ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಂಗೀತ ಸಂಯೋಜಕಿಯಾಗಿ ಬಡ್ತಿ ಪಡೆದ ಗಾಯಕಿ ಮಾನಸ ಹೊಳ್ಳ

By ಅಮರನಾಥ್ ವಿಬಿ
|
Google Oneindia Kannada News

ಬೆಂಗಳೂರು ಫೆಬ್ರವರಿ 08 : ಲೇಖಾ ಆಡಿಯೋ ಹೊರತಂದಿರುವ ಸಿಕ್ಸ್ ಟು ಸಿಕ್ಸ್ ಚಿತ್ರದ ಧ್ವನಿಸುರುಳಿ ಸಮಾರಂಭ ನಗರದ ಸಂಸ ಬಯಲು ರಂಗಮಂದಿರದಲ್ಲಿ ಗುರುವಾರ ವಿಜೃಂಭಣೆಯಿಂದ ನೆರವೇರಿತು.

ಸ್ವತಂತ್ರವಾಗಿ ಸಂಗೀತ ಸಂಯೋಜನೆ ಮಾಡಿ, ಕನ್ನಡ ಸಿನಿಮಾ ಸಂಗೀತದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಮಾನಸ ಹೊಳ್ಳ ಮತ್ತು ಕುಟುಂಬ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮದ ಕೇಂದ್ರಬಿಂದುವಾಗಿದ್ದರು.

ಬದುಕಲಿ ಸವೆದ ದಾರಿಯಲ್ಲಿ ಜೊತೆಯಾದವರನ್ನು ಮರೆಯುವುದು ಸಾಮಾನ್ಯವಾಗುತ್ತಿರುವ ಇತ್ತೀಚಿನ ದಿನಗಳಲ್ಲಿ ಮಾನಸ ಮತ್ತು ಅವರ ಕುಟುಂಬ ವಿಭಿನ್ನವಾಗಿ ನಿಲ್ಲುತ್ತಾರೆ. ಇದಕ್ಕೆ ಪ್ರೇರಣೆಯೋ ಎಂಬಂತೆ ಅವರ ತಂದೆಯವರಾದ ಶಂಖನಾದ ಶಿವಾನಂದ ಅದೇ ನಿಷ್ಕಲ್ಮಶ ಮನಸಲಿ ಕಣ್ಮುಂದೆ ಬರುತ್ತಿದ್ದರು.

ಉತ್ತಮ ಮನಸ್ಸಿರುವವರು ಮಾತ್ರ ಬೇರೆಯವರ ಮನಸು ಅರ್ಥವಾಗಲು ಸಾಧ್ಯ

ಉತ್ತಮ ಮನಸ್ಸಿರುವವರು ಮಾತ್ರ ಬೇರೆಯವರ ಮನಸು ಅರ್ಥವಾಗಲು ಸಾಧ್ಯ

ಒಳ್ಳೆಯ ಮನಸ್ಸಿರುವವರಿಗೆ ಮಾತ್ರ ಅನ್ಯರಲ್ಲಿಯ ಒಳ್ಳೆಯತನ ಕಾಣುವುದು ಎಂದರೆ ತಪ್ಪಾಗಲಾರದು. ಅರ್ಜುನ್ ಜನ್ಯಾ ಅವರ ಎ.ಆರ್.ರೆಹಮಾನ್ ಮೇಲಿನ ಗುರುಭಕ್ತಿ ಈಗ ಇಡೀ ಜಗತ್ತಿಗೇ ಗೊತ್ತು. ಅಂಥವರ ಗರಡಿಯಲ್ಲಿ ಪಳಗುತ್ತಿರುವ ಮಾನಸ ಅದೇ ಪರಂಪರೆಯನ್ನು ಮುಂದುವರೆಸುತ್ತಾ, ಈ ಕಾರ್ಯಕ್ರಮದಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಎಲ್ಲಾ ಗುರುಗಳನ್ನು, ಹಿತೈಷಿಗಳನ್ನು ನೆನೆದು ದೊಡ್ಡವರೆನಿಸಿಕೊಂಡರೆಂದರೆ ಅತಿಶಯೋಕ್ತಿಯಲ್ಲ.

ಸಂಗೀತ ಸಂಯೋಜಕಿಯಾಗಿ ಭಡ್ತಿ ಪಡೆದ ಮಾನಸಾ ಹೊಳ್ಳ

ಸಂಗೀತ ಸಂಯೋಜಕಿಯಾಗಿ ಭಡ್ತಿ ಪಡೆದ ಮಾನಸಾ ಹೊಳ್ಳ

ಒಬ್ಬ ಗಾಯಕಿಯಾಗಿ ಕನ್ನಡ ಸಿನಿಮಾ ಕ್ಷೇತ್ರದಲ್ಲಿ ನೆಲೆ ಕಂಡುಕೊಂಡಿರುವ ಮಾನಸ, ಅವರೇ ಹೇಳುವಂತೆ ಅರ್ಜುನ್ ಜನ್ಯಾ ಅವರಿಂದ ಸ್ಫೂರ್ತಿಗೊಂಡು ಈಗ ಸಂಗೀತ ಸಂಯೋಜಕಿಯಾಗಿ ಬಡ್ತಿ ಪಡೆದಿದ್ದಾರೆ. ಅವರಿಗೆ ಬೆಂಬಲವಾಗಿ ಅವರ ಇಡೀ ಕುಟುಂಬವೇ ನಿಂತಿರುವುದು ಮನ ಮುಟ್ಟುವಂತಿತ್ತು.

