ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರ್ನಾಟಕದಲ್ಲಿ ಕೊರೊನಾ ವೈರಸ್ ಪರೀಕ್ಷೆಗೆ 60 ಹೊಸ ಲ್ಯಾಬ್!

|
Google Oneindia Kannada News

ಬೆಂಗಳೂರು, ಮೇ.05: ನೊವೆಲ್ ಕೊರೊನಾ ವೈರಸ್ ಸೋಂಕಿತರ ಸಂಖ್ಯೆಯು ಕರ್ನಾಟಕದಲ್ಲೂ ದಿನೇ ದಿನೆ ಏರಿಕೆಯಾಗುತ್ತಿದೆ. ಕೆಮ್ಮು, ಶೀತ, ಜ್ವರ, ಉಸಿರಾಟ ಸಮಸ್ಯೆ, ಎದೆನೋವು, ತಲೆನೋವು ಹೀಗೆ ಯಾವುದೇ ಲಕ್ಷಣಗಳಿಲ್ಲದಿದ್ದರೂ ಕೊರೊನಾ ವೈರಸ್ ಅಂಟಿಕೊಂಡಿರುವ ಪ್ರಕರಣಗಳು ಹೆಚ್ಚುತ್ತಿವೆ.

Recommended Video

ಎಂಥಾ ಕಾಲ ಬಂತಪ್ಪಾ!! ಬಾರ್ ಗಳ ಮುಂದೆ ಎಣ್ಣೆಗಾಗಿ ಕ್ಯೂನಲ್ಲಿ ನಿಂತಿರೋ ಹುಡ್ಗೀರು | Oneindia Kannada

ರಾಜ್ಯದ 29 ಪ್ರಯೋಗಾಲಯಗಳಲ್ಲಿ ನೊವೆಲ್ ಕೊರೊನಾ ವೈರಸ್ ಸೋಂಕು ಪತ್ತೆ ಪರೀಕ್ಷೆ ನಡೆಸಲಾಗುತ್ತಿದೆ. ಶರವೇಗದಲ್ಲಿ ಬೆಳೆಯುತ್ತಿರುವ ಸೋಂಕಿತರ ಪರೀಕ್ಷೆಗೆ ಮತ್ತಷ್ಟು ಲ್ಯಾಬ್ ಗಳ ಅವಶ್ಯಕತೆಯಿದೆ.

ಕೊರೊನಾ ಹುಟ್ಟು: ಟ್ರಂಪ್ ಮೇಲಿನ ಕೋಪ, ಮತ್ತೆ ಚೀನಾ ಪರ ನಿಂತ WHO ಕೊರೊನಾ ಹುಟ್ಟು: ಟ್ರಂಪ್ ಮೇಲಿನ ಕೋಪ, ಮತ್ತೆ ಚೀನಾ ಪರ ನಿಂತ WHO

ಕರ್ನಾಟಕದಲ್ಲಿ ಲ್ಯಾಬ್ ಗಳ ಕೊರತೆ ಮನಗಂಡು ರಾಜ್ಯ ಸರ್ಕಾರವು ಹೊಸದಾಗಿ 60 ವೈದ್ಯಕೀಯ ಪ್ರಯೋಗಾಲಯಗಳನ್ನು ತೆರೆಯಲು ತೀರ್ಮಾನಿಸಿದೆ. ಇದರ ಜೊತೆಗೆ ವೈದ್ಯಕೀಯ ಸೌಲಭ್ಯಗಳನ್ನು ಹೆಚ್ಚಿಸಲಾಗುತ್ತದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಟ್ವೀಟ್ ಮಾಡಿದ್ದಾರೆ.

60 New Lab In Karnataka For Coronavirus Test


RT-PCR ಲ್ಯಾಬ್ ಗಳನ್ನು ತೆರೆಯಲು ಆದೇಶ:

ನೊವೆಲ್ ಕೊರೊನಾ ವೈರಸ್ ಸೋಂಕು ಪತ್ತೆಗೆ 29 ಲ್ಯಾಬ್ ಗಳು ಕಾರ್ಯ ನಿರ್ವಹಿಸುತ್ತಿವೆ. ಎಲ್ಲಾ ಖಾಸಗಿ ವೈದ್ಯಕೀಯ, ESIS ವೈದ್ಯಕೀಯ ಕಾಲೇಜುಗಳಲ್ಲಿ ಕೊವಿಡ್-19 ಪರೀಕ್ಷೆ ನಡೆಸಲಾಗುತ್ತಿದೆ. ಕೊರೊನಾ ಪರೀಕ್ಷೆಗೆ RT-PCR ಲ್ಯಾಬ್ ಗಳನ್ನು ಸ್ಥಾಪಿಸಲು ಆದೇಶಿಸಲಾಗಿದೆ. ಮುಂದಿನ ಒಂದೇ ತಿಂಗಳಿನಲ್ಲಿ ರಾಜ್ಯದಲ್ಲಿ ಒಟ್ಟು 60 ಹೊಸ ಲ್ಯಾಬ್ ಗಳನ್ನು ಸ್ಥಾಪಿಸುವ ಗುರಿಯನ್ನು ಹೊಂದಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಟ್ವೀಟ್ ಮಾಡಿದ್ದಾರೆ.

English summary
60 New Lab In Karnataka For Coronavirus Test. Medical Education Minister Dr.K. Sudhakar Tweet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X