ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸರ್ಕಾರಿ ನೌಕರರಿಗೆ ನಾಲ್ಕನೇ ಶನಿವಾರವೂ ರಜೆ ನೀಡಲು ಶಿಫಾರಸ್ಸು

By Manjunatha
|
Google Oneindia Kannada News

Recommended Video

ಸರ್ಕಾರೀ ನೌಕರರಿಗೆ 4ನೇ ಶನಿವಾರವೂ ರಜೆ ಸಿಗುವ ಸಾಧ್ಯತೆ | Oneindia Kannada

ಬೆಂಗಳೂರು, ಮೇ 01: ಆರನೇ ವೇತನ ಆಯೋಗವು ತನ್ನ 2ನೇ ಶಿಫಾರಸ್ಸನ್ನು ರಾಜ್ಯ ಮುಖ್ಯಕಾರ್ಯದರ್ಶಿ ರತ್ನಪ್ರಭಾ ಅವರಿಗೆ ಹಸ್ತಾಂತರಿಸಿದೆ. ನೀತಿ ಸಂಹಿತೆ ಮುಗಿದ ನಂತರ ಶಿಫಾರಸ್ಸುಗಳನ್ನು ಪರಿಶೀಲಿಸಲಾಗುವುದು ಎಂದು ರತ್ನಪ್ರಭಾ ಅವರು ಹೇಳಿದ್ದಾರೆ.

ಎಂ.ಆರ್‌.ಶ್ರೀನಿವಾಸ್ ಅಧ್ಯಕ್ಷತೆಯ ಆರನೇ ವೇತನ ಆಯೋಗವು ತನ್ನ ಮೊದಲ ಶಿಫಾರಸ್ಸನ್ನು ಇದೇ ವರ್ಷದ ಜನವರಿ 31ರಂದು ಸಲ್ಲಿಸಿತ್ತು. ವೇತನ ಹೆಚ್ಚಳ ಸಂಬಂಧಿಸಿದ ಮೊದಲ ಶಿಫಾರಸ್ಸನ್ನು ಸರ್ಕಾರ ಈಗಾಗಲೇ ಅನುಷ್ಠಾನಕ್ಕೆ ತಂದಿದೆ.

ಕೇಂದ್ರ ಸರ್ಕಾರಿ ನೌಕರರಿಗೆ ನಿರೀಕ್ಷೆಗಿಂತ ಹೆಚ್ಚಿನ ವೇತನ!ಕೇಂದ್ರ ಸರ್ಕಾರಿ ನೌಕರರಿಗೆ ನಿರೀಕ್ಷೆಗಿಂತ ಹೆಚ್ಚಿನ ವೇತನ!

500 ಪುಟಗಳ ಎರಡನೇ ವರದಿಯಲ್ಲಿ ಮುಖ್ಯವಾದ ಕೆಲವು ಶಿಫಾರಸ್ಸುಗಳನ್ನು ಮಾಡಿದ್ದು, ನೌಕರರಿಗೆ ಎರಡನೇ ಶನಿವಾರದ ರಜೆಯ ಜೊತೆಗೆ ನಾಲ್ಕನೇ ಶನಿವಾರವೂ ರಜೆ ನೀಡುವಂತೆ ಶಿಫಾರಸ್ಸು ಮಾಡಿರುವುದು ಪ್ರಮುಖವಾಗಿದೆ.

6th Pay commission submits its 2nd suggestion report to chief secretory

ಯಾವುದೇ ನಿರ್ಬಂಧ ಇಲ್ಲದಂತೆ ಎಲ್ಲ ನೌಕರರಿಗೂ 'ಜ್ಯೋತಿ ಸಂಜೀವಿನಿ ಯೋಜನೆ'ಯಡಿ ಆರೋಗ್ಯ ವಿಮೆ ಕಲ್ಪಿಸಬೇಕು ಹಾಗೂ ಸಿ ಮತ್ತು ಬಿ ವರ್ಗದ ನೌಕರರಿಗೆ ವರ್ಷಕ್ಕೆ ಒಂದು ಬಾರಿ ಕಡ್ಡಾಯವಾಗಿ ತರಬೇತಿ ನೀಡಬೇಕು ಎಂಬ ಶಿಫಾರಸ್ಸನ್ನೂ ಆಯೋಗ ಮಾಡಿದೆ.

English summary
6th pay commission submitted its 2nd suggestion report to Karnataka chief secretory K.Rathnaprabha. commission suggested to give leave on 4th Saturday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X