ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ಶೇ.75ರಷ್ಟು ಜನರಲ್ಲಿ ಕೊವಿಡ್-19 ಪ್ರತಿಕಾಯ ಶಕ್ತಿ!

|
Google Oneindia Kannada News

ಬೆಂಗಳೂರು, ಸಪ್ಟೆಂಬರ್ 3: ಸಿಲಿಕಾನ್ ಸಿಟಿಯಲ್ಲಿ ಶೇ.75ರಷ್ಟು ಮಂದಿ ಕೊರೊನಾವೈರಸ್ ಸೋಂಕಿನ ವಿರುದ್ಧ ಹೋರಾಡಬಲ್ಲ ಪ್ರತಿಕಾಯ ಶಕ್ತಿಯನ್ನು ಹೊಂದಿರುತ್ತಾರೆ ಎಂಬುದು ಪಾಲಿಕೆ ಅಧಿಕಾರಿಗಳು ನಡೆಸಿದ ಸೆರೋಸರ್ವೇ ಫಲಿತಾಂಶದ ಪ್ರಾಥಮಿಕ ವರದಿಯಿಂದ ಗೊತ್ತಾಗಿದೆ.

ಕಳೆದ ಆಗಸ್ಟ್ ತಿಂಗಳಿನಲ್ಲಿ ಕೊವಿಡ್-19 ಲಸಿಕೆ ಪಡೆದ 1,000 ಮಂದಿ ಹಾಗೂ ಲಸಿಕೆಯನ್ನು ಪಡೆಯದ 1,000 ಜನರ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ವೇಳೆ 18 ವರ್ಷದೊಳಗಿನ ಶೇ.30ರಷ್ಟು, 18 ರಿಂದ 44 ವರ್ಷದ ಶೇ.50ರಷ್ಟು ಹಾಗೂ 45 ವರ್ಷ ಮೇಲ್ಪಟ್ಟ ಶೇ.20ರಷ್ಟು ಜನರ ಮಾದರಿಯನ್ನು ಪರೀಕ್ಷೆಗೆ ಬಳಸಿಕೊಳ್ಳಲಾಗಿತ್ತು. ಈ ಮಾದರಿಯನ್ನು ನಗರದ ವಿವಿಧ ಭಾಗಗಳಲ್ಲಿ ವಾಸಿಸುವ ಜನರಿಂದ ಸಂಗ್ರಹಿಸಲಾಗಿತ್ತು.

ಹಬ್ಬಗಳ ಆಚರಣೆಯಲ್ಲಿ ಮೈ ಮರೆತರೆ ಅಂಟುವುದು ಕೊರೊನಾವೈರಸ್ ಮಹಾಮಾರಿ ಹಬ್ಬಗಳ ಆಚರಣೆಯಲ್ಲಿ ಮೈ ಮರೆತರೆ ಅಂಟುವುದು ಕೊರೊನಾವೈರಸ್ ಮಹಾಮಾರಿ

ಬೆಂಗಳೂರಿನಲ್ಲಿ ಸಂಗ್ರಹಿಸಿದ ಲಸಿಕೆ ಸ್ವೀಕರಿಸಿದ ಹಾಗೂ ಲಸಿಕೆ ಪಡೆದುಕೊಳ್ಳದವರ ಮಾದರಿಯನ್ನು ಪರೀಕ್ಷಿಸಲಾಗಿತ್ತು. 1800 ಮಾದರಿಗಳಲ್ಲಿ 1400 ಜನರು ಕೊವಿಡ್-19 ವಿರುದ್ಧ ಹೋರಾಡುವ ಪ್ರತಿಕಾಯ ಶಕ್ತಿಯನ್ನು ಹೊಂದಿದ್ದಾರೆ. ಉಳಿದ 200 ಮಂದಿಯ ಮಾದರಿಯನ್ನು ಪಟ್ಟಿ ಮಾಡಲಾಗುತ್ತಿದೆ. ಅಂದರೆ ಲಸಿಕೆ ಪಡೆದವರು ಮತ್ತು ಪಡೆಯದವರಲ್ಲೂ ಶೇ.75 ರಿಂದ 80ರಷ್ಟು ಮಂದಿ ಪ್ರತಿಕಾಯ ಶಕ್ತಿಯನ್ನು ಹೊಂದಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಈ ಅಂಕಿ-ಸಂಖ್ಯೆಗಳು ಸೆರೋ ಸರ್ವೇ ನಡೆಸಿದ ಪ್ರಾಥಮಿಕ ವರದಿಯಲ್ಲಿ ಉಲ್ಲೇಖಿತವಾಗಿವೆ.

ಕೊವಿಡ್-19 ಲಸಿಕೆ ಪಡೆಯದವರಲ್ಲಿ ಪ್ರತಿಕಾಯ ಶಕ್ತಿ ಹೇಗೆ?

