ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

73ನೇ ಗಣರಾಜೋತ್ಸವ ದಿನ: ರಾಜ್ಯಪಾಲರಿಂದ ಧ್ವಜಾರೋಹಣ, ಭಾಷಣ

|
Google Oneindia Kannada News

ಬೆಂಗಳೂರು, ಜನವರಿ 26: ಭಾರತ ದೇಶದಲ್ಲಿ ಸಂವಿಧಾನ ಜಾರಿಗೆ ಬಂದ ದಿನವನ್ನು ದೇಶದಾದ್ಯಂತ ಸಡಗರ, ಸಂಭ್ರಮದಿಂದ ಗಣರಾಜ್ಯೋತ್ಸವ ದಿನವನ್ನಾಗಿ ಆಚರಿಸಲಾಗುತ್ತಿದೆ.

ರಾಷ್ಟ್ರ ರಾಜಧಾನಿ ನವದೆಹಲಿಯ ರಾಜಪಥ್‌ನಲ್ಲಿ ಪರೇಡ್ ನಡೆಯುತ್ತಿದೆ. ದೇಶದಲ್ಲಿಂದು 73ನೇ ಗಣರಾಜೋತ್ಸವವನ್ನು ಸಂಭ್ರಮಿಸಲಾಗುತ್ತಿದ್ದು, ಇನ್ನು ಪರೇಡ್‌ಗೂ ಮುನ್ನ ಪ್ರಧಾನಿ ಮೋದಿ ವಾರ್ ಮೆಮೋರಿಯಲ್‌ಗೆ ಭೇಟಿ ನೀಡಲಿದ್ದಾರೆ.

ಇನ್ನು ಕರ್ನಾಟಕದಲ್ಲೂ ಗಣರಾಜ್ಯೋತ್ಸವ ದಿನಾಚರಣೆಯನ್ನು ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೋಟ್ ಧ್ವಜಾರೋಹಣ ನೆರವೇರಿಸಿ, ಭಾಷಣ ಮಾಡಿದರು.

73rd Republic Day: Flag-Hoasting By Governor Thawarchand Gehlot in Manek Shaw Parade Ground

ರಾಜ್ಯದ ಜನತೆಯನ್ನು ಉದ್ದೇಶಿಸಿ ರಾಜ್ಯಪಾಲ ಗೆಹ್ಲೋಟ್ ಭಾಷಣ
ಧ್ವಜಾರೋಹಣ ಬಳಿಕ ರಾಜ್ಯದ ಜನತೆಯನ್ನು ಉದ್ದೇಶಿಸಿ ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೋಟ್ ಭಾಷಣ ಮಾಡಿದ್ದಾರೆ. "ರಾಜ್ಯದ ಜನತೆಗೆ ಗಣರಾಜ್ಯೋತ್ಸವ ಶುಭಾಶಯ ಕೋರಿದ ಅವರು, 73ನೇ ಗಣರಾಜ್ಯೋತ್ಸವದ ಈ ಶುಭ ಸಂದರ್ಭದಲ್ಲಿ ಕರ್ನಾಟಕದ ಜನತೆಗೆ ನನ್ನ ಶುಭ ಕಾಮನೆಗಳು," ಎಂದು ಹೇಳಿದರು.

"ಎಂದಿಗೂ ಮಣಿಯದ ಮಾನವ ಚೈತನ್ಯ ಶಕ್ತಿಗೆ ಗಣರಾಜ್ಯೋತ್ಸವದ ಸಮಾರಂಭವನ್ನು ಅರ್ಪಿಸುತ್ತೇನೆ. 2021-22ರಲ್ಲಿ ಜಗತ್ತು ಸವಾಲನ್ನು ನಿಭಾಯಿಸಲು ಹೆಣಗುತ್ತಿರುವಾಗ ನಾವು ಕೋವಿಡ್-19ರ ವಿರುದ್ಧ ಅತ್ಯಂತ ಸಮರ್ಥವಾಗಿ ಹೋರಾಡಿದ್ದೇವೆ. ನಾವು ನವ ಚೈತನ್ಯ ಮತ್ತು ಆಶೋತ್ತರಗಳೊಂದಿಗೆ 2022ಕ್ಕೆ ಹೆಜ್ಜೆ ಇರಿಸಿದ್ದೇವೆ," ಎಂದರು.

