ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು:ಕಳೆದ 21 ದಿನದಲ್ಲಿ 6 ಶೂಟೌಟ್

|
Google Oneindia Kannada News

ಬೆಂಗಳೂರು,ಜನವರಿ 22: ಬೆಂಗಳೂರಿನಲ್ಲಿ ಕಳೆದ 21 ದಿನದಲ್ಲಿ 6 ಶೂಟೌಟ್‌ಗಳು ನಡೆದಿವೆ.

ಪೊಲೀಸರು ರೌಡಿಶೀಟರ್‌ಗಳು ಹಾಗೂ ಪುಂಡರ ಹಡೆಮುರಿ ಕಟ್ಟಿದ್ದಾರೆ. ಈ ಮೂಲಕ ಜನರಿಗೆ ತೊಂದರೆ ನೀಡುವುದಷ್ಟೇ ಅಲ್ಲ ತಮ್ಮ ಮೇಲೆ ದಾಳಿ ನಡೆಸಿದ ಕಿಡಿಗೇಡಿಗಳಿಗೂ ಗುಂಡು ಹಾರಿಸಿದ್ದಾರೆ.

ಗುರುವಾರ ಕೂಡ ನಗರದಲ್ಲಿ ದುಷ್ಕರ್ಮಿಯೊಬ್ಬನ ಮೇಲೆ ಗುಂಡು ಹಾರಿಸಿರುವ ಪೊಲೀಸರು ಈ ಮೂಲಕ ರೌಡಿಗಳಿಗೆ ಎಚ್ಚರಿಕೆ ನೀಡಿದ್ದಾರೆ.ಇತ್ತೀಚೆಗೆ ಹಣ್ಣು-ತರಕಾರಿ ಆನ್‌ಲೈನ್ ದರೋಡೆ ನಡೆಸಿದ್ದ ದುಷ್ಕರ್ಮಿಯೊಬ್ಬನಿಗೆ ಬ್ಯಾಡರಹಳ್ಳಿ ಠಾಣೆ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದರು.

firing

ಉಲ್ಲಾಳ ಉಪನಗರ ರಾಜೇಶ್ ಗೆ ಗುಂಡೇಟು ಬಿದ್ದಿದ್ದು, ಈ ದಾಳಿ ವೇಳೆ ಹೆಡ್ ಕಾನ್‌ಸ್ಟೇಬಲ್ ಶ್ರೀನಿವಾಸ್ ಅವರಿಗೆ ಗಾಯಗಳಾಗಿತ್ತು. ಕೆಲ ದಿನಗಳ ಹಿಂದೆ ಉಲ್ಲಾಳ ಮುಖ್ಯರಸ್ತೆಯ ಬಿಳೆಕಲ್ಲು ನಿಂಜಾ ಕಾರ್ಟ್ ಆನ್‌ಲೈನ್ ಹಣ್ಣು ಮತ್ತು ತರಕಾರಿ ಮಾರಾಟ ಸಂಸ್ಥೆ ಗೋದಾಮಿಗೆ ನುಗ್ಗಿ ರಾಜೇಶ್ ತಂಡ ದರೋಡೆ ನಡೆಸಿತ್ತು.

ಅಮೆರಿಕದ ಮಾಲ್‌ನಲ್ಲಿ ಗುಂಡಿನ ಮೊರೆತ, 8 ಮಂದಿಗೆ ಗಾಯಅಮೆರಿಕದ ಮಾಲ್‌ನಲ್ಲಿ ಗುಂಡಿನ ಮೊರೆತ, 8 ಮಂದಿಗೆ ಗಾಯ

Recommended Video

ಬಿಜೆಪಿಯಲ್ಲಿ ಬಿರುಕು !! | Oneindia Kannada

ದಿನದಲ್ಲಿ ನಗರದಲ್ಲಿ ನಡೆದ ಶೂಟೌಟ್‌ಗಳು
*ಜ.7-ಶ್ರೀರಾಂಪುರದ ಕಾರ್ತಿಕ್ ಅಲಿಯಾಸ್ ಗುಂಡನಿಗೆ ನಂದಿನಿ ಲೇಔಟ್ ಪೊಲೀಸರಿಂದ ಗುಂಡೇಟು
*ಜ.9-ಕಾಚಮಾರನಹಳ್ಳಿಯಲ್ಲಿ ಮನೆಗಳ್ಳ ನವೀನ್ ಮೇಲೆ ಗುಂಡಿನ ದಾಳಿ
*ಜ.18-ಪೊಲೀಸರ ಮೇಲೆ ಗುಂಡು ಹಾರಿಸಿದ್ದ ಮೆಹರಾಜ್ ಮೇಲೆ ಕೆಜಿ ಹಳ್ಳಿ ಪೊಲೀಸರ ಗುಂಡಿನ ದಾಳಿ
*ಜ.18-ರೌಡಿಶೀಟರ್ ವಿಜಯ್ ಅಲಿಯಾಸ್ ಗೊಣ್ಣೆ ವಿಜಿಗೆ ಗುಂಡೆಠೂ
*ಜ.19-ಆಂಧ್ರಹಳ್ಳಿಯ ಪಾತಕಿ ಪ್ರವೀಣ್ ಮೇಲೆ ಪೀಣ್ಯ ಪೊಲೀಸರ ಗುಂಡಿನ ದಾಳಿ
*ಜ.21-ದುಷ್ಕರ್ಮಿ ರಾಜೇಶ್‌ಗೆ ಬ್ಯಾಡರಹಳ್ಳಿ ಠಾಣೆ ಪೊಲೀಸರಿಂದ ಗುಂಡಿನ ದಾಳಿ

English summary
There have been 6 shootouts in Bengaluru in the last 21 days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X