ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿ: ನಗರದಲ್ಲಿ 7 ಲಕ್ಷ ಲೀಟರ್ ಹಾಲು ಶುದ್ಧವಲ್ಲ

By Srinath
|
Google Oneindia Kannada News

7 lakh liters of milk supplied in Bangalore is adulterated- BBMP corporators
ಬೆಂಗಳೂರು, ಅ.1: ಇಲ್ಲೊಂದು ಆತಂಕಕಾರಿ ಸಂಗತಿಯಿದೆ. ಏನಪ್ಪಾ ಅಂದರೆ ನಗರದಲ್ಲಿ ಪೂರೈಕೆಯಾಗುತ್ತಿರುವ ಬಹುತೇಕ ಹಾಲು ಪರಿಶುದ್ಧವಲ್ಲ. ಕುಡಿಯಲು ಅದು ಯೋಗ್ಯವಲ್ಲ.

ಹೌದು ಬೆಂಗಳೂರು ಮಹಾನಗರ ಪಾಲಿಕೆ ಸದಸ್ಯರೇ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ರಾಜಧಾನಿಯ ಮಹಾಜನತೆಗೆ ಒಟ್ಟು 7 ಕಂಪನಿಗಳು ಹಾಲನ್ನು ಪೂರೈಸುತ್ತವೆ. ಅವುಗಳ ಪೈಕಿ 5 ಕಂಪನಿಗಳ ಹಾಲು ರೆಡ್ ಜೋನ್ ನಲ್ಲಿವೆ. ಅಂದರೆ ಖಂಡಿತ ಅದು ಸೇವನೆಗೆ ಯೋಗ್ಯವಲ್ಲ.

ಹಾಗಾದರೆ ಯಾವುದವು ನಮಗಿಂತ ಕಳಪೆ/ ಕಲಬೆರಕೆ ಹಾಲು ಪೂರೈಸುತ್ತಿರುವ ಕಂಪನಿಗಳು ಎಂದಿರಾ? ಅವು ಹೀಗಿವೆ: 1. ಪ್ರಕೃತಿ ಟೋನ್ಡ್ ಮಿಲ್ಕ್, 2. ವಂಸಿ ಟೋನ್ಡ್ ಮಿಲ್ಕ್, 3. ಶಿವಶಕ್ತಿ ಟೋನ್ಡ್ ಮಿಲ್ಕ್, 4. ಮಿಲ್ಕಿ ವೆ ಟೋನ್ಡ್ ಮಿಲ್ಕ್, ಮತ್ತು 5. ಅಮೂಲ್ಯ ಟೋನ್ಡ್ ಮಿಲ್ಕ್.

ಪಾಲಿಕೆ ಸದಸ್ಯರು ಸ್ವತಃ ಒಟ್ಟು 7 ಕಂಪನಿಗಳು ವಿತರಿಸುವ ಹಾಲನ್ನು ಗುಣಮಟ್ಟ ಪರೀಕ್ಷೆಗೆ ಒಳಡಿಸಲಾಗಿ, ಅದರಲ್ಲಿ ಮೇಲಿನ ಐದೂ ಕಂಪನಿಗಳ ಹಾಲು ಕಳಪೆ ಮಟ್ಟದ್ದು ಎಂದು ಪರೀಕ್ಷೆ ಮೂಲಕ ಸಾಬೀತುಪಡಿಸಿದ್ದಾರೆ.

ಕಲಬೆರಕೆ ಹಾಲಿನ ಬಗ್ಗೆ ಪಾಳಿಕೆ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯ ಹರೀಶ್, ಒಟ್ಟು 7 ಕಂಪನಿಗಳು ವಿತರಿಸುವ ಹಾಲನ್ನು ನ್ಯಾಷನಲ್ ಡೈರು ರೀಸರ್ಚ್ ಸಂಸ್ಥೆಯಲ್ಲಿ ಗುಣಮಟ್ಟ ಪರೀಕ್ಷೆಗೆ ಒಳಪಡಿಸಲಾಯಿತು. ಆ ಪೈಕಿ 5 ಕಂಪನಿಗಳ ಹಾಲಿನಲ್ಲಿ ವಿಷಕಾರಕ ಅಂಶಗಳು ಇರುವುದು ಪತ್ತೆಯಾಗಿದೆ.

ಈ ಕಳಂಕಿತ ಖಾಸಗಿ ಸಂಸ್ಥೆಗಳು ಬೆಂಗಳೂರಿನಲ್ಲಿ ಭಾರಿ ಪ್ರಮಾಣದಲ್ಲಿ ಸುಮಾರು 7 ಲಕ್ಷ ಲೀಟರ್ ಮಾರಾಟ ಮಾಡುತ್ತವೆ. ಹಾಗಾಗಿ ಇವುಗಳ ವಿರುದ್ಧ ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸದಸ್ಯರು ಪಾಲಿಕೆ ಆಯುಕ್ತರನ್ನು ಆಗ್ರಹಿಸಿದರು.

ಇದಕ್ಕೆ ಉತ್ತರಿಸಿದ ಆಯುಕ್ತ ಲಕ್ಷ್ಮಿನಾರಾಯಣ ಅವರು ಕಲಬೆರಕೆ ಹಾಲು ನಿಯಂತ್ರಿಸುವ ಕೆಲಸ/ ಹೊಣೆಗಾರಿಕೆ BBMPಗೆ ಸೇರಿದ್ದಲ್ಲ. ಆದರೆ ಸಾರ್ವಜನಿಕ ಹಿತದೃಷ್ಟಿಯಿಂದ ಖಾಸಗಿ ಹಾಲು ಪೂರೈಕೆ ಕಂಪನಿಗಳ ಗುಣಮಟ್ಟ ದೋಷದ ಕುರಿತು ಪಾಲಿಕೆ ಸದಸ್ಯರು ಸಲ್ಲಿಸಿರುವ ವರದಿಯನ್ನು ಆರೋಗ್ಯ ಇಲಾಖೆ ಮತ್ತು ಆಹಾರ- ನಾಗರಿಕ ಪೂರೈಕೆ ಇಲಾಖೆಯ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.

ಆದರೆ ಗ್ರಾಹಕರೇ, ಪಾಲಿಕೆ/ ಆ ಇಲಾಖೆ/ ಈ ಇಲಾಖೆ ಕ್ರಮ ಕೈಗೊಳ್ಳುವ ಮೊದಲು ಈ '7 ಲಕ್ಷ ಲೀಟರ್ ಹಾಲು' ನಿಮ್ಮ ಮನೆಗೂ ಪೂರೈಕೆಯಾಗುತ್ತಿದ್ದರೆ ನಿಮ್ಮ ಎಚ್ಚರಿಕೆಯಲ್ಲಿ ನೀವಿರಿ.

English summary
7 lakh liters of milk supplied in Bangalore is adulterated- BBMP corporators. The shocking results were unearthed by the BBMP corporators when they put the milk supplied by 7 private companies. In fact the milk supplied by 5 private companies are adulterated.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X