"ನಮ್ಮ ಸರ್ಕಾರವು, ಕೋವಿಡ್-19ರ ಪರಿಣಾಮವನ್ನು ತಗ್ಗಿಸಲು ಹಗಲಿರುಳು ಶ್ರಮಿಸಿದೆ ಮತ್ತು ಜನತೆಯ ಸಹಕಾರದೊಂದಿಗೆ ನಾವು ಕೋವಿಡ್ ಪರಿಣಾಮವನ್ನು ಪರಿಣಾಮಕಾರಿಯಾಗಿ ತಗ್ಗಿಸುವಲ್ಲಿ ಯಶಸ್ವಿಯಾಗಿದ್ದೇವೆ. ಈ ಬಿಕ್ಕಟ್ಟನ್ನು ನಮ್ಮ ಸಾಮರ್ಥ್ಯ ವೃದ್ಧಿಸುವ ಮತ್ತು ಹೆಚ್ಚುವರಿ ಆರೋಗ್ಯ ಮೂಲ ಸೌಕರ್ಯವನ್ನು ಸೃಜಿಸುವ ಹಾಗೂ ಆಕ್ಸಿಜನ್ ಸಿಲಿಂಡರ್‌ಗಳು ಮತ್ತು ವೆಂಟಿಲೆಟರ್‌ಗಳ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವ ಒಂದು ಅವಕಾಶವನ್ನಾಗಿ ನಾವು ಬಳಸಿಕೊಂಡಿದ್ದೇವೆ," ಎಂದು ತಿಳಿಸಿದರು.

ಕೊರೊನಾ ಲಸಿಕೆ ರಫ್ತು
ಭಾರತವು ಎರಡು ಕೊರೊನಾ ಲಸಿಕೆಗಳನ್ನು ಉತ್ಪಾದಿಸಿರುವುದಲ್ಲದೇ ಈ ಲಸಿಕೆಗಳನ್ನು ಇತರ ದೇಶಗಳಿಗೂ ಸಹ ರಫ್ತು ಮಾಡುವಲ್ಲಿ ಯಶಸ್ವಿಯಾಗಿದೆ ಎಂಬುದು ಗಮನಾರ್ಹವಾದ ಅಂಶವಾಗಿದೆ. ಲಸಿಕೆಯು ಹಂತಹಂತವಾಗಿ ಪ್ರತಿಯೊಬ್ಬರಿಗೂ ತಲಪುವಂತೆ ನೋಡಿಕೊಳ್ಳಲು ನಾವು ಕೇಂದ್ರ ಸರ್ಕಾರದೊಂದಿಗೆ ನಿಕಟ ಸಹಯೋಗದಲ್ಲಿ ಕೆಲಸ ಮಾಡುತ್ತಿದ್ದೇವೆ.

ತಂತ್ರಜ್ಞಾನದಲ್ಲಿನ ಅತ್ಯುತ್ತಮ ಸಾಧನೆಗಾಗಿ ರಾಷ್ಟ್ರೀಯ ಪ್ರಶಸ್ತಿ
ಸಾಂಕ್ರಾಮಿಕ ರೋಗದ ಈ ಪರಿಸ್ಥಿತಿಯಲ್ಲಿ ಅವಿರತವಾಗಿ ಶ್ರಮಿಸಿದ ನಮ್ಮ ವೈದ್ಯರುಗಳಿಗೆ, ನರ್ಸ್‌ಗಳಿಗೆ, ಪೊಲೀಸ್ ಸಿಬ್ಬಂದಿಗಳಿಗೆ ಹಾಗೂ ಎಲ್ಲಾ ಆರೋಗ್ಯ ಮತ್ತು ಮುಂಚೂಣಿಯ ಕಾರ್ಯಕರ್ತರುಗಳಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇವೆ.

ಕೋವಿಡ್ ಹರಡುವಿಕೆಯನ್ನು ತಡೆಗಟ್ಟುವ ಮತ್ತು ಕೋವಿಡ್ ಸಮರ ಕೋಣೆಯ ಮೂಲಕ ಇದನ್ನು ಸಾಧಿಸುವ ದಿಸೆಯಲ್ಲಿ ಹೊಸ ತಂತ್ರಾಂಶವನ್ನು ಅಭಿವೃದ್ಧಿಪಡಿಸಿರುವುದಕ್ಕಾಗಿ ನಾನು ಸರ್ಕಾರಕ್ಕೆ ಅಭಿನಂದಿಸುತ್ತೇನೆ. ಭಾರತ ಸರ್ಕಾರವು ತಂತ್ರಜ್ಞಾನದಲ್ಲಿನ ಅತ್ಯುತ್ತಮ ಸಾಧನೆಗಾಗಿ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಿದೆ.

