ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರ್ನಾಟಕದ ಮಾಜಿ ಸಾರಥಿಯ 'ಕೃಷ್ಣ ಪಥ' ಹೇಗಿದೆ ಗೊತ್ತೇ?

|
Google Oneindia Kannada News

ಬೆಂಗಳೂರು, ಜನವರಿ.04: ಜೀವನದಲ್ಲಿ ಬಂದ ಕಷ್ಟಗಳನ್ನೆಲ್ಲ ಎದುರಿಸಿದ ನಂತರವೇ ವ್ಯಕ್ತಿಯು ನಿಜವಾದ ಮನುಷ್ಯನಾಗಲು ಸಾಧ್ಯ ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಹೇಳಿದರು. ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಸಾಧನೆ -ಸಿದ್ದಿಗಳ ಪರಿಚಯ ಮತ್ತು ಆಕರ ಗ್ರಂಥಗಳನ್ನು ಲೋಕಾರ್ಪಣೆಗೊಳಿಸಲಾಯಿತು.
ಈ ವೇಳೆ ಮಾತನಾಡಿದ ಎಸ್.ಎಂ.ಕೃಷ್ಣ, ಮೊದಲೆಲ್ಲಾ ದೇವರೇ ಕಷ್ಟಗಳನ್ನೆಲ್ಲಾ ನನಗೊಬ್ಬನಿಗೆ ಏಕೆ ಕೊಟ್ಟೆ, ಎಲ್ಲರಿಗೂ ಸ್ವಲ್ಪ ಸ್ವಲ್ಪ ಹಂಚು ಎಂದು ಕೇಳುತ್ತಿದ್ದೆ‌. ಆದರೆ ಈಗ ಅನಿಸುತ್ತಿದೆ ಕಷ್ಟಗಳು ಬಂದಿದ್ದು, ಅದನ್ನು ನಾನು ಎದುರಿಸಿದ್ದು ಒಳ್ಳೆಯದೇ ಆಯ್ತು. ನಾನು ಪರಿಪೂರ್ಣ ಮನುಷ್ಯನಾಗಲು ಸಾಧ್ಯವಾಯ್ತು ಎಂದು ಹೇಳಿದರು.

ಡಿ. ಕೆ. ಶಿವಕುಮಾರ್ ಭೇಟಿಯಾದ ಬಿಜೆಪಿ ನಾಯಕ ಎಸ್. ಎಂ. ಕೃಷ್ಣ
ಕೃಷ್ಣ ಅವರ ಆತ್ಮಕಥನ 'ಕೃಷ್ಣಪಥ' ಪುಸ್ತಕವನ್ನು ಮೈಸೂರಿನ ರಾಮಕೃಷ್ಣ ಆಶ್ರಮದ ಮುಕ್ತಿದಾನಂದ ಮಹಾರಾಜ್ ಲೋಕಾರ್ಪಣೆಗೊಳಿಸಿದರು. ಸ್ಮೃತಿ ವಾಹಿನಿ ಸೇರಿ ಇತರೆ ಐದು ಪುಸ್ತಕಗಳನ್ನು ನಿವೃತ್ತ ನ್ಯಾಯಮೂರ್ತಿ ಎಂ.ಎನ್. ವೆಂಕಟಾಚಲಯ್ಯ ಬಿಡುಗಡೆಗೊಳಿಸಿದರು.

6 Books Released Written By Ex-CM S.M.Krishna

ಬದುಕಿನ ಸಾರವನ್ನು ಬಿಚ್ಚಿಟ್ಟ ಮಾಜಿ ಮುಖ್ಯಮಂತ್ರಿ:
ತಾವು ಬದುಕಿನಲ್ಲಿ ಎದುರಿಸಿದ ಎಲ್ಲ ಏಳು-ಬೀಳುಗಳ ಬಗ್ಗೆ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ತಮ್ಮ ಮಾತುಗಳಲ್ಲಿ ಬಿಚ್ಚಿಟ್ಟರು. ನಾನು ಯಾರನ್ನು ಎಂದೂ ದ್ವೇಷ ಮಾಡುವ ಪ್ರಯತ್ನ ಮಾಡಲಿಲ್ಲ. ನನ್ನ ತಂದೆಯವರು ನನಲ್ಲಿ ಅಂತಹ ಮೌಲ್ಯಗಳನ್ನು ಬೆಳೆಸಿದ್ದರು. ಕಳೆದ ಮೂರು ದಶಕಗಳಲ್ಲಿ ಯಾರಿಗಾದರೂ ನನ್ಮಿಂದ ತೊಂದರೆಯಾಗಿದ್ದರೆ ನಾನು ಅವರ ಕ್ಷಮೆಯಾಚಿಸುತ್ತೇನೆ ಎಂದರು.
ಈ ಹಿಂದೆ ವರನಟ ಡಾ.ರಾಜ್ ಕುಮಾರ್ ರನ್ನು ಕಾಡುಗಳ್ಳ ವೀರಪ್ಪನ್ ಅಪಹರಿಸಿದಾಗ ನನ್ನಲ್ಲಿ ತಳಮಳ ಉಂಟಾಗಿತ್ತು. ಆದರೆ ಎದೆಗುಂದಲಿಲ್ಲ, ಧೈರ್ಯವಾಗಿ ಎದುರಿಸಿದೆ. ನಾವು ಎದುರಿಸುವ ಸವಾಲುಗಳೇ ನಮ್ಮನ್ನು ನಾಯಕನನ್ನಾಗಿ ಮಾಡುತ್ತದೆ ಎಂಬುದು ಸತ್ಯ ಎಂದು ಕೃಷ್ಣ ಹೇಳಿದರು.
ಈಗಿನ ಪ್ರಜಾಪ್ರಭುತ್ವವು ಹಣಬಲದ ಮೇಲೆ ನಿಂತಿದೆ. ಎಲ್ಲಿಯವರಗೆ ರಾಜಕಾರಣದಲ್ಲಿ ಹಣದ ಪ್ರಭಾವ ಇರುತ್ತದೊ ಅಲ್ಲಿಯವರಗೆ ಒಳ್ಳೆಯ ರಾಜಕಾರಣ ಸಾಧ್ಯವಿಲ್ಲ. ಇದಕ್ಕೆ ಯುವ ಸಮೂಹದ ರಾಜಕೀಯ ಪ್ರವೇಶವೇ ತಕ್ಕ ಪರಿಹಾರ ಎಂದು ಸಲಹೆ ನೀಡಿದರು.

English summary
6 Books Released In Bangalore Written By Karnataka Ex-Chief Minister S.M.Krishna.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X