ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೈಯಪ್ಪನಹಳ್ಳಿ ಟರ್ಮಿನಲ್‌ನಿಂದ ಓಡಲಿವೆ 6 ರೈಲು, ಪಟ್ಟಿ

|
Google Oneindia Kannada News

ಬೆಂಗಳೂರು ಜು.4: ಬೆಂಗಳೂರಿನ ಯಶವಂತಪುರ ಹಾಗೂ ಕಂಟೋನ್ಮೆಂಟ್ ನಿಲ್ದಾಣಗಳಿಂದ ಸಂಚರಿಸುತ್ತಿದ್ದ 6 ಜೋಡಿ ರೈಲುಗಳು ಇನ್ನು ಮುಂದೆ ಬೈಯಪ್ಪನಹಳ್ಳಿಯಲ್ಲಿರುವ ಸರ್. ಎಂ. ವಿಶ್ವೇಶ್ವರಯ್ಯ ರೈಲ್ವೆ ಟರ್ಮಿನಲ್‌ನಿಂದ ಸಂಚರಿಸಲಿವೆ.

ಬೆಂಗಳೂರಿನ ಪ್ರಮುಖ ರೈಲು ನಿಲ್ದಾಣಗಳಲ್ಲಿನ ಜನ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಯಶವಂತಪುರ ಹಾಗೂ ಕಂಟೋನ್ಮೆಂಟ್ ನಿಲ್ದಾಣಗಳಲ್ಲಿನ 6 ಜೋಡಿ ರೈಲುಗಳನ್ನು ಬೈಯಪ್ಪನಹಳ್ಳಿಯಲ್ಲಿರುವ ಸರ್. ಎಂ. ವಿಶ್ವೇಶ್ವರಯ್ಯ ರೈಲ್ವೆ ಟರ್ಮಿನಲ್ ಸ್ಥಳಾಂತರಿಸಲು ನೈಋತ್ಯ ನಿರ್ಧರಿಸಿದೆ.

ಬಿಎಂಟಿಸಿ ನೇಮಕಾತಿ; ಜುಲೈ 8ರೊಳಗೆ ಅರ್ಜಿ ಹಾಕಿ ಬಿಎಂಟಿಸಿ ನೇಮಕಾತಿ; ಜುಲೈ 8ರೊಳಗೆ ಅರ್ಜಿ ಹಾಕಿ

ಇದರಿಂದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಯಶವಂತಪುರ, ದಂಡು ರೈಲು ನಿಲ್ದಾಣಗಳಲ್ಲಿ ಪ್ರಯಾಣಕರ ಓಡಾಟ ಕಡಿಮೆಯಾಗಿ ಜನದಟ್ಟಣೆ ಕಡಿಮೆ ಆಗಲಿದೆ. ನೈಋತ್ಯ ರೈಲ್ವೆ ಕಳೆದ ಜೂನ್ 6ರಂದು ದೂರದ ಮೂರು ಜೋಡಿ ರೈಲುಗಳ ಸಂಚಾರವನ್ನು ಟರ್ಮಿನಲ್‌ನಿಂದ ಆರಂಭಿಸಿತ್ತು.

ಇದೀಗ ಪುನಃ 6 ಜೋಡಿ ರೈಲುಗಳನ್ನು ಬೈಯಪ್ಪನಹಳ್ಳಿ ಟರ್ಮಿನಲ್‌ಗೆ ಸ್ಥಳಾಂತಸಲಿದೆ. ಇನ್ನು ಮುಂದೆ ಯಶವಂತಪುರ, ಕಂಟೋನ್ಮೆಂಟ್ ನಿಲ್ದಾಣದಿಂದ ಹೊರಡುತ್ತಿದ್ದ ರೈಲುಗಳು ಬೈಯಪ್ಪನಹಳ್ಳಿಯಿಂದ ಹೊರಡುತ್ತವೆ. ರೈಲುಗಳ ಪಟ್ಟಿ ಇಲ್ಲಿದೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: 14 ವರ್ಷದಲ್ಲಿ 25 ಕೋಟಿ ಪ್ರಯಾಣಿಕರುಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: 14 ವರ್ಷದಲ್ಲಿ 25 ಕೋಟಿ ಪ್ರಯಾಣಿಕರು