ಪೋಷಕರ ಬೆಂಬಲವೇ ಮಾನಸ ಅವರಿಗೆ ಸ್ಫೂರ್ತಿ

ಪೋಷಕರ ಬೆಂಬಲವೇ ಮಾನಸ ಅವರಿಗೆ ಸ್ಫೂರ್ತಿ

ಮಗಳ ಪ್ರತಿ ಹೆಜ್ಜೆಯನ್ನು ನೋಡಿ ಖುಷಿ ಪಡುವ ತಂದೆ, ಮಗಳನ್ನು ತಾವೇ ಕೈಹಿಡಿದು ನಡೆಸಿದಾಗ ಸಿಕ್ಕಂತಹ ಸಂತೋಷದ ಘಳಿಗೆಯಂತಿತ್ತು ಕಾರ್ಯಕ್ರಮ. ಬೇರೆಯವರಿಗೆ ಹೇಗೋ ಗೊತ್ತಿಲ್ಲ ನನಗಂತೂ ನನ್ನಾಕೆಯೆ ಪ್ರಪಂಚ ಎಂದು ಹೇಳುತ್ತಾ ಸದಾ ಬೆನ್ನೆಲುಬಾಗಿ ನಿಂತಿರುವ ಬಹುಮುಖ ಪ್ರತಿಭೆಯ ಪತಿ ರವಿಯವರು. ಸೊಸೆಯ ಏಳ್ಗೆಗೆ ಚಕಾರವೆತ್ತದ ಅತ್ತೆ. ಮೌನದಿಂದ ಮಗಳ ಬೆಳವಣಿಗೆಗೆ ಕಾರಣರಾಗಿರುವ ಅವರ ತಾಯಿ. ಅವರ ಗಂಭೀರತೆಗೆ ಹಿಡಿದಿರುವ ಕನ್ನಡಿಯಂತಿರುವ ಮಗಳು. ಹೀಗೆ ಅವರ ಇಡೀ ಕುಟುಂಬ ಎಲ್ಲರಿಗೂ ಮಾದರಿಯಾಗಿ ಕಾಣುತ್ತದೆ.

ಮಾನಸಾ ಅವರ ಹಾಡುಗಳು

ಮಾನಸಾ ಅವರ ಹಾಡುಗಳು

ಇವರ ಈ ಪ್ರಯತ್ನಕ್ಕೆ ಹುರಿದುಂಬಿಸಲು ಬಂದ ಅಭಿಮಾನಿಗಳೆ ದೇವರೆಂದ ರಾಜ ಕುಮಾರ, ತಮ್ಮ ಪವರ್ ಸ್ಟಾರ್-ಗಿರಿಯ ಯಾವುದೇ ಖದರ್ ತೋರಿಸದೆ ಬೆಟ್ಟದ ಹೂವಿನ ಮೇಲಿನ ಪ್ರೀತಿಗಾಗಿ, ಅಭಿಮಾನಕ್ಕಾಗಿ ಬಂದು ಬಿಡುಗಡೆ ಮಾಡಿದಂತಿತ್ತು. ಅವರಿಗೆ ಜೊತೆಯಾಗಿ ಕೈ ಜೋಡಿಸಿದ್ದು ಮತ್ಯಾರು ಅಲ್ಲ ಗುರುಭಕ್ತಿಗೆ ನವ-ಭಾಷ್ಯ ಬರೆದಿರುವ ಅರ್ಜುನ್ ಜನ್ಯಾ, ಅಮೃತವರ್ಷಿಣಿ ಹಾಡುಗಳ ಮೂಲಕ ಸಂಗೀತದ ಅಮೃತಪಾನ ಮಾಡಿಸಿದ ಕೆ.ಕಲ್ಯಾಣ್ ಮತ್ತು ಮನೋಹರವಾದ ಸಂಗೀತ-ಸಾಹಿತ್ಯದಿಂದ ಎಲ್ಲರ ಹೃದಯದಲಿ ನೆಲೆಸಿರುವ ವಿ.ಮನೋಹರ್.

ಇವರುಗಳೆಲ್ಲಾ ತಮ್ಮ ಎಡೆಬಿಡದ ಕೆಲಸಗಳ ಮಧ್ಯೆ ಹೀಗೆ ಇನ್ನೊಬ್ಬರ ಪ್ರಯತ್ನಕ್ಕೆ ಸಾಥ್ ಕೊಟ್ಟಿದ್ದು ಪ್ರಶಂಸನೀಯ. ನಾನೂ ಬೆಳೆಯಬೇಕು ಜೊತೆಗಿದ್ದವರೂ ಬೆಳೆಯಬೇಕು ಎನ್ನುವುದು ಎಲ್ಲರಿಗೂ ಬರುವಂತಹುದಲ್ಲ.
ಸಿಕ್ಸ್ ಟು ಸಿಕ್ಸ್ ಹಾಡುಗಳೆಲ್ಲಾ ಸೊಗಸಾಗಿವೆ. ಕನ್ನಡ ಸಂಗೀತ ಲೋಕಕ್ಕೆ ಮನೆಮಗಳ ಮೊದಲ ಕಾಣಿಕೆ.

English summary
Singer Manasa Holla made a debut as music composer with 6 to 6 movie and the audio released by Power star Punit rajkumar on Thursday. Music director like Arjun Janya, K.Kalyan and many other celebrities blessed Manasa Holla and and appreciated her efforts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X