ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು; ಕೆರೆ ಅಭಿವೃದ್ಧಿ ಯೋಜನೆಗೆ 6,316 ಮರಗಳಿಗೆ ಕೊಡಲಿ

|
Google Oneindia Kannada News

ಬೆಂಗಳೂರು, ಜೂನ್ 18; ಬೆಂಗಳೂರು ನಗರದಲ್ಲಿ ಕೆರೆ ಅಭಿವೃದ್ಧಿಗೆ ಅಡ್ಡಲಾಗಿರುವ ಮರಗಳನ್ನು ತೆರವು ಮಾಡಲಾಗುತ್ತದೆ. ಕರ್ನಾಟಕ ಅರಣ್ಯ ಇಲಾಖೆ ಈ ಕುರಿತು ಜನರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಿದೆ. ಒಟ್ಟು 6316 ಮರಗಳನ್ನು ತೆರವುಗೊಳಿಸಲಾಗುತ್ತದೆ.

ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಕೆರೆಗಳಿಗೆ ನೀರನ್ನು ತುಂಬಿಸುವ ಯೋಜನೆಗೆ ಮರಗಳನ್ನು ತೆರವು ಮಾಡಲಾಗುತ್ತದೆ. ಹೆಬ್ಬಾಳ-ನಾಗವಾರ ವ್ಯಾಲಿ ಯೋಜನೆ ಇದಾಗಿದೆ.

ಪ್ರಕೃತಿ ಜೊತೆ ಮಾನವರೂ ಸರ್ವನಾಶ! ವರ್ಷಕ್ಕೆ ಕೋಟಿ ಕೋಟಿ ಮರ ಉಡೀಸ್! ಪ್ರಕೃತಿ ಜೊತೆ ಮಾನವರೂ ಸರ್ವನಾಶ! ವರ್ಷಕ್ಕೆ ಕೋಟಿ ಕೋಟಿ ಮರ ಉಡೀಸ್!

ಸಿಂಗನಾಯಕನಹಳ್ಳಿ ಅಮಾನಿಕೆರೆ ಗ್ರಾಮದ ಸರ್ವೆ ನಂಬರ್ 33, ನಾಗದಾಸನಹಳ್ಳಿ ಗ್ರಾಮದ ಸರ್ವೆ ನಂಬರ್ 39, ಹೊನ್ನೇನಹಳ್ಳಿ ಗ್ರಾಮದ ಸರ್ವೆ ನಂಬರ್ 12, ಅದ್ದಿಗಾನಹಳ್ಳಿ ಗ್ರಾಮದ ಸರ್ವೆ ನಂಬರ್ 07ರ ವ್ಯಾಪ್ತಿಯಲ್ಲಿ ಬರುವ ಸಿಂಗನಾಯಕನಹಳ್ಳಿ ಕೆರೆಯ ಅಂಗಳದಲ್ಲಿ ಇರುವ ಮರಗಳನ್ನು ತೆರವುಗೊಳಿಸಲಾಗುತ್ತದೆ.

 ಬೆಂಗಳೂರಲ್ಲೊಂದು ಪುಟ್ಟ ಕಾನನ; ತಾರಸಿಯಲ್ಲೇ 1700 ಮರ ಬೆಳೆಸಿದ ಹಸಿರುಪ್ರೇಮಿ ಬೆಂಗಳೂರಲ್ಲೊಂದು ಪುಟ್ಟ ಕಾನನ; ತಾರಸಿಯಲ್ಲೇ 1700 ಮರ ಬೆಳೆಸಿದ ಹಸಿರುಪ್ರೇಮಿ

 6316 Trees To Cut For Hebbal Nagawara Valley Project

ಯೋಜನೆಗೆ ಅಡ್ಡಲಾಗಿರುವ ಮರಗಳ ತೆರವಿಗಾಗಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಬೆಂಗಳೂರು ಇವರು ಮನವಿಯನ್ನು ಸಲ್ಲಿಸಲಾಗಿದೆ. ಮರಗಳ ಕಡಿತಕ್ಕೆ ಆಕ್ಷೇಪ ವ್ಯಕ್ತಪಡಿಸುವವರು ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿದೆ.

ಶಿರಸಿ-ಕುಮಟಾ ರಸ್ತೆ: ಹೈಕೋರ್ಟ್ ಅನುಮತಿ ಪಡೆಯದೇ ಮರ ತೆರವು ಶಿರಸಿ-ಕುಮಟಾ ರಸ್ತೆ: ಹೈಕೋರ್ಟ್ ಅನುಮತಿ ಪಡೆಯದೇ ಮರ ತೆರವು

ಆಕ್ಷೇಪಣೆ ಸಲ್ಲಿಸುವುದು ಹೇಗೆ?; ಜನರು ಆಕ್ಷೇಪಣೆಗಳನ್ನು ಕಳುಹಿಸಲು ಕೊನೆಯ ದಿನಾಂಕ ಜೂನ್ 24, 2021. ಆಕ್ಷೇಪಣೆ ಸಲ್ಲಿಸಲು ವಿಳಾಸ [email protected]

Recommended Video

ಮಳೆಯಿಂದ ಚಾರ್ಮಾಡಿ ಘಾಟ್ ನಲ್ಲಿ ಸೃಷ್ಟಿಯಾಗಿದೆ ಸುಂದರ ಜಲಪಾತಗಳು | Oneindia Kannada

ಉಪ ಅರಣ್ಯಸಂರಕ್ಷಣಾಧಿಕಾರಿ, ಬೆಂಗಳೂರು ನಗರ ವಿಭಾಗ, ಬೆಂಗಳೂರು ಇವರಿಗೆ ಸಹ ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿದೆ. ಹೆಸರು ಮತ್ತು ದೂರವಾಣಿ ಸಂಖ್ಯೆಗಳನ್ನು ನಮೂದಿಸಿ ಕಳಿಸಬೇಕು.

English summary
Karnataka forest department proposal to cut 6,316 trees to Hebbal-Nagawara valley project. Objections invited from environmentalists and citizen's.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X