ಆರು ರೈಲು ಸೇವೆಗಳ ಮಾಹಿತಿ ಹೀಗಿದೆ

ಆರು ರೈಲು ಸೇವೆಗಳ ಮಾಹಿತಿ ಹೀಗಿದೆ

ಬೈಯಪ್ಪನಹಳ್ಳಿ ಟರ್ಮಿನಲ್ ನಿಂದ-ಹತಿಯಾ (18637/18638), ಟರ್ಮಿನಲ್- ಭುಬನೇಶ್ವರ (12845/2846), ಟರ್ಮಿನಲ್ - ಹೌರಾಹ್ (22887/22888), ಟರ್ಮಿನಲ್ - ಹತಿಯಾ (12835/12836), ಟರ್ಮಿನಲ್ -ಟಾಟಾನಗರ (12889/12890) ಮತ್ತು ಟರ್ಮಿನಲ್ -ಮುಜಾಫರ್ ನಗರ (15228/15227) ಸಂಚರಿಸಲಿವೆ. ಇದರಲ್ಲಿ ಟರ್ಮಿನಲ್ - ಹತಿಯಾ (12835/12836) ಮಾತ್ರ ವಾರಕ್ಕೆ ಎರಡು ಬಾರಿ ಸಂಚರಿಸಿದರು. ಉಳಿದ ರೈಲುಗಳು ವಾರಕ್ಕೊಮ್ಮೆ ಮಾತ್ರ ಸಂಚರಿಸಲಿವೆ ಎಂದು ರೈಲ್ವೆ ಇಲಾಖೆ ಮೂಲಗಳು ತಿಳಿಸಿವೆ.

ಜುಲೈ 16 ರಿಂದ 6 ಜೋಡಿ ರೈಲುಗಳು ಸೇವೆ

ಜುಲೈ 16 ರಿಂದ 6 ಜೋಡಿ ರೈಲುಗಳು ಸೇವೆ

ಈ ಕುರಿತು ಪ್ರತಿಕ್ರಿಯಿಸಿರುವ ರೈಲ್ವೆ ಇಲಾಖೆ ಬೆಂಗಳೂರು ವಿಭಾಗೀಯ ವ್ಯವಸ್ಥಾಪಕ ಶ್ಯಾಮ್ ಸಿಂಗ್, "ರೈಲು ಸೇವೆಗಳ ಸ್ಥಳಗಳನ್ನು ಬೈಯಪ್ಪನಹಳ್ಳಿ ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ಗೆ ಬದಲಾಯಿಸುವುದರಿಂದ ಯಶವಂತಪುರ ಹಾಗೂ ಕಂಟೋನ್ಮೆಂಟ್ ರೈಲು ನಿಲ್ದಾಣಗಳಲ್ಲಿನ ಜನದಟ್ಟಣೆ ಕಡಿಮೆ ಆಗುತ್ತದೆ. ಇದರಿಂದ ಪರಿಣಾಮಕಾರಿ ಸೇವೆ ಸಾಧ್ಯವಾಗುತ್ತದೆ" ಎಂದರು.

ಸ್ಥಳಾಂತರ ಮಾಡಲಾದ 6 ಜೋಡಿ ರೈಲುಗಳು ಜುಲೈ 16 ರಿಂದ ಟರ್ಮಿನಲ್ ನಿಂದ ಸೇವೆ ಆರಂಭಿಸಲಿವೆ. ಟರ್ಮಿನಲ್ ನಿಂದ ಹೊರಡುವ ರೈಲುಗಳ ಸೇವೆ, ಪ್ರಯಾಣಿಕರ ಪ್ರತಿಕ್ರಿಯೆ ನೋಡಿಕೊಂಡು ಮುಂದಿನ ದಿನಗಳಲ್ಲಿ ಟರ್ಮಿನಲ್ ನಲ್ಲಿ ಇನ್ನಷ್ಟು ರೈಲು ಸೇವೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

