ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಆಮ್ಲಜನಕ ಕೊರತೆಯಿಂದ ಕೊರೊನಾ ಸೋಂಕಿತೆ ಸಾವು

|
Google Oneindia Kannada News

ಬೆಂಗಳೂರು, ಏಪ್ರಿಲ್ 19: ಬೆಂಗಳೂರಿನಲ್ಲಿ ಆಮ್ಲಜನಕದ ಅಭಾವದಿಂದ 61 ವರ್ಷದ ಮಹಿಳೆ ಸಾವನ್ನಪ್ಪಿರುವ ಸಂಗತಿ ಸೋಮವಾರ ನಡೆದಿದೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಆಮ್ಲಜನಕ ಲಭ್ಯವಾಗದೇ ಮಹಿಳೆ ರಾತ್ರಿ 8.30ರ ಸಮಯದಲ್ಲಿ ಮೃತಪಟ್ಟಿದ್ದಾರೆ.

ಕಳೆದ ನಾಲ್ಕು ದಿನದ ಹಿಂದೆ ದಂಪತಿ ಕೊರೊನಾ ಪರೀಕ್ಷೆಗೆ ಒಳಗಾಗಿದ್ದು, ಇಬ್ಬರಿಗೂ ಕೊರೊನಾ ವೈರಸ್ ಪಾಸಿಟಿವ್ ಇರುವುದು ದೃಢಪಟ್ಟಿತ್ತು. ಕೂಡಲೇ ಬನಶಂಕರಿ ಬಳಿಯ ಖಾಸಗಿ ಆಸ್ಪತ್ರೆಗೆ ಇಬ್ಬರೂ ದಾಖಲಾಗಿದ್ದರು. ಆದರೆ ಇಂದು ಸಂಜೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡು ಮಹಿಳೆ ಮೃತಪಟ್ಟಿದ್ದಾರೆ.

61 Year Old Woman Dies Due To Oxygen Shortage At Private Hospital In Bengaluru

ಇವರು ದಾಖಲಾಗಿದ್ದ ಖಾಸಗಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿದ್ದು, ಬೇರೆ ಆಸ್ಪತ್ರೆಗೆ ದಾಖಲು ಮಾಡಿ ಎಂದು ಬಿಬಿಎಂಪಿ ಮತ್ತು ಆರೋಗ್ಯ ಇಲಾಖೆಯ ಹೆಲ್ಫ್ ಲೈನ್ ಗೆ ದಂಪತಿ ಸ್ನೇಹಿತರು ಕರೆ ಮಾಡಿದ್ದರು. ಅದಷ್ಟು ಬೇಗ ಬೆಡ್ ವ್ಯವಸ್ಥೆ ಮಾಡಿ ಎಂದು ಮೃತರ ಸಂಬಂಧಿಗಳು ಕೇಳಿಕೊಂಡಿದ್ದರು. ಆದರೆ ಬಿಯು ನಂಬರ್ ಇಲ್ಲದೇ ಆಸ್ಪತ್ರೆಗೆ ಸೇರಿಸಲು ಆಗಲ್ಲ ಎಂದು 108 ಸಿಬ್ಬಂದಿ ಅಸಡ್ಡೆ ತೋರಿದ್ದರು ಎಂದು ತಿಳಿದುಬಂದಿದೆ.

ಮೇ 1ರಿಂದ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ಲಸಿಕೆ ಪಡೆಯಬಹುದುಮೇ 1ರಿಂದ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ಲಸಿಕೆ ಪಡೆಯಬಹುದು

Recommended Video

#Covid19update : ದೇಶದಲ್ಲಿ 24 ಗಂಟೆಯಲ್ಲಿ 2,59,170 ಜನರಿಗೆ ಕೊರೊನಾ..! | Oneindia Kannada

ನಾಲ್ಕು ದಿನದ ಹಿಂದೆಯೇ ಕೋವಿಡ್ ದೃಢಪಟ್ಟಿದ್ದರೂ ಇಲ್ಲಿವರೆಗೆ ಬಿಯು ನಂಬರ್ ಜನರೇಟ್ ಆಗಿಲ್ಲ. ಜೊತೆಗೆ ಸರಿಯಾದ ಸಮಯಕ್ಕೆ ಆಂಬುಲೆನ್ಸ್‌ ಹಾಗೂ ಆಮ್ಲಜನಕ ದೊರೆಯದಿರುವುದೇ ಮಹಿಳೆ ಸಾವಿಗೆ ಕಾರಣ ಎಂಬ ಆರೋಪ ಕೇಳಿಬಂದಿದೆ. ಸದ್ಯ ಅದೇ ಖಾಸಗಿ ಆಸ್ಪತ್ರೆಯಲ್ಲಿ ಮೃತರ ಪತಿಯೂ ಕೋವಿಡ್ ಗೆ ಚಿಕಿತ್ಸೆ ಪಡೆಯುತ್ತಿದ್ದು, ಅವರಿಗೂ ಆಕ್ಸಿಜನ್ ಸಮಸ್ಯೆ ಶುರುವಾಗಿದೆ. ಇಷ್ಟಾದರೂ ಒಂದು ಆಕ್ಸಿಜನ್ ಬೆಡ್ ವ್ಯವಸ್ಥೆ ಮಾಡಲು ಬಿಬಿಎಂಪಿ ಮತ್ತು ಆರೋಗ್ಯ ಇಲಾಖೆ ಪರದಾಡುತ್ತಿದೆ.

English summary
61-year-old woman dies due to oxygen shortage at private hospital in bengaluru on Monday. Couple has tested coronavirus positive before four days
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X