ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ರಸ್ತೆಯಲ್ಲಿ ಪ್ರಯಾಣಿಕರನ್ನು ಬೆಚ್ಚಿಬೀಳಿಸುತ್ತಿದ್ದ 7 'ದೆವ್ವ'ಗಳ ಬಂಧನ!

|
Google Oneindia Kannada News

ಬೆಂಗಳೂರು, ನವೆಂಬರ್ 13: ದೆವ್ವ, ಭೂತಗಳಂತೆ ವೇಷಧರಿಸಿಕೊಂಡು ಪ್ರಯಾಣಿಕರನ್ನು ಬೆಚ್ಚಿ ಬೀಳಿಸಿದ್ದ ಬೆಂಗಳೂರಿನ 7 ಯೂಟ್ಯೂಬರ್ಸ್ ಅನ್ನು ಪೊಲೀಸರು ಬಂಧಿಸಿದ್ದಾರೆ.

ಯಶವಂತಪುರದ ಶರೀಫ್ ನಗರದಲ್ಲಿ ಭಾನುವಾರ ಮತ್ತು ಸೋಮವಾರ ರಾತ್ರಿ ಹಾದಿಯಲ್ಲಿ ಬರುವ ಪ್ರಯಾಣಿಕರನ್ನೆಲ್ಲ ಇದ್ದಕ್ಕಿದ್ದಂತೆ ಬಂದು ಈ ಏಳು ಜನ ಹೆದರಿಸುತ್ತಿದ್ದರು.

ದೆವ್ವಗಳು ಇವೆಯೇ? ಸದ್ಗುರು ಹೇಳಿದ ಸ್ವ-ಅನುಭವದೆವ್ವಗಳು ಇವೆಯೇ? ಸದ್ಗುರು ಹೇಳಿದ ಸ್ವ-ಅನುಭವ

ಕಳ್ಳತನ ಮಾಡುವುದಕ್ಕಾಗಿ ಪ್ರಯಾಣಿಕರನ್ನು ಹೆದರಿಸುತ್ತಿರಬಹುದು ಎಂಬ ಅನುಮಾನದ ಮೇಲೆ ಪೊಲೀಸರು ಅವರಲ್ಲಿ ಒಬ್ಬನನ್ನು ಬಂಧಿಸಿದ್ದರು. ಆತನ ಬಳಿ ವಶಪಡಿಸಿಕೊಂಡ ಫೋನ್ ನಲ್ಲಿ ಸಾಕಷ್ಟು ವಿಡಿಯೋಗಳು ಪತ್ತೆಯಾಗಿದ್ದು, ಅವುಗಳಲ್ಲಿ ಈ ಏಳು ಜನ ದೆವ್ವ, ಭೂತಗಳಂತೆ ವೇಷ ಧರಿಸಿಕೊಂಡ ವಿಡಿಯೋಗಳೇ ತುಂಬಿದ್ದವು. ಇವುಗಳನ್ನು ಯೂಟ್ಯೂಬ್ ನಲ್ಲಿ ಪೋಸ್ಟ್ ಮಾಡುವುದಕ್ಕಅಗಿಯೇ ಚಿತ್ರೀಕರಿಸಲಾಗುತ್ತಿತ್ತು.

7 YouTubers arrested for Dressing As Ghosts In Bengaluru

18- 25 ವರ್ಷ ವಯಸ್ಸಿನ ಈ ಏಳು ಜನರನ್ನೂ ಪೊಲೀಸರು ಬಂಧಿಸಿದ್ದಾರೆ. ಇವರಿಂದಾಗಿ ಎರಡು ದಿನ ದ್ವಿಚಕ್ರವಾಹನ, ಆಟೋಗಳಿಗೆ ಈ ಹಾದಿಯಲ್ಲಿ ಬರುವುದಕ್ಕೇ ಭಯವಾಗುವಂಥ ಸನ್ನಿವೇಶ ನಿರ್ಮಾಣವಾಗಿತ್ತು.

ಶ್ರೀರಂಗಪಟ್ಟಣದಲ್ಲಿ ದೆವ್ವದ ಭೀತಿ; ಸದ್ದು ಮಾಡುತ್ತಿರುವ ವಿಡಿಯೋದಲ್ಲೇನಿದೆ?ಶ್ರೀರಂಗಪಟ್ಟಣದಲ್ಲಿ ದೆವ್ವದ ಭೀತಿ; ಸದ್ದು ಮಾಡುತ್ತಿರುವ ವಿಡಿಯೋದಲ್ಲೇನಿದೆ?

"ಅವರು ತಮಾಷೆಗಾಗಿಯೇ ಇದನ್ನು ಮಾಡಿದ್ದರೂ ಮಧ್ಯರಾತ್ರಿ ರಸ್ತೆಯಲ್ಲಿ ವೇಗವಾಗಿ ಬರುವ ಪ್ರಯಾಣಿಕರನ್ನು ಹೀಗೆ ಹೆದರಿಸುವುದು ತೀರಾ ಅಪಾಯಕಾರಿ" ಎಂದು ಪೊಲೀಸರು ಅಭಿಪ್ರಾಯ ಪಟ್ಟಿದ್ದಾರೆ.

English summary
7 YouTubers arrested for dressing as ghosts and scaring unsuspecting commuters in Bengaluru,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X