ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

1ನೇ ಡೋಸ್ ಓಕೆ, 2ನೇ ಡೋಸ್ ಯಾಕೆ; ಸಿಲಿಕಾನ್ ಸಿಟಿ ಜನರ ಹೊಸ ಡೈಲಾಗ್!

|
Google Oneindia Kannada News

ಬೆಂಗಳೂರು, ನವೆಂಬರ್ 15: ಸಿಲಿಕಾನ್ ಸಿಟಿಯಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದೆ. ಅದಾಗ್ಯೂ, ಈ ವಿಷಯ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಸಮಾಧಾನ ತಂದಿಲ್ಲ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಅರ್ಹ ಫಲಾನುಭವಿಗಳ ಪೈಕಿ ಮೊದಲ ಡೋಸ್ ಲಸಿಕೆ ಪಡೆದವರು ಎರಡನೇ ಡೋಸ್ ಲಸಿಕೆ ಪಡೆಯುವಲ್ಲಿ ಹಿಂದುಳಿದಿರುವುದು ಪಾಲಿಕೆ ಅಧಿಕಾರಿಗಳನ್ನು ಚಿಂತೆಗೀಡು ಮಾಡಿದೆ. ಮೊದಲಡೋಸ್ ಕೊವಿಡ್-19 ಲಸಿಕೆ ಪಡೆದ 6.6 ಲಕ್ಷ ಜನರು ಇನ್ನೂ ಎರಡನೇ ಡೋಸ್ ಲಸಿಕೆ ಪಡೆದುಕೊಂಡಿಲ್ಲ ಎಂಬ ಅಂಕಿ-ಅಂಶವನ್ನು ಬಿಬಿಎಂಪಿ ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ.

ಬೆಂಗಳೂರಲ್ಲಿ ಮೊದಲ ಪ್ರಯೋಗ; ಕೋವಿಡ್ ಲಸಿಕೆ ಸಾಗಿಸಿದ ಡ್ರೋನ್ಬೆಂಗಳೂರಲ್ಲಿ ಮೊದಲ ಪ್ರಯೋಗ; ಕೋವಿಡ್ ಲಸಿಕೆ ಸಾಗಿಸಿದ ಡ್ರೋನ್

ಸಿಲಿಕಾನ್ ಸಿಟಿಯಲ್ಲಿ ಕೊರೊನಾವೈರಸ್ ಲಸಿಕೆಯ ಎರಡನೇ ಡೋಸ್ ಪಡೆಯದವರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ. "ಕೊವಿಡ್-19 ಕಡಿಮೆಯಾಗಿದೆ ಎಂದು ತಿಳಿದಿರುವ ಸಾರ್ವಜನಿಕರು ಲಸಿಕೆ ಪಡೆಯುವುದು ಹಾಗೂ ಶಿಷ್ಟಾಚಾರ ಪಾಲನೆ ಮಾಡುವುದನ್ನೇ ಮರೆಯುತ್ತಿದ್ದಾರೆ. "ಪ್ರಕರಣಗಳು ಕಡಿಮೆಯಾಗುತ್ತಿರುವುದರಿಂದ ಸಾರ್ವಜನಿಕರಲ್ಲಿ ಭಯವು ಕಡಿಮೆಯಾಗಿದೆ. ಎರಡನೇ ಅಲೆ ಹೆಚ್ಚಾಗಿದ್ದ ಸಂದರ್ಭದಲ್ಲಿ ಲಸಿಕೆ ಕೇಂದ್ರಗಳಿಗೆ ಮುಗಿ ಬೀಳುತ್ತಿದ್ದ ಜನರು, ಈಗ ಆರೋಗ್ಯ ಇಲಾಖೆ ಸಿಬ್ಬಂದಿಯೇ ಅವರ ಮನೆ ಬಾಗಿಲಿಗೆ ಹೋದರೆ ಲಸಿಕೆ ಪಡೆದುಕೊಳ್ಳುವ ಆಸಕ್ತಿ ತೋರುತ್ತಿಲ್ಲ. ಮೊದಲ ಡೋಸ್ ಪಡೆದ 6.6 ಲಕ್ಷ ಜನರು ಇಂದಿಗೂ ಎರಡನೇ ಡೋಸ್ ಲಸಿಕೆಯನ್ನು ಪಡೆದುಕೊಂಡಿಲ್ಲ," ಎಂದು ಬಿಬಿಎಂಪಿ ಆರೋಗ್ಯ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೊವಿಡ್-19 ಎರಡನೇ ಡೋಸ್ ಯಾಕೆ?

