.ಜಿ ಮಾಲ್, ಎಂ.ಎಸ್ ಬಿಲ್ಡಿಂಗ್

ದಕ್ಷಿಣ ವಲಯದ ಲೈಫ್ ಸ್ಟೈಲ್ ಮಾಲ್, ಜಿಟಿ ವರ್ಲ್ಡ್ ಮಾಲ್, ಸ್ವಾಗತ್ ಗರುಡ ಮಾಲ್,
ಫೋರಂ ಮಾಲ್, ಮೋರ್ ಮಾರ್ಟ್, ಬುಲ್ ಟೆಂಪಲ್ ರಸ್ತೆ, ಗೋಪಾಲನ್ ಮಾಲ್, ಸೆಂಟ್ರಲ್ ಮಾಲ್

ಮಹದೇವಪುರ ವಲಯದಲ್ಲಿ ಫಿನೀಕ್ಸ್ ಮಾಲ್, ಫೋರಂ ಮಾಲ್, ವೈಟ್ ಫೀಲ್ಡ್, ಶಾಂತಿನಿಕೇತನ್ ಫೋರಮ್ ಮಾಲ್,

ಮೋರ್ ಮಾರ್ಕೆಟ್, ಮಾರತಹಳ್ಳಿ, ಟೋಟಲ್ ಮಾಲ್, ಬೆಳಂದೂರು, ಸೆಂಟ್ರಲ್ ಮಾಲ್, ಬೆಳಂದೂರು. ಕೆ. ಎಲ್.ಎಂ ಮಾಲ್, ಮಾರತಹಳ್ಳಿ, ಮಲ್ಟಿಪ್ಲೇಕ್ಸ್, ಮಾರತಹಳ್ಳಿ, ಬ್ರ್ಯಾಂಡ್ ಫ್ಯಾಕ್ಟರಿ, ಮಾರತಹಳ್ಳಿ, ಡಿ ಮಾರ್ಟ್, ಸಿದ್ದಾಪುರ,

ಹೈಪರ್ ಸಿಟಿ ಮಾಲ್, ತೂಬರ ಹಳ್ಳಿ, ಬ್ರೂಕ್ ಫೀಲ್ಡ್ ಮಾಲ್, ಕುಂದರಹಳ್ಳಿ, ಟಿನ್ ಫ್ಯಾಕ್ಟರಿ ಬಸ್ ನಿಲ್ದಾಣ.

75th Swatantrya Amrita Mahotsava, BBMP selling flags on this places, Details here

ಯಲಹಂಕ ವಲಯದಲ್ಲಿ ಆರ್.ಎಂ.ಝಡ್ ಮಾಲ್, ಯಲಹಂಕ. ಎಸ್ಟಿಮ್ ಮಾಲ್, ಎಲಿಮಂಟ್ಸ್ ಮಾಲ್,
ರಾಜರಾಜೇಶ್ವರಿನಗರ ವಲಯದಲ್ಲಿ ಜೆ. ಪಿ. ಪಾರ್ಕ್, ಗೋಪಾಲನ್ ಆರ್ಕೇಡ್, ರಾಯಲ್ ಮಾರ್ಟ್

ಬೊಮ್ಮನಹಳ್ಳಿ ವಲಯದಲ್ಲಿ ರಾಯಲ್ ಮಿನಾಕ್ಷಿ ಮಾಲ್, ವೆಗಾಸಿಟಿ ಮಾಲ್, ರಿಲಯನ್ಸ್ ಮಾರ್ಟ್.
ದಾಸರಹಳ್ಳಿ ವಲಯದಲ್ಲಿ ಐಕಿಯಾ, ರಂಗ ಮಂದಿರ, ಬಾಗಲಗುಂಟೆ.

ಇಲ್ಲಿ ಧ್ವಜವನ್ನು ಮಾರಾಟವನ್ನು ಮಾರಾಟ ಮಾಡುತ್ತಿದ್ದು. ಹರ್ ಘರ್ ತಿರಂಗಾಗಾಗಿ ಸಾರ್ವಜನಿಕರು ಧ್ವಜವನ್ನು ತೆಗೆದುಕೊಂಡು ತಮ್ಮ ಮನೆಯ ಮೇಲೆ ಆಗಸ್ಟ್ 13 ರಿಂದ 15ರ ವರೆಗೆ ಧ್ವಜವನ್ನು ಹಾರಿಸುವ ಮೂಲಕ ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ಆಚರಿಸಲು ಬಿಬಿಎಂಪಿ ಕೋರಿದೆ.

Recommended Video

Modi Declared Total Income and Assets: ಕಳೆದ ವರ್ಷಕ್ಕಿಂತ 84 ಲಕ್ಷ ಆಸ್ತಿ ಕಳೆದುಕೊಂಡ ಮೋದಿ *India |OneIndia

English summary
As part of the 75th Swatantrya Amrita Mahotsava, BBMP selling national flags every where in the context of the "Har Ghar Tiranga"(National Flag in Every Home) campaign from August 13 to 15,Know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X