ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಎವರೆಸ್ಟ್ ಚಾಲೆಂಜ್ ಜಯಿಸಿದವರು

By Rajendra
|
Google Oneindia Kannada News

ಬೆಂಗಳೂರು, ಜೂ.16: ಈ ರವಿವಾರ (ಜೂ.16) ಬೆಂಗಳೂರಿನ ಹಲವರಿಗೆ ಒಂದು ವಿಭಿನ್ನ ಅನುಭವ ನೀಡಿತು. ಆಟೋಟದಲ್ಲಿ ಆಸಕ್ತಿ ಇರುವವರು ಬ್ರಿಗೇಡ್ ಗೇಟ್ ವೇನ ಆವರಣದಲ್ಲಿ ನೆರೆದು ತಮ್ಮ ಸುತ್ತಿನ ಓಟಕ್ಕಾಗಿ ಚಾತಕಪಕ್ಷಿಗಳಂತೆ ಕಾದು ಕುಳಿತಿದ್ದರು. 'ಸ್ಕೈ ಸ್ಕ್ರೇಪರ್ ಡ್ಯಾಶ್' (ಬಹುಮಹಡಿ ಕಟ್ಟಡ ಹತ್ತುವುದು) ಎಂಬ ಈ ವಿಭಿನ್ನ ಎತ್ತರದ ಓಟದ ಸ್ಪರ್ಧೆಯಲ್ಲಿ ತಮ್ಮ ಸರದಿ ಯಾವಾಗ ಬರುವುದೋ ಎಂದು ನಿರೀಕ್ಷಿಸುತ್ತಿದ್ದರು.

ಬ್ರಿಗೇಡ್ ಗ್ರೂಪ್ ಭಾನುವಾರ ಇಲ್ಲಿ ಈ ವಿಭಿನ್ನ ರೀತಿಯ ಎತ್ತರದ ಓಟದ ಸ್ಪರ್ಧೆಯನ್ನು ಆಯೋಜಿಸಿತ್ತು. ಬೆಳಗ್ಗೆ 6.15 ರಿಂದ ಶುರುವಾದ ಈ ಸ್ಪರ್ಧೆ 10.15ರವರೆಗೆ ಮುಂದುವರೆಯಿತು. ಹಲವಾರು ಹಂತದಲ್ಲಿ ಈ ಸ್ಪರ್ಧೆ ನಡೆಯಿತು.

ಈ ಸ್ಪರ್ಧೆಯು ನಗರದಲ್ಲಿ ನಡೆಯುವ ಅನೇಕ ಮ್ಯಾರಥಾನ್ ಓಟಗಾರರನ್ನು ತನ್ನೆಡೆ ಸೆಳೆಯಿತು. ಓಟಗಾರರು ವಲ್ರ್ಡ್ ಟ್ರೇಡ್ ಸೆಂಟರ್ ನ 850 ಮೆಟ್ಟಿಲುಗಳನ್ನು ಹತ್ತಬೇಕಾಗಿತ್ತು, ಅಂದರೆ ಈ ರೇಸ್ 31ನೇ ಮಹಡಿಯಲ್ಲಿ ಕೊನೆಗೊಂಡಿತು. ಇದರ ಜೊತೆಗೆ ಕೆಲವರು ತಮ್ಮ ಸ್ನೇಹಿತರ 10 ಜನರ ಗುಂಪುಗಳನ್ನು ರಚಿಸಿ 32 ಮಹಡಿಗಳನ್ನು 70 ಬಾರಿ ಹತ್ತಿ ಇಳಿದರು. ಈ ಸ್ಪರ್ಧೆಗೆ ಎವರೆಸ್ಟ್ ಚಾಲೆಂಜ್ ಎನ್ನುವ ಹೆಸರು ನೀಡಲಾಗಿತ್ತು.

ಈ ಮೌಂಟ್ ಎವರೆಸ್ಟ್ ಚಾಲೆಂಜ್ ನಲ್ಲಿ ಗೋಲ್ಡ್ ಮನ್ ಸಾಚ್ (Goldman Sachs) ಉದ್ಯೋಗಿ ವಿಕಿ ಪರೇಕ್ ಅವರ ತಂಡವು ಮೊದಲ ಬಹುಮಾನ ಗಳಿಸಿತು. ಇವರಿಗೆ ಆಯೋಜಕರು ರು.20 ಸಾವಿರ ನಗದು ಬಹುಮಾನ ಮತ್ತು ಪ್ರಶಸ್ತಿ ಪದಕಗನ್ನು ನೀಡಿದರು. [ಬೆಂಗಳೂರಿನಲ್ಲೇ ಮೌಂಟ್ ಎವರೆಸ್ಟ್ ಹತ್ತೋಣ ಬನ್ನಿ]

ಈ ಸಂದರ್ಭದಲ್ಲಿ ತಮ್ಮ ಸಂತಸವನ್ನು ಹಂಚಿಕೊಂಡ ಅವರು "ನಾವು ಈ ಸ್ಪರ್ಧೆಗಾಗಿ ಬಹಳ ಅಭ್ಯಾಸ ಮಾಡಿದೆವು. ಇದಕ್ಕಾಗಿ ತಂಡವನ್ನೂ ಬಹಳ ಕಾಳಜಿಯಿಂದ ಕಟ್ಟಿದೆವು. ನಾವು ಹಲವಾರು ಮ್ಯಾರಥಾನ್ ಗಳಲ್ಲಿ ಭಾಗವಹಿಸಿದ್ದೇವೆ. ಆದರೆ ಈ ಎತ್ತರದ ಓಟದ ಸ್ಪರ್ಧೆಯು ಎಲ್ಲಾ ಮ್ಯಾರಥಾನ್ ಗಳಿಂದ ವಿಭಿನ್ನವಾಗಿದೆ" ಎಂದರು.

