• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಈ ಬಾರಿ ಆನ್ಲೈನಲ್ಲಿ ದಕ್ಷಿಣ ಭಾರತದ ಅತಿದೊಡ್ಡ ಗಣೇಶ ಉತ್ಸವ

|

ಬೆಂಗಳೂರು, ಅಗಸ್ಟ್ 21: ದಕ್ಷಿಣ ಭಾರತದ ಅತಿದೊಡ್ಡ ಗಣೇಶ ಉತ್ಸವ ಎನಿಸಿರುವ ಬೆಂಗಳೂರು ಗಣೇಶ ಉತ್ಸವ (ಬಿಜಿಯು)ವನ್ನು ಈ ಬಾರಿ ಸುರಕ್ಷತಾ ಮುನ್ನೆಚ್ಚರಿಕೆಗಳ ಮಾನದಂಡಗಳಲ್ಲಿ ಆಚರಿಸಲಾಗುತ್ತಿದೆ. ಬಹುನಿರೀಕ್ಷಿತ 58ನೇ ಆವೃತ್ತಿಯ ಈ ಉತ್ಸವವು ಆ.22ರಿಂದ ಸೆ.1ರವರೆಗೆ ಫೇಸ್‌ಬುಕ್‌, ಯೂಟ್ಯೂಬ್, ಇನ್‌ಸ್ಟಾಗ್ರಾಂ ಮತ್