ಕೊವಿಡ್-19 ಲಸಿಕೆ ಪಡೆಯದವರಲ್ಲಿ ಪ್ರತಿಕಾಯ ಶಕ್ತಿ ಹೇಗೆ?

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಯ ಆರೋಗ್ಯ ಇಲಾಖೆ ವಿಶೇಷ ಆಯುಕ್ತ ಡಿ ರಂದೀಪ್ ಪ್ರಕಾರ, ಪ್ರತಿಕಾಯಗಳನ್ನು ಉತ್ಪಾದಿಸುವಲ್ಲಿ ಲಸಿಕೆಗಳ ಪರಿಣಾಮಕಾರಿತ್ವವನ್ನು ನಿರ್ಧರಿಸುವುದು ಮತ್ತು ಲಸಿಕೆ ಪಡೆದುಕೊಳ್ಳದ ಎಷ್ಟು ಮಂದಿ ಕೊರೊನಾವೈರಸ್ ಸೋಂಕಿಗೆ ಗುರಿಯಾಗಿದ್ದಾರೆ ಎಂಬುದನ್ನು ಅಳೆಯುವುದೇ ಈ ಸೆರೋಸಮೀಕ್ಷೆಯ ಉದ್ದೇಶವಾಗಿತ್ತು. ಕೊವಿಡ್-19 ಲಸಿಕೆಯನ್ನು ಪಡೆದ ಜನರಲ್ಲಿ ಸೂಕ್ತ ರೀತಿಯ ಪ್ರತಿಕಾಯ ವ್ಯವಸ್ಥೆ ಅಭಿವೃದ್ಧಿಯಾಗಿರುತ್ತದೆ ಎಂದು ಪ್ರಾಥಮಿಕ ಸಂಶೋಧನೆಗಳಿಂದ ತಿಳಿದು ಬಂದಿದೆ. ಇದೇ ಸಮಯದಲ್ಲಿ ಸೆರೋ ಹರಡುವಿಕೆ ಪ್ರಮಾಣ ಹೆಚ್ಚಾಗಿದ್ದು, ಎರಡನೇ ಅಲೆಯ ಸಂದರ್ಭದಲ್ಲೇ ನಗರದಲ್ಲಿ ಬಹುಪಾಲು ಮಂದಿಗೆ ಸೋಂಕು ತಗುಲಿರುವುದನ್ನು ಸೂಚಿಸುತ್ತದೆ. ಬೆಂಗಳೂರಿನಲ್ಲಿ ಕೊವಿಡ್-19 ಗಂಭೀರ ಸಮಸ್ಯೆಗಳ ಗಣನೀಯ ಇಳಿಕೆಗೆ ಇದೇ ಸೆರೋ ಹರಡುವಿಕೆ ಪ್ರಮಾಣ ಹೆಚ್ಚಾಗಿರುವುದೇ ಕಾರಣ ಎಂದು ಬಿಬಿಎಂಪಿ ನಂಬಿದೆ.

50 ದಿನಗಳಲ್ಲಿ ಹೊಸ ಕೊವಿಡ್-19 ಪ್ರಕರಣ ಸಂಖ್ಯೆ ಇಳಿಕೆ

50 ದಿನಗಳಲ್ಲಿ ಹೊಸ ಕೊವಿಡ್-19 ಪ್ರಕರಣ ಸಂಖ್ಯೆ ಇಳಿಕೆ

ಅಧಿಕೃತ ಮಾಹಿತಿಯ ಪ್ರಕಾರ, ಕಳೆದ 50 ದಿನಗಳಲ್ಲಿ ನಗರದಲ್ಲಿ ಹೊಸ ಕೋವಿಡ್ -19 ಪ್ರಕರಣಗಳ ಸಂಖ್ಯೆಯಲ್ಲಿ ಶೇ.19ರಷ್ಟು ಕಡಿಮೆಯಾಗಿದ್ದರೆ, ಒಟ್ಟು ಹೊಸ ಆಸ್ಪತ್ರೆಗೆ ದಾಖಲಾಗುವಿಕೆಯ ಪ್ರಮಾಣ ಶೇ.36ರಷ್ಟು ಕಡಿಮೆಯಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಡಿಎಚ್‌ಗೆ ಅಂತಿಮ ವರದಿಯನ್ನು ನೀಡಿದ್ದಾರೆ. ಖ್ಯಾತ ಸೂಕ್ಷ್ಮಾಣು ರೋಗಶಾಸ್ತ್ರಜ್ಞ ಡಾ ಟಿ ಜೇಕಬ್ ಜಾನ್ ನಿಜವಾದ ಜನಸಂಖ್ಯಾ ರೋಗನಿರೋಧಕ ಶಕ್ತಿ (ಹಿಂಡಿನ ರೋಗನಿರೋಧಕ ಶಕ್ತಿ ಎಂದು ಕರೆಯುತ್ತಾರೆ), ಸೆರೋಸರ್ವೇಗಳಿಂದ ಹಿಂದಿರುಗಿದ ಮೌಲ್ಯಗಳಿಗಿಂತ ಹೆಚ್ಚಿನದಾಗಿರುತ್ತದೆ ಎಂದು ತಿಳಿಸಿದ್ದಾರೆ.

