ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜೆಇಇ ಕರ್ನಾಟಕ ಟಾಪರ್ಸ್: 10 ರಲ್ಲಿ 7 ವಿದ್ಯಾರ್ಥಿಗಳು ಬೆಂಗಳೂರಿನವರು

|
Google Oneindia Kannada News

ಬೆಂಗಳೂರು, ಅಕ್ಟೋಬರ್ 15: ಜೆಇಇ ಅಡ್ವಾನ್ಸ್‌ ಪರೀಕ್ಷೆಯಲ್ಲಿ ಕರ್ನಾಟಕದ ಅಗ್ರ 10 ಶ್ರೇಯಾಂಕಿತ ವಿದ್ಯಾರ್ಥಿಗಳ ಪೈಕಿ ಬೆಂಗಳೂರಿನ ಎಫ್‌ಐಐಟಿಜೆಇಇ ಕೇಂದ್ರದ 7 ವಿದ್ಯಾರ್ಥಿಗಳು ಇದ್ದಾರೆ ಎಂಬುದು ಹೆಮ್ಮೆಯ ವಿಚಾರವಾಗಿದೆ.

2021ರ ಜೆಇಇ ಅಡ್ವಾನ್ಸ್ಡ್ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದೆ. ಜೊತೆಗೆ ಅಂತಿಮ ಕೀ ಉತ್ತರಗಳನ್ನು ಸಹ ಬಿಡುಗಡೆ ಮಾಡಿದೆ. ಜೆಇಇ ಅಡ್ವಾನ್ಸ್ಡ್ ಪರೀಕ್ಷೆಯಲ್ಲಿ ದೆಹಲಿಯ ಐಐಟಿಯ ಮೃದುಲ್ ಅಗರ್​ವಾಲ್ 360ಕ್ಕೆ 348 ಅಂಕಗಳನ್ನು ಪಡೆಯುವ ಮೂಲಕ ಟಾಪ್ ಸ್ಥಾನ ಪಡೆದಿದ್ದಾರೆ.

ಜೆಇಇ ಅಡ್ವಾನ್ಸ್ಡ್‌ 2021 ಫಲಿತಾಂಶ ಪ್ರಕಟ: ಇಲ್ಲಿದೆ ಸಂಪೂರ್ಣ ಮಾಹಿತಿಜೆಇಇ ಅಡ್ವಾನ್ಸ್ಡ್‌ 2021 ಫಲಿತಾಂಶ ಪ್ರಕಟ: ಇಲ್ಲಿದೆ ಸಂಪೂರ್ಣ ಮಾಹಿತಿ

''ಕರ್ನಾಟಕದ ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವ ಹೆಚ್ಚಿದೆ. ಹೀಗಾಗಿ ಉನ್ನತ ಶ್ರೇಯಾಂಕ ಪಡೆಯುವಲ್ಲಿ ಯಶಸ್ವೊಯಾಗುತ್ತಿದ್ದಾರೆ. ಈ ವಿದ್ಯಾರ್ಥಿಗಳಲ್ಲಿ ಲಾಕ್‌ಡೌನ್‌ ಅಡಚಣೆಯಾಗಿಲ್ಲ. ಎಲ್ಲರೂ ಕೂಡ ನಮ್ಮ ವ್ಯವಸ್ಥಿತ ಯೋಜನೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರು. ಈಗ ಯುಶಸ್ಸು ಕೈ ಹಿಡಿದಿದೆ. ಕರ್ನಾಟಕದ ಹಲವು ವಿದ್ಯಾರ್ಥಿಗಳು ಅಗ್ರಶ್ರೇಯಾಂಕಗಳಲ್ಲಿ ಕಾಣಿಸಿಕೊಂಡಿರುವುದು ಸಂಭ್ರಮದ ವಿಚಾರ,''ಎಂದು ಎಫ್‌ಐಐಟಿಜೆಇಇ ಬೆಂಗಳೂರು ಕೇಂದ್ರದ ಮುಖ್ಯಸ್ಥರಾದ ಗೌರವ್‌ ಗೋಯಲ್ ಹೇಳಿದ್ದಾರೆ.

7 out of 10 State toppers are from FIITJEE Bangalore

2021ರ ಸಾಲಿನ ಜೆಇಇ ಅಡ್ವಾನ್ಸ್‌ ಪರೀಕ್ಷೆಯಲ್ಲಿ ಬೆಂಗಳೂರಿನ ಎಫ್‌ಐಐಟಿಜೆಇಇ (ಫಿಟ್‌ಜೀ) ಕೇಂದ್ರದ 103 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.

ಬೆಂಗಳೂರಿನ ಎಫ್‌ಐಐಟಿಜೆಇಇ (ಫಿಟ್‌ಜೀ) ಕೇಂದ್ರದ 10 ವಿದ್ಯಾರ್ಥಿಗಳು ಅಗ್ರ 1000ದ ಒಳಗಿನ ಶ್ರೇಯಾಂಕ ಪಡೆದಿದ್ದಾರೆ.

