• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವರ್ಷ ತೊಡಕಿಗೆ ಪಾಪಣ್ಣ ಅಂಗಡೀಲಿ ಆರುನೂರು ಕೇಜಿ ಮಟನ್ ಸೇಲ್

By ಅನಿಲ್ ಆಚಾರ್
|

ಬೆಂಗಳೂರು, ಏಪ್ರಿಲ್ 8: ಬ್ಯಾಟರಾಯನಪುರದ ಮಟನ್ ಸ್ಟಾಲ್ ವೊಂದರ ಮುಂದೆ ಇಷ್ಟುದ್ದ ಸಾಲು ನಿಂತಿದ್ದ ವಿಡಿಯೋ ಭಾನುವಾರ ವೈರಲ್ ಆಗಿತ್ತು. ಹೇಗಿದ್ದರೂ ಯುಗಾದಿ ಹಬ್ಬದ ಮಾರನೇ ದಿನ, ವರಷ ತೊಡಕು. ಆ ದಿನ ಬಾಡೂಟ ಮಾಡದ ಮಾಂಸಾಹಾರಿಯ ಬಗ್ಗೆ ಅನುಕಂಪ ವ್ಯಕ್ತವಾಗುತ್ತದೆ. ಅಂಥ ಮಹತ್ತರವಾದ ದಿನದಲ್ಲಿ ಬ್ಯಾಟರಾಯನಪುರದ ಪಾಪಣ್ಣ ಮಾಂಸದ ಅಂಗಡಿ ಮುಂದೆ ಮಧ್ಯಾಹ್ನದ ತನಕ ಜನವೋ ಜನ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಭಾನುವಾರ ರಾತ್ರಿ ಅಂದರೆ, ಶನಿವಾರದ ಮಧ್ಯರಾತ್ರಿಯಿಂದಲೇ ಅಂಗಡಿ ಮುಂದೆ ಜನರು ಜಮಾಯಿಸಲು ಆರಂಭಿಸಿದ್ದಾರೆ. ಅದು ಭಾನುವಾರ ಮಧ್ಯಾಹ್ನದ ತನಕ ಮುಂದುವರಿದಿದೆ. ಒಟ್ಟು ಐವತ್ತು ಮೇಕೆ ಹೊಡೆದು, ಆರುನೂರು ಕೇಜಿ ಮಟನ್ ಮಾರಾಟ ಮಾಡಿದ್ದಾಗಿ ಹೇಳುತ್ತಾರೆ ಅಂಗಡಿ ಮಾಲೀಕ ಸಂತೋಷ್.

ಬೆಳಗ್ಗೆ ಒಂಬತ್ತು ಗಂಟೆ ಹೊತ್ತಿಗೆ ಅಂಗಡಿ ಮುಂದೆ ಮುನ್ನೂರು ಜನರ ಸಾಲಿತ್ತು. ಅದರ ವಿಡಿಯೋ ಮಾಡಿದ್ದರಂತೆ ಒಬ್ಬರು ಸ್ಥಳೀಯರು. ಆ ನಂತರ ಅದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಾಕಿದ್ದಾರೆ. ಆ ಮೇಲೆ ಅದು ಯಕ್ಕಾಚಿಕ್ಕಿ ವೈರಲ್ ಆಗಿದೆ. ಈ ಮಟನ್ ಶಾಪ್ ನ ವಿಶೇಷ ಏನು ಗೊತ್ತಾ? ಗ್ರಾಹಕರು ಮಾಂಸದಲ್ಲಿ ಯಾವ ಭಾಗ ಬೇಕೋ ಅದನ್ನು ಆರಿಸಿಕೊಳ್ಳಬಹುದು. ಬೇರೆ ಕಡೆ ಆ ಅವಕಾಶ ಇಲ್ಲ. ಈ ಅಂಗಡಿಗೆ ಮಾಗಡಿ, ಕನಕಪುರ, ರಾಮನಗರದಿಂದ ಮೇಕೆ-ಆಡುಗಳನ್ನು ಖರೀದಿಸಲಾಗುತ್ತದೆ.

ಸಂತೋಷ್ ಅವರ ತಾತ ಪಾಪಣ್ಣ ಹಾಗೂ ತಂದೆ ಮಾಣಿಕ್ಯಂ ಹೀಗೆ ಪರಂಪರೆಯಿಂದ ಮಾಂಸ ಮಾರಾಟವನ್ನೇ ಮಾಡಿಕೊಂಡು ಬರುತ್ತಿದ್ದಾರೆ. ಉಳಿದ ಮಾಂಸದ ಅಂಗಡಿಗಳಿಗಿಂತ ಐವತ್ತು-ಅರವತ್ತು ರುಪಾಯಿ ಇಲ್ಲಿ ಬೆಲೆ ಜಾಸ್ತಿ. ಅಂದರೆ, ಕೇಜಿಗೆ ಆರು ನೂರು ರುಪಾಯಿ ಅಂತೆ. ಅಷ್ಟಾದರೂ ಗ್ರಾಹಕರೇನೂ ಕಡಿಮೆ ಆಗಿಲ್ಲ.

English summary
On the occasion of Varsha todaku (Next day of Ugadi) in Bengaluru Byatarayanapuara Papanna mutton stall 600 kg mutton sold.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X