ಕೊರೊನಾವೈರಸ್ ರೋಗ ನಿರೋಧಕ ಶಕ್ತಿ

ಕೊರೊನಾವೈರಸ್ ರೋಗ ನಿರೋಧಕ ಶಕ್ತಿ

"ಸಂಗ್ರಹಿಸಿದ ಮಾದರಿಗಳಲ್ಲಿ ಪ್ರತಿಕಾಯಗಳನ್ನು ಪತ್ತೆಹಚ್ಚುವಾಗ ಪ್ರಯೋಗಾಲಯದ ವಿಶ್ಲೇಷಣೆಗಳು ಒಂದು ನಿರ್ದಿಷ್ಟ ಹಂತದವರೆಗೆ ಮಾತ್ರ ಪರಿಣಾಮಕಾರಿಯಾಗಿರುತ್ತವೆ. ಪ್ರತಿಕಾಯಗಳು ಕೇವಲ ಶೇ.65 ರಿಂದ ಶೇ.80 ರಷ್ಟು ಧನಾತ್ಮಕ ಪ್ರಕರಣಗಳಲ್ಲಿ ಮಾತ್ರ ಪತ್ತೆಯಾಗುತ್ತವೆ ಎಂದು ದತ್ತಾಂಶಗಳು ಸೂಚಿಸುತ್ತದೆ. ಆದ್ದರಿಂದ ಬೆಂಗಳೂರಿನ ಸೆರೋಪ್ರೆವೆಲೆನ್ಸ್ ಶೇ. 75ಕ್ಕಿಂತ ಹೆಚ್ಚಿದ್ದರೆ, ನಿಜವಾದ ಜನಸಂಖ್ಯೆಯ ವಿನಾಯಿತಿ ಶೇ. 85ರ ಸನ್ನಿಹಿತದಲ್ಲಿದೆ," ಎಂದು ಡಾ ಜಾನ್ ಹೇಳಿದ್ದಾರೆ. ಈ ಮಟ್ಟಿನ ರೋಗ ನಿರೋಧಕ ಶಕ್ತಿಯು ಮೂರನೇ ಅಲೆಯ ಸಂದರ್ಭದಲ್ಲಿ ಕಡಿಮೆಯಾಗಿರುವ ಸಾಧ್ಯತೆಗಳಿರುತ್ತವೆ. ಆದಾಗ್ಯೂ, ಡೆಲ್ಟಾ ರೂಪಾಂತರಕ್ಕಿಂತ ಹೆಚ್ಚಿನ ಅಪಾಯಕಾರಿ ಹಾಗೂ ಹರಡುವಿಕೆ ಸಾಮರ್ಥ್ಯವನ್ನು ಹೊಂದಿರುವ ಹೊಸ ರೂಪಾಂತರ ಪತ್ತೆಯಾದರೆ ಮೂರನೇ ಅಲೆಯು ಸೃಷ್ಟಿಯಾಗಲಿದೆ ಎಂದು ಹೇಳಿದ್ದಾರೆ.

ಸಿಲಿಕಾನ್ ಸಿಟಿಯಲ್ಲಿ ಇಳಿಮುಖವಾಗಿರುವ ಕೊವಿಡ್-19

ಸಿಲಿಕಾನ್ ಸಿಟಿಯಲ್ಲಿ ಇಳಿಮುಖವಾಗಿರುವ ಕೊವಿಡ್-19

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 50 ದಿನಗಳಿಂದ ಕೊವಿಡ್-19 ಸೋಂಕಿತ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡು ಬಂದಿದೆ. ಪ್ರತಿನಿತ್ಯ ಸಾವಿರಾರು ಹೊಸ ಪ್ರಕರಣಗಳನ್ನು ದಾಖಲಿಸುತ್ತಿದ್ದ ಬೆಂಗಳೂರು ನಗರ ಇತ್ತೀಚಿಗೆ 400ರ ಗಡಿಯನ್ನು ದಾಟುತ್ತಿಲ್ಲ. ಕಳೆದ 24 ಗಂಟೆಗಳಲ್ಲಿ 319 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ.

Recommended Video

ಟೆಸ್ಟ್ ಮ್ಯಾಚ್ ನಡುವೆ ಕ್ಲಿಕ್ ಮಾಡಿದ ಫೋಟೋ ವೈರಲ್! | Oneindia Kannada

English summary
75 per cent Population Exposed to Coronavirus in Bengaluru: Serosurvey.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X