ಕೊವಿಡ್-19 ಎರಡನೇ ಡೋಸ್ ಯಾಕೆ?

ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಎರಡನೇ ಅಲೆಯ ಭೀತಿ ಹೆಚ್ಚಾಗಿದ್ದ ಸಂದರ್ಭದಲ್ಲಿ ಆತಂಕಗೊಂಡ ಸುಮಾರು 6.6 ಲಕ್ಷ ಜನರು ಲಸಿಕೆಯ ಮೊದಲ ಡೋಸ್ ಪಡೆದುಕೊಂಡಿದ್ದಾರೆ. ಅದಾಗಿ 12 ವಾರಗಳ ನಂತರ ಸಿಲಿಕಾನ್ ಸಿಟಿಯಲ್ಲಿ ಪರಿಸ್ಥಿತಿ ಸುಧಾರಿಸಿದೆ. ಎಲ್ಲಾ ವಲಯಗಳಲ್ಲಿ ಸಹಜವಾಗಿ ವ್ಯಾಪಾರ ವಹಿವಾಟುಗಳು ಶುರುವಾಗಿವೆ. ಈ ಹಂತದಲ್ಲಿ ಜನರು ಕೊವಿಡ್-19 ಲಸಿಕೆಯ ಎರಡನೇ ಡೋಸ್ ಪಡೆದುಕೊಳ್ಳುವ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಆದಾಗ್ಯೂ, ನಾವು ಮೊದಲ ಡೋಸ್ ಲಸಿಕೆ ಪಡೆದುಕೊಂಡು 2ನೇ ಡೋಸ್ ಪಡೆಯದವರನ್ನು ಲಸಿಕೆ ಕೇಂದ್ರಗಳಿಗೆ ಕರೆ ತರುವ ಕೆಲಸವನ್ನು ಮಾಡುತ್ತಿದ್ದೇವೆ," ಎಂದು ಅಧಿಕಾರಿ ಹೇಳಿದ್ದಾರೆ.

ಬೆಂಗಳೂರು ವಲಯವಾರು ಅಂಕಿ-ಅಂಶ

ಬೆಂಗಳೂರು ವಲಯವಾರು ಅಂಕಿ-ಅಂಶ

ಬೆಂಗಳೂರಿನಲ್ಲಿ ಒಟ್ಟು 6,66,491 ಮಂದಿ ಕೊವಿಡ್-19 ಸೋಂಕಿನ ಎರಡನೇ ಡೋಸ್ ಲಸಿಕೆಯನ್ನು ಪಡೆದುಕೊಂಡಿಲ್ಲ. ಸಿಲಿಕಾನ್ ಸಿಟಿಯಲ್ಲಿ ವಲಯವಾರು ಎಷ್ಟು ಮಂದಿ ಇನ್ನೂ 2ನೇ ಡೋಸ್ ಲಸಿಕೆಯನ್ನು ಬಾಕಿ ಉಳಿಸಿಕೊಂಡಿದ್ದಾರೆ ಎಂಬ ಅಂಕಿ-ಅಂಶವನ್ನು ಕೆಳಗಿನ ಪಟ್ಟಿಯಲ್ಲಿ ನೋಡಿ ತಿಳಿಯೋಣ.

ವಲಯ 2ನೇ ಡೋಸ್ ಪಡೆಯದವರ ಸಂಖ್ಯೆ
ಬೊಮ್ಮನಹಳ್ಳಿ 71,567
ದಾಸರಹಳ್ಳಿ 19,906
ಪೂರ್ವ ವಲಯ 1,32,482
ಮಹಾದೇವಪುರ 70,322
ಆರ್ ಆರ್ ನಗರ 59,912
ದಕ್ಷಿಣ ವಲಯ 1,52,051
ಪಶ್ಚಿಮ ವಲಯ 1,14,000
ಯಲಹಂಕ 46,251
ಅನಾರೋಗ್ಯ ಸಮಸ್ಯೆ ಎದುರಿಸುತ್ತಿರುವವರು 2ನೇ ಡೋಸ್ ಪಡೆಯುತ್ತಿಲ್ಲ