ಈ ಸ್ಕೈ ಸ್ಕ್ರೇಪರ್ ಡ್ಯಾಶ್‍ನಲ್ಲಿ ಭಾಗವಹಿಸಿದವರು ಮೊದಲು ಶೆರಟನ್, ಬ್ರಿಗೇಡ್ ಗೇಟ್ ವೇ ಮತ್ತು ಒರಿಯಾನ್ ಮಾಲ್ ಸುತ್ತ ಓಡಿದರು. ಇವರ ಸ್ಪರ್ಧೆಯು 850 ಮೆಟ್ಟಿಲುಗಳನ್ನು ಹತ್ತುವುದರ ಮೂಲಕ ಕೊನೆಗೊಂಡಿತು. ಮೊದಲನೇ ಬಹುಮಾನ - ರು.7500, ಎರಡನೇ ಬಹುಮಾನ - ರು. 5000, ಮೂರನೇ ಬಹುಮಾನ - ರು. 2500.

ವಿಜೇತರ ವಿವರ:
2 ಕೆ ಡ್ಯಾಶ್ (ಮಹಿಳೆಯರ ವಿಭಾಗ)
ಮೊದಲ ಬಹುಮಾನ - ಸೌಮ್ಯ ಸಾವಂತ್
ಎರಡನೇ ಬಹುಮಾನ - ಮಹಾಲಕ್ಷ್ಮಿ

2 ಕೆ ಡ್ಯಾಶ್ (ಪುರುಷರ ವಿಭಾಗ)
ಮೊದಲ ಬಹುಮಾನ - ರಾಹುಲ್
ಎರಡನೇ ಬಹುಮಾನ - ಗೊಲಾಮೆ ಬೇ

ದಿ ಡ್ಯಾಶ್ (ಮಹಿಳೆಯರ ವಿಭಾಗ)
ಮೊದಲ ಬಹುಮಾನ - ಅರ್ಪಿತಾ
ಎರಡನೇ ಬಹುಮಾನ - ನೀರಾ

ದಿ ಡ್ಯಾಶ್ (ಪುರುಷರ ವಿಭಾಗ)
ಮೊದಲ ಬಹುಮಾನ -ಭರತ್
ಎರಡನೇ ಬಹುಮಾನ - ಆಲ್ಫಿಸ್

The Skyscraper Dash

ಇನ್ನು ಸ್ಪರ್ಧೆಯ ಬಗ್ಗೆ ಮಾತನಾಡಿದ ನಿರುಪಾ ಶಂಕರ್, ಡೈರೆಕ್ಟರ್, ಬ್ರಿಗೇಡ್ ಹಾಸ್ಪಿಟಾಲಿಟಿ, "ಇದೊಂದು ನಿಜವಾಗಿ ಉತ್ತಮ ಸ್ಪರ್ಧೆ. ರವಿವಾರವನ್ನು ಕಳೆಯಲು ಇದೊಂದು ಉತ್ತಮ ವಿಧಾನ. ಈ ಬೆಳಗ್ಗೆ ಬ್ರಿಗೇಡ್ ಗೇಟ್ ವೇ ಕ್ಯಾಂಪಸ್ ತುಂಬಾ ಚೆನ್ನಾಗಿತ್ತು. ಮತ್ತು ನಮಗೆ ಹೈ ಅಲ್ಟ್ರಾ ಲೌಂಜ್‍ನಲ್ಲಿ ಉತ್ತಮವಾದ ತಿಂಡಿಯೂ ಸಿಕ್ಕಿತು".

ಸ್ಪರ್ಧೆಯ ಆಯೋಜಕರಾದ ಅಜಯ್ ಗುಪ್ತಾ ಅವರು ಮಾತನಾಡಿ "ಈ ತರದ ಸ್ಪರ್ಧೆಗಳಿಗೆ ಬೆಂಗಳೂರು ಒಂದು ಉತ್ತಮ ಸ್ಥಳ. ಇಲ್ಲಿನ ಅನೇಕ ಜನರಿಗೆ ಈ ಥರದ ಸ್ಪರ್ಧೆಯಲ್ಲಿ ಆಸಕ್ತಿ ಇದೆ. ತುಂಬ ಜನ ಈ ಸ್ಪರ್ಧೆಯಲ್ಲಿ ಪಾಲ್ಗೊಂಡಿರುವುದು ಖುಷಿ ತಂದಿದೆ ಎಂದರು. (ಒನ್ಇಂಡಿಯಾ ಕನ್ನಡ)

English summary
Sporting enthusiasts gathered together at the World Trade Center at the Brigade Gateway, Bangalore for the first ever Skyscraper Dash, a vertical run that credits its debut in India to the Brigade Group. 650 participants came together to participate in the various versions of this competition. The competition began in waves beginning at 6.15 AM and going on till 10.15 AM.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X