ಕೋವಿಡ್ ಸಮರ ಕೋಣೆಯ ನಿರ್ವಹಣೆ, ಸೋಂಕಿತರ ಗುರುತಿಸುವಿಕೆ ಮತ್ತು ಕ್ವಾರಂಟೈನ್ ನಿಗಾವಣೆ ಮೊದಲಾದಂಥ ವಿವಿಧ ಕ್ಷೇತ್ರಗಳನ್ನು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಪರಿಣಾಮಕಾರಿಯಾಗಿ ನಿರ್ವಹಿಸಲಾಗಿದೆ. ಮತ್ತು ಇದರಿಂದಾಗಿ ಜಗತ್ತಿನ ಇತರ ಭಾಗಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಸಾವಿನ ಸಂಖ್ಯೆ ಕಡಿಮೆಯಿದೆ ಎಂದು ರಾಜ್ಯಪಾಲರು ಭಾಷಣದಲ್ಲಿ ತಿಳಿಸಿದರು.

ವೈದ್ಯರ ನೇಮಕ
ಆರೋಗ್ಯ ಇಲಾಖೆಯು ವೈದ್ಯಾಧಿಕಾರಿಗಳು/ ತಂತ್ರಜ್ಞರು/ ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳ ಹುದ್ದೆಗಳನ್ನು ಭರ್ತಿ ಮಾಡಲು ವಿಶೇಷ ನೇಮಕಾತಿ ಸಮಿತಿಯನ್ನು ರಚಿಸಿದೆ ಮತ್ತು 6 ತಿಂಗಳ ಅವಧಿಯೊಳಗೆ 746 ತಂತ್ರಜ್ಞರು ಮತ್ತು 1,048 ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳನ್ನು ನೇಮಕ ಮಾಡಿದೆ.

ವಿವಿಧ ಕಾರ್ಮಿಕ ಅಧಿನಿಯಮಗಳ ಅಡಿ 12,946 ತಪಾಸಣೆಗಳನ್ನು ನಡೆಸಲಾಗಿರುತ್ತದೆ ಮತ್ತು ನಿಯಮಗಳನ್ನು ಉಲ್ಲಂಘಿಸಿದ ಮಾಲೀಕರ ವಿರುದ್ಧ 2018 ಪ್ರಕರಣಗಳನ್ನು ದಾಖಲಿಸಲಾಗಿದೆ. ವಿವಿಧ ಕಾರ್ಮಿಕ ನ್ಯಾಯಾಲಯಗಳಲ್ಲಿ ಇತ್ಯರ್ಥಗೊಳಿಸಲಾದ 2033 ಪ್ರಕರಣಗಳಲ್ಲಿ ದಂಡವಾಗಿ 21,19,309 ರೂಪಾಯಿಗಳನ್ನು ಸಂಗ್ರಹಿಸಲಾಗಿದೆ.

ವಲಸೆ ಕಾರ್ಮಿಕರು ಮತ್ತು ಇತರ ಕಾರ್ಮಿಕರ ಹಿತಾಸಕ್ತಿ
ಸರ್ಕಾರವು, ವಲಸೆ ಕಾರ್ಮಿಕರು ಮತ್ತು ಇತರ ಕಾರ್ಮಿಕರ ಹಿತಾಸಕ್ತಿಯನ್ನು ಕಾಪಾಡಿಕೊಂಡು ಬರುವಲ್ಲಿ ಸರಿಯಾದ ತೀರ್ಮಾನಗಳನ್ನು ತೆಗೆದುಕೊಂಡಿದೆ. ಕರ್ನಾಟಕ ಕಟ್ಟಡ ಮತ್ತು ಇತರ ಕಟ್ಟಡ ನಿರ್ಮಾಣ ಕಾರ್ಮಿಕರ ಕಲ್ಯಾಣ ನೋಂದಾಯಿಸಿಕೊಂಡಿದೆ. ಮಂಡಳಿಯು 15 ವಿವಿಧ 26.73 ಲಕ್ಷ ಕಾರ್ಮಿಕರನ್ನು ಯೋಜನೆಗಳಡಿ 10,10,485 ಫಲಾನುಭವಿಗಳಿಗೆ ರೂ. 1,136.05 ಮೊತ್ತದ ಸಹಾಯಧನವನ್ನು ಪಾವತಿಸಿದೆ ಮತ್ತು 8,390 ಕೋಟಿ ರೂಪಾಯಿಗಳನ್ನು ಸುಂಕವಾಗಿ ಸಂಗ್ರಹಿಸಲಾಗಿದೆ.

