ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲಾಕ್ ಡೌನ್; ನಮ್ಮ ಮೆಟ್ರೋಗೆ ಎರಡು ತಿಂಗಳಿನಲ್ಲಿ 74 ಕೋಟಿ ನಷ್ಟ

|
Google Oneindia Kannada News

ಬೆಂಗಳೂರು, ಜೂನ್ 07 : ಲಾಕ್ ಡೌನ್ ಘೋಷಣೆ ಪರಿಣಾಮ ನಮ್ಮ ಮೆಟ್ರೋ ಯೋಜನೆಗಳು ವಿಳಂಬವಾಗಿದೆ. ಬಿಎಂಆರ್‌ಸಿಎಲ್‌ಗೆ ಆರ್ಥಿಕ ನಷ್ಟವೂ ಆಗಿದ್ದು, ಹೆಚ್ಚುವರಿ ಸಾಲವನ್ನು ನೀಡುವಂತೆ ಬ್ಯಾಂಕ್‌ಗಳಿಗೆ ಮನವಿ ಸಲ್ಲಿಸಲಾಗಿದೆ.

ಕೊರೊನಾ ವೈರಸ್ ಸೋಂಕು ಹರಡದಂತೆ ಲಾಕ್ ಡೌನ್ ಘೋಷಣೆ ಮಾಡಿದ ಬಳಿಕ ಮೆಟ್ರೋ ರೈಲುಗಳ ಸಂಚಾರ ಸ್ಥಗಿತವಾಗಿದೆ. ಇದರಿಂದಾಗಿ ಟಿಕೆಟ್ ಮತ್ತು ಇತರೆ ಮೂಲಗಳಿಂದ ಬರುತ್ತಿದ್ದ 74 ಕೋಟಿ ಆದಾಯ ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ನಷ್ಟವಾಗಿದೆ.

ಬೆಂಗಳೂರು; ನಮ್ಮ ಮೆಟ್ರೋ ಪ್ರಯಾಣಿಕರಿಗೆ ಮಾರ್ಗಸೂಚಿ ಬೆಂಗಳೂರು; ನಮ್ಮ ಮೆಟ್ರೋ ಪ್ರಯಾಣಿಕರಿಗೆ ಮಾರ್ಗಸೂಚಿ

ಲಾಕ್ ಡೌನ್ ಕಾರಣದಿಂದಾಗಿ ನಿರ್ಮಾಣ ಹಂತದ ಚಟುವಟಿಕೆ ಸಂಪೂರ್ಣವಾಗಿ ಸ್ಥಬ್ಧವಾಗಿತ್ತು. ಇದರಿಂದಾಗಿ ನಮ್ಮ ಮೆಟ್ರೋ 2ನೇ ಹಂತದ ಯೋಜನೆಯ ಕಾಮಗಾರಿ ವಿಳಂಬವಾಗಿದೆ ಎಂದು ಬಿಎಂಆರ್‌ಸಿಎಲ್ ಹೇಳಿದೆ.

ಲಾಕ್ ಡೌನ್ ಬಳಿಕ ನಮ್ಮ ಮೆಟ್ರೋ ಪ್ರಯಾಣಕ್ಕೆ ಸ್ಮಾರ್ಟ್‌ ಕಾರ್ಡ್ ಕಡ್ಡಾಯ ಲಾಕ್ ಡೌನ್ ಬಳಿಕ ನಮ್ಮ ಮೆಟ್ರೋ ಪ್ರಯಾಣಕ್ಕೆ ಸ್ಮಾರ್ಟ್‌ ಕಾರ್ಡ್ ಕಡ್ಡಾಯ

74 Crore Loss For BMRCL In Two Months

ಮಾರ್ಚ್‌ ತಿಂಗಳಿನಲ್ಲಿ 40 ಕೋಟಿ ಆದಾಯ ಬರಲಿದ ಎಂದು ಬಿಎಂಆರ್‌ಸಿಎಲ್ ಅಂದಾಜಿಸಿತ್ತು. ಆದರೆ, ಲಾಕ್ ಡೌನ್ ಘೋಷಣೆ ಪರಿಣಾಮ ಬಂದ ಆದಾಯ 24.35 ಕೋಟಿ ರೂ. ಮಾತ್ರ. 2019-20ರಲ್ಲಿ 430 ಕೋಟಿ ಆದಾಯ ಸಂಸ್ಥೆಗೆ ಬಂದಿದೆ. 445 ಕೋಟಿ ಆದಾಯದ ಗುರಿಯನ್ನು ಹೊಂದಲಾಗಿತ್ತು.

ಪ್ರತಿಭಟನೆ ಬಳಿಕ ಎಚ್ಚೆತ್ತ ಮೆಟ್ರೋ ನಿಗಮ: ಕಾರ್ಮಿಕರ ವೇತನ ಪಾವತಿ ಪ್ರತಿಭಟನೆ ಬಳಿಕ ಎಚ್ಚೆತ್ತ ಮೆಟ್ರೋ ನಿಗಮ: ಕಾರ್ಮಿಕರ ವೇತನ ಪಾವತಿ

ಈ ಆರ್ಥಿಕ ವರ್ಷದ ಎರಡು ತಿಂಗಳಿನಿಂದ ನಮ್ಮ ಮೆಟ್ರೋ ರೈಲಿನ ಸಂಚಾರವಿಲ್ಲ. ವಲಸೆ ಕಾರ್ಮಿಕರು ಸಹ ತವರು ರಾಜ್ಯಕ್ಕೆ ವಾಪಸ್ ಆಗಿರುವುದರಿಂದ ನಮ್ಮ ಮೆಟ್ರೋ 2ನೇ ಹಂತದ ಯೋಜನೆಯ ಕಾಮಗಾರಿ 3 ರಿಂದ 6 ತಿಂಗಳು ವಿಳಂಬವಾಗಲಿದೆ ಎಂದು ಅಂದಾಜಿಸಲಾಗಿದೆ.

ಸಂಸ್ಥೆಗೆ ಸರ್ಕಾರದಿಂದ ಬಿಡುಗಡೆಯಾಗಬೇಕಿರುವ ಅನುದಾನವೂ ತಕ್ಷಣ ಸಿಗುವುದಿಲ್ಲ. ಇದರಿಂದಾಗಿ ಬಿಎಂಆರ್‌ಸಿಎಲ್ 500 ಕೋಟಿ ಹೆಚ್ಚುವರಿ ಸಾಲ ನೀಡುವಂತೆ ಕೆಲವು ಬ್ಯಾಂಕ್‌ಗಳಿಗೆ ಮನವಿ ಮಾಡಿದೆ. ಅನುದಾನದ ಕಾರಣಕ್ಕೆ ಕಾಮಗಾರಿ ಸ್ಥಗಿತಗೊಳ್ಳುವುದು ಬೇಡ ಎಂದು ಬಿಎಂಆರ್‌ಸಿಎಲ್ ಬಯಸಿದೆ.

"ಬಿಎಂಆರ್‌ಸಿಎಲ್ ಈಗ ಯಾವುದೇ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿಲ್ಲ. ಮೆಟ್ರೋ ರೈಲು ಸಂಚಾರ ಆರಂಭವಾದ ಬಳಿಕವೂ ಸಾಮಾಜಿಕ ಅಂತರ ಕಾಪಾಡಬೇಕಾಗಿರುವುದರಿಂದ ಪ್ರಯಾಣಿಕರ ಸಂಖ್ಯೆಯೂ ಕಡಿಮೆಯಾಗಬಹುದು" ಎಂದು ವ್ಯವಸ್ಥಾಪಕ ನಿರ್ದೇಶಕ ಅಜಯ್ ಸೇಠ್ ಹೇಳಿದ್ದಾರೆ.

English summary
Bengaluru Metro Rail Corporation Limited (BMRCL) suffered 74 core loss in due to lock down in the month of April and May 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X