ಅನಾರೋಗ್ಯ ಸಮಸ್ಯೆ ಎದುರಿಸುತ್ತಿರುವವರು 2ನೇ ಡೋಸ್ ಪಡೆಯುತ್ತಿಲ್ಲ

"ಬೆಂಗಳೂರಿನಲ್ಲಿ ಕೊವಿಡ್-19 ಮೊದಲ ಡೋಸ್ ಲಸಿಕೆ ಪಡೆದುಕೊಂಡಿರುವ ಶೇಕಡಾವಾರು ಜನರು ಅಡ್ಡಪರಿಣಾಮಗಳ ಬಗ್ಗೆ ಚಿಂತಾಕ್ರಾಂತರಾಗಿದ್ದಾರೆ. ಮೊದಲ ಡೋಸ್ ಪಡೆದುಕೊಂಡ ನಂತರದಲ್ಲಿ ಎದುರಿಸಿದ ಜ್ವರ ಮತ್ತು ತಲೆನೋವಿನಿಂದ ಆತಂಕಗೊಂಡಿರುವ ಹಲವು ಮಂದಿ ಎರಡನೇ ಡೋಸ್ ಲಸಿಕೆ ಪಡೆದುಕೊಳ್ಳದಿರುವುದು ಹೆಚ್ಚಾಗಿ ಕಂಡು ಬಂದಿದೆ," ಎಂದು ಪಶ್ಚಿಮ ವಲಯದ ಲಸಿಕೆ ವಿತರಣೆ ಸಿಬ್ಬಂದಿಯೊಬ್ಬರು ಹೇಳಿದ್ದಾರೆ.

ಬಿಬಿಎಂಪಿ ಕಾಲ್ ಸೆಂಟರ್ ಮೂಲಕ ಪ್ರೇರೇಪಣೆ

ಬಿಬಿಎಂಪಿ ಕಾಲ್ ಸೆಂಟರ್ ಮೂಲಕ ಪ್ರೇರೇಪಣೆ

"ಬೆಂಗಳೂರಿನಲ್ಲಿ ಬಿಬಿಎಂಪಿ ಅಧಿಕಾರಿಗಳು ಪ್ರತಿ ವಾರ್ಡ್‌ನಲ್ಲಿ 2ನೇ ಡೋಸ್ ಪಡೆದುಕೊಳ್ಳದ ನಾಗರಿಕರ ಪಟ್ಟಿಯನ್ನು ಮಾಡಿಕೊಂಡಿದ್ದಾರೆ. ಬಿಬಿಎಂಪಿ ಕಾಲ್ ಸೆಂಟರ್‌ಗಳು ನಿರಂತರವಾಗಿ ಅವರಿಗೆ ಕರೆ ಮಾಡುತ್ತಿವೆ. ಎರಡನೇ ಡೋಸ್ ಲಸಿಕೆ ಪಡೆದುಕೊಳ್ಳುವಂತೆ ಪ್ರೇರೇಪಣೆ ನೀಡುತ್ತಿವೆ. ಇದಲ್ಲದೆ, ನಾಗರಿಕ ಸಂಸ್ಥೆಯು ಸಂಪೂರ್ಣ ವ್ಯಾಕ್ಸಿನೇಷನ್‌ನ ಅಗತ್ಯ ಮತ್ತು ಪ್ರಯೋಜನಗಳ ಬಗ್ಗೆ ಜಾಗೃತಿ ಮೂಡಿಸಲು ಪ್ರಯತ್ನಿಸುತ್ತಿವೆ," ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ತಿಳಿಸಿದ್ದಾರೆ.

"ನಮ್ಮ ಬ್ಲಾಕ್ ಮತ್ತು ವಲಯ ಮಟ್ಟದ ಲಸಿಕೆ ವಿತರಕರು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದು, ನಾಗರಿಕರನ್ನು ಗುರುತಿಸಿ ಪ್ರತಿ ಮನೆಗೆ ಭೇಟಿ ನೀಡುತ್ತಿದ್ದಾರೆ. ಕೊವಿಡ್-19 ಲಸಿಕೆ ಪಡೆದುಕೊಳ್ಳದ ನಾಗರಿಕರಿಗೆ ತಕ್ಷಣ ಲಸಿಕೆ ಹಾಕಿಸಿಕೊಳ್ಳುವಂತೆ ಮನವೊಲಿಸುತ್ತಿದ್ದಾರೆ.

Recommended Video

ಡಾ.ಸುಧಾಕರ್ ರಾಂಗ್ ಟ್ರೀಟ್ ಮೆಂಟ್ ನಿಂದ ಬಿಜೆಪಿಗೆ ಭಾರಿ ಮುಜುಗರ | Oneindia Kannada

English summary
6.6 lakh People due for Second Dose Of Coronavirus Vaccine in Bengaluru. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X