ನಗರೋತ್ಥಾನ ಇತ್ಯಾದಿಗಳನ್ನು ಒಳಗೊಂಡಂತೆ 14 ಅಮೃತ ಮಹೋತ್ಸವ ಕಾರ್ಯಕ್ರಮಗಳನ್ನು ರಾಜ್ಯವು ಘೋಷಿಸಿದೆ. ಕರ್ನಾಟಕವು 15 ಆಗಸ್ಟ್ 2023 ರವರೆಗೆ ಗುರಿಪಡಿಸಿದ ಫಲಿತಾಂಶಗಳೊಂದಿಗೆ ಅನುಷ್ಠಾನ ಮಾರ್ಗಸೂಚಿಯನ್ನು ಸಿದ್ಧಪಡಿಸಿದೆ.

16,176 ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ 4.41 ಕೋಟಿ ಮೊತ್ತ ವರ್ಗಾವಣೆ
ಮೊಬೈಲ್ ಮತ್ತು ತಂತ್ರಜ್ಞಾನ ಆಧಾರಿತ ಬೆಳೆ ಸಮೀಕ್ಷೆಯನ್ನು ಗ್ರಾಮ ಮಟ್ಟದ ಸ್ಥಳೀಯ ಯುವಕರ ಮೂಲಕ ಈಗಾಗಲೇ ಅನುಷ್ಠಾನಗೊಳಿಸಲಾಗಿದೆ. 2021-22ನೇ ಸಾಲಿನಲ್ಲಿ 12,76,868 ರೈತರು ಬೆಳೆ ಸಮೀಕ್ಷೆಯಡಿ ನೋಂದಾಯಿಸಿಕೊಂಡಿದ್ದಾರೆ ಮತ್ತು 256.95 ಲಕ್ಷ ಪ್ರದೇಶವನ್ನು ಬೆಳೆ ಸಮೀಕ್ಷೆಯ ಅಡಿ ತರಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿನ ರೈತರ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಲು ರೂ. 4.41 ಕೋಟಿ ಮೊತ್ತವನ್ನು 16,176 ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗಿದೆ.

ಉತ್ತರ ಕರ್ನಾಟಕ ಭಾಗದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಉಂಟಾದ ವಿಪತ್ತಿನ ಸವಾಲನ್ನು ಸಮರ್ಥವಾಗಿ ಎದುರಿಸಿ, ನಿಯಂತ್ರಿಸಲು ಶ್ರಮಿಸಿದ ನಮ್ಮ ಕ್ಷೇತ್ರ ಸಿಬ್ಬಂದಿ, ವಿಕೋಪ ನಿರ್ವಹಣಾ ತಂಡಗಳು ಮತ್ತು ಜಿಲ್ಲಾ ಮುಖ್ಯ ಅಧಿಕಾರಿಗಳಿಗೂ ಕೂಡ ನಾನು ವಂದನೆಗಳನ್ನು ಸಲ್ಲಿಸುತ್ತೇನೆ.

ತೋಟಗಾರಿಕೆ ಕ್ಷೇತ್ರದಲ್ಲಿ ಕರ್ನಾಟಕ ಪ್ರಥಮ ಸ್ಥಾನ
ಕರ್ನಾಟಕವು ಈಗಲೂ ಸಹ ತೋಟಗಾರಿಕೆ ಕ್ಷೇತ್ರದಲ್ಲಿ ಪ್ರಥಮ ಸ್ಥಾನದಲ್ಲಿದೆ ಮತ್ತು ಸರ್ಕಾರವು ವಿವಿಧ ತೋಟಗಾರಿಕಾ ಉತ್ಪನ್ನಗಳ ಸಾಗುವಳಿಯ ಕ್ಷೇತ್ರವನ್ನು 57.05 ಹೆಕ್ಟರ್ ಪ್ರದೇಶಕ್ಕೆ ವಿಸ್ತರಿಸಿದೆ. 18,777 ಹೆಕ್ಟರ್ ಪ್ರದೇಶದಲ್ಲಿ ಹನಿ ನೀರಾವರಿಯನ್ನು ಅನುಷ್ಠಾನಗೊಳಿಸಲಾಗಿದೆ ಮತ್ತು ಇದರಿಂದ 20,634 ಫಲಾನುಭವಿಗಳಿಗೆ ಪ್ರಯೋಜನವಾಗಿದೆ. 57.05 ಹೆಕ್ಟರ್ ಪ್ರದೇಶವನ್ನು ಕೀಟಗಳು ಮತ್ತು ರೋಗಗಳ ನಿಯಂತ್ರಣದಡಿಗೆ ತರಲಾಗಿದೆ. 3347 ಹೆಕ್ಟರ್ ಪ್ರದೇಶದಲ್ಲಿ ಸಂರಕ್ಷಿತ ಬೇಸಾಯ ಪದ್ಧತಿಯನ್ನು ಜಾರಿಗೆ ತರಲಾಗಿದೆ. 3440 ಜೇನುಪೆಟ್ಟಿಗೆಗಳನ್ನು ವಿತರಿಸಲಾಗಿದೆ. 786 ಸಂಸ್ಕರಣ ಮತ್ತು ಕೊಯ್ತು ನಂತರದ ನಿರ್ವಹಣಾ ಚಟುವಟಿಕೆಗಳನ್ನು ಕೈಗೆತ್ತಿಕೊಳ್ಳಲಾಗಿದೆ.

ಪೊಲೀಸ್ ಇಲಾಖೆಗಳ ವಿವಿಧ ಘಟಕಗಳಿಗೆ ಶಸ್ತ್ರಾಸ್ತ್ರಗಳು, ವಾಹನಗಳು ಮತ್ತು ವೈಜ್ಞಾನಿಕ ಉಪಕರಣ ಮುಂತಾದವುಗಳ ಖರೀದಿಗಾಗಿ ಆಧುನೀಕರಣ ಯೋಜನೆಯ ಅಡಿಯಲ್ಲಿ ಕೇಂದ್ರ ಸರ್ಕಾರದಿಂದ 14.23 ಕೋಟಿ ರೂ. ಮೊತ್ತವನ್ನು ಮತ್ತು ರಾಜ್ಯ ಸರ್ಕಾರದಿಂದ 13.39 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ವೈರ್‌ಲೆಸ್ ಉಪಕರಣಗಳ ಖರೀದಿಗಾಗಿ ಕೇಂದ್ರ ಸರ್ಕಾರದಿಂದ 9.14 ಕೋಟಿ ರೂ. ಮೊತ್ತವನ್ನು ಮತ್ತು ರಾಜ್ಯ ಸರ್ಕಾರದಿಂದ 6.09 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ.

3.18 ಲಕ್ಷ ಪ್ರತ್ಯೇಕ ಶೌಚಾಲಯಗಳನ್ನು ನಿರ್ಮಿಸಲಾಗಿದೆ. 397 ನಗರಗಳನ್ನು ಓಡಿಎಫ್ ಮಾಡಲಾಗಿದೆ. ಮೈಸೂರು ಮತ್ತು ಬಿಬಿಎಂಪಿ ಅಡಿಯಲ್ಲಿ ಬರುವ ಪ್ರದೇಶಗಳನ್ನು ಓಡಿಎಫ್ ಮಾಡಲಾಗಿದೆ. ಮೈಸೂರು ಮಹಾನಗರ ಪಾಲಿಕೆಯು ಕಸಮುಕ್ತ ನಗರಗಳ ಪೈಕಿ 5 ಸ್ಟಾರ್ ಶ್ರೇಣಿಯ ಸಾಧನೆ ಮಾಡಿದೆ.

ಬೆಂಗಳೂರು ಸ್ಮಾರ್ಟ್ ಸಿಟಿ ಯೋಜನೆ
ಬೆಂಗಳೂರು ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ 158.27 ಕಿ.ಮೀ. ಮಾರ್ಗವನ್ನು ಒಳಗೊಂಡ 77 ರಸ್ತೆಗಳನ್ನು ವೈಟ್ ಟಾಪಿಂಗ್‌ಗಾಗಿ ಆಯ್ಕೆ ಮಾಡಲಾಗಿದೆ. ಈ ಪೈಕಿ 83.91 ಕಿ.ಮೀ ರಸ್ತೆಯ ಕಾಮಗಾರಿಯು ಪೂರ್ಣಗೊಂಡಿದ್ದು, 31 ಮುಖ್ಯ ರಸ್ತೆಗಳನ್ನು ಅಭಿವೃದ್ಧಿಪಡಿಸಿ ಸಾರ್ವಜನಿಕ ಸಾರಿಗೆಗೆ ಲಭ್ಯಗೊಳಿಸಲಾಗಿದೆ.

42.3 ಕಿ.ಮೀ ಮಾರ್ಗದಲ್ಲಿ ಬೆಂಗಳೂರಿನ ನಮ್ಮ ಮೆಟ್ರೋ
ಬೆಂಗಳೂರು ಮೆಟ್ರೋ 42.3 ಕಿ.ಮೀ ಮಾರ್ಗದಲ್ಲಿ 40 ನಿಲ್ದಾಣಗಳನ್ನು ಒಳಗೊಂಡಂತೆ ಕಾರ್ಯನಿರ್ವಹಿಸುತ್ತಿದೆ. ಶೇ.62ರಷ್ಟು ಆರ್ಥಿಕ ಮತ್ತು ಶೇ.60ರಷ್ಟು ಭೌತಿಕ ಅಭಿವೃದ್ಧಿ ಸಾಧನೆಯಾಗಿದ್ದು, 6.12 ಕಿ.ಮೀ ಉದ್ದದ ಯಲಚೇನಹಳ್ಳಿಯಿಂದ ಸಿಲ್ಕ್ ಬೋರ್ಡ್‌ವರೆಗಿನ ಮಾರ್ಗ ಪೂರ್ಣಗೊಂಡು ಸಾರ್ವಜನಿಕ ಬಳಕೆಗೆ ಮುಕ್ತವಾಗಿದೆ.

ಮೈಸೂರು ರಸ್ತೆಯಿಂದ ಕೆಂಗೇರಿವರೆಗಿನ 7.53 ಕಿ.ಮೀ ಉದ್ದದ ಮಾರ್ಗವನ್ನು ಮುಕ್ತಗೊಳಿಸಲಾಗಿದೆ. ಸಾರ್ವಜನಿಕ ಬಳಕೆಗೆ ಬೆಳ್ಳಂದೂರು ಮತ್ತು ವರ್ತೂರು ಕೆರೆಗಳಲ್ಲಿನ ಮಾಲಿನ್ಯವನ್ನು ನಿರ್ಮೂಲನ ಮಾಡಲು ಕೋರಮಂಗಲ ಮತ್ತು ಚೆಳ್ಳಘಟ್ಟ ಕಣಿವೆಗಳಲ್ಲಿ ತ್ಯಾಜ್ಯ ನೀರು ಶುದ್ದೀಕರಣ ಘಟಕವನ್ನು ಮೇಲ್ದರ್ಜೆಗೇರಿಸುವ ಕ್ರಮವನ್ನು ಕೈಗೊಳ್ಳಲಾಗಿದೆ. ಈ ಉದ್ದೇಶಕ್ಕಾಗಿ ಸಮಾಲೋಚಕರನ್ನು ನೇಮಕಮಾಡಿದ್ದು ಟೆಂಡರ್‌ ಆಹ್ವಾನಿಸಲಾಗಿದೆ.

ಎರಡನೇ ಅಲೆಯ ಲಾಕ್‌ಡೌನ್ ಸಂದರ್ಭದಲ್ಲಿ 11,82,307 ಕಾರ್ಮಿಕರಿಗೆ ತಲಾ 2,000 ರೂಪಾಯಿಗಳನ್ನು ಪಾವತಿಸಲಾಗಿದೆ. ರೂಪಾಯಿಗಳಂತೆ 236.46 ಕೋಟಿ ರೂ. ಪಾವತಿಸಲಾಗಿದೆ. ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಯು 14,527 ಸಂಘಟಿತ ಕಾರ್ಮಿಕರು ಮತ್ತು ಅವರ ಅವಲಂಬಿತರಿಗೆ 628.16 ಕೋಟಿ ರೂಪಾಯಿಗಳನ್ನು ವಿತರಿಸಿದೆ ಎಂದು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಮಾತನಾಡಿದರು.

English summary
73rd Republic Day 2022: Flag-Hoasting By Karnataka Governor Thawarchand Gehlot in manek shaw Parade Ground in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X