314ಕೋಟಿ ವೆಚ್ಚದಲ್ಲಿ ನಿರ್ಮಾಣ

314ಕೋಟಿ ವೆಚ್ಚದಲ್ಲಿ ನಿರ್ಮಾಣ

ಬೈಯಪ್ಪನಹಳ್ಳಿ ಸರ್. ಎಂ. ವಿಶ್ವೇಶ್ವರಯ್ಯ ರೈಲ್ವೆ ಟರ್ಮಿನಲ್ ಇದು ಭಾರತದ ರೈಲು ನಿಲ್ದಾಣ ಎಂದು ನಂಬದ ರೀತಿಯಲ್ಲಿ ಅಭಿವೃದ್ಧಿ ಕಂಡಿದೆ. ಒಟ್ಟು 314 ಕೋಟಿ ವೆಚ್ಚದಲ್ಲಿ ಸುವ್ಯವಸ್ಥಿತವಾಗಿ ವಿಮಾನ ನಿಲ್ದಾಣ ರೀತಿಯಲ್ಲಿ ನಿರ್ಮಿಸಲಾಗಿದೆ. ನಗರದ ಇತರ ನಿಲ್ದಾಣಗಳಲ್ಲಿ ಜನದಟ್ಟಣೆ ಮಾಡುವ ಪ್ರಮುಖ ಉದ್ದೇಶದಿಂದ ಬೈಯಪ್ಪನಹಳ್ಳಿಯಲ್ಲಿ ಇಂಥದ್ದೊಂದು ನಿಲ್ದಾಣ ನಿರ್ಮಿಸಲಾಗಿದೆ. ಕಳೆದ ಜೂ.20ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಟರ್ಮಿನಲ್ ಗೆ ಅಧಿಕೃತ ಚಾಲನೆ ನೀಡಿದ್ದರು.

ಮೂರನೇ ದೊಡ್ಡ ನಿಲ್ದಾಣ

ಮೂರನೇ ದೊಡ್ಡ ನಿಲ್ದಾಣ

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮತ್ತು ಯಶವಂತಪುರ ರೈಲು ನಿಲ್ದಾಣ ಬಳಿಕ ಮೂರನೇ ಕೋಚಿಂಗ್ ಟರ್ಮಿನಲ್ ರೈಲು ನಿಲ್ದಾಣ ಇದಾಗಿದೆ. ಏಳು ಫ್ಲಾಟ್ ಫಾರ್ಮ್ ಮತ್ತು ಏಳು ಸ್ಟಾಬ್ಲಿಂಗ್ ಗಳು ಇವೆ. ಪ್ರತಿ ಫ್ಲಾಟ್ ಫಾರ್ಮ್ ಗಳು 15ಮೀಟರ್ ಅಗಲ 600ಮೀಟರ್ ಉದ್ದ ಇವೆ. ಎಲ್ಲ ಫ್ಲಾಟ್ ಫಾರ್ಮ್ ಗಳನ್ನು ಸಂಪರ್ಕಿಸಲು ಸಬ್ ವೇ ಅಳವಡಿಸಲಾಗಿದ್ದು, ಮಳೆನೀರು ಕೊಯ್ಲು ಅಳವಡಿಕೆ ಮಾಡಲಾಗಿದೆ. ದೇಶದಲ್ಲೇ ಇದೊಂದು ಅತ್ಯುತ್ತಮ ಮಾದರಿಯ ರೈಲು ನಿಲ್ದಾಣವಾಗಿದೆ.

Recommended Video

Karnataka Rain ಮುಂದಿನ ಕೆಲವು ದಿನಗಳು Orange alert | *Karnataka | OneIndia Kannada

English summary
Six long distance train will be Starting to service in new Airport like Sir M Visvesvaraya at Baiyappanahalli Terminal from July 16, said Bengaluru railway division officer
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X