• ಪ್ರೇಮಾಂಕುರ್‌ ಸಿ -All India Rank - 54 (state rank 2)
• ಪ್ರಥಮ್‌ ಸಾಹು - AIR - 131 (state rank 3)
• ಉಧವ್ ವರ್ಮಾ - AIR - 164 (state rank 6)
• ಹಾರ್ದಿಕ್ ಅಗರ್ವಾಲ್ - AIR - 166 (state rank 7)
• ಮಿಹಿರ್ ದೇಶಪಾಂಡೆ - AIR - 182 (state rank 8)
• ಲಕ್ಷವಂತ್ ಬಾಲಚಂದ್ರನ್ - AIR - 188 (state rank 9)
• ಪ್ರಾಂಜಲ್ ಸಿಂಗ್ - AIR - 216 (state rank 10)

''ಯಾವುದೇ ವಿಷಯ ಅರ್ಥವಾಗದೇ ಇದ್ದರೆ ಪ್ರಶ್ನೆ ಮಾಡಿ ಎಂದು ಶಿಕ್ಷಕರು ಹೇಳಿಕೊಟ್ಟಿದ್ದಾರೆ. ಯಾವುದೇ ಗೊಂದಲ ಎದುರಾದರೂ ಅದನ್ನು ಬಗೆಹರಿಸುವಲ್ಲಿ ಅವರು ಮುಂದಿರುತ್ತಾರೆ. ನನಗೆ ವಾರಕ್ಕೊಂಡು ಪರೀಕ್ಷೆ ನೀಡುತ್ತಿದ್ದರು. ಪ್ರತಿ ಪಠ್ಯದ ಬಳಿಕ ವಿಶೇಷ ಪರೀಕ್ಷೆಗಳನ್ನು ನೀಡಿ ಅಭ್ಯಾಸ ಆಗುವಂತೆ ಮಾಡುತ್ತಿದ್ದರು. ಇದರಿಂದ ಯಾವುದೇ ಲೆಕ್ಕಾಚಾರಗಳನ್ನು ಸುಲಭವಾಗಿ ಬಗೆಹರಿಸುವುದು ನನಗೆ ಕರಗತವಾಯಿತು. ನನ್ನ ಕನಸು ನನಸಾಗಿಸಲು ನೆರವಾದ ಫಿಟ್‌ಜೀ ಸಂಸ್ಥೆಗೆ ಆಭಾರಿಯಾಗಿದ್ದೇನೆ,'' ಎಂದು ಟಾಪ್‌ ಸ್ಕೋರರ್‌ ಪ್ರೇಮಾಂಕುರ್‌ ಸಿ ಹೇಳಿದ್ದಾರೆ.

ಬೆಂಗಳೂರಿನ ಎಫ್‌ಐಐಟಿಜೆಇಇ (ಫಿಟ್‌ಜೀ) ಕೇಂದ್ರದ ವಿದ್ಯಾರ್ಥಿನಿ ರಿಯಾ ಮಹೇಶ್‌, ದೀರ್ಘಕಾಲದ ಕ್ಲಾಸ್‌ ರೂಮ್‌ ಯೋಜನೆಯ ಫಲಾನುಭವಿ ಆಗಿದ್ದು ಜೆಇಇ ಅಡ್ವಾನ್ಸ್‌ನಲ್ಲಿ AIR 1572 ಶ್ರೇಯಾಂಕ ಪಡೆದಿದ್ದಾರೆ.

ಜೆಇಇ ಅಡ್ವಾನ್ಸ್ಡ್ ಪರೀಕ್ಷೆಯ ಫಲಿತಾಂಶವನ್ನು (JEE Advanced Result 2021) ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ jeeadv.ac.in ಕ್ಲಿಕ್​ ಮಾಡುವ ಮೂಲಕ ಫಲಿತಾಂಶ ವೀಕ್ಷಿಸಬಹುದಾಗಿದೆ.

Recommended Video

IPL ಟ್ರೋಫಿ ಗೆಲ್ಲೋದಕ್ಕೆ ಅರ್ಹವಾಗಿರೋರು ನಾವಲ್ಲ ಎಂದ ಧೋನಿ!ಮತ್ಯಾರು? | Oneindia Kannada

ಜೆಇಇ ಮೇನ್​ ಅರ್ಹ ಅಭ್ಯರ್ಥಿಗಳು ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ (ಎನ್ಐಟಿ), ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ ಮತ್ತು ಇತರ ಸರ್ಕಾರಿ ಅನುದಾನಿತ ತಾಂತ್ರಿಕ ಸಂಸ್ಥೆಗಳ (ಜಿಎಫ್‌ಟಿಐ) ಪ್ರವೇಶಕ್ಕಾಗಿ ನಡೆಯುವ ಜಂಟಿ ಸೀಟು ಹಂಚಿಕೆ ಪ್ರಾಧಿಕಾರದ ದ ಕೌನ್ಸೆಲಿಂಗ್‌ನಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ. ಜೆಇಇ ಅಡ್ವಾನ್ಸ್ಡ್ 2021ರ ಫಲಿತಾಂಶವನ್ನು ಇಂದು ಘೋಷಿಸಲಾಗಿದೆ. JoSAA ಅಡಿಯಲ್ಲಿ ಮುಂದಿನ ಶೈಕ್ಷಣಿಕ ಚಟುವಟಿಕೆಗಳಿಗೆ ಅಭ್ಯರ್ಥಿ ಗಳ ನೋಂದಣಿ/ ಆಯ್ಕೆ ಪ್ರಕ್ರಿಯೆ ಅಕ್ಟೋಬರ್ 16ರಂದು ಆರಂಭವಾಗುತ್ತದೆ.

English summary
It’s a proud moment for FIITJEE Bangalore. 7 of their students have secured ranks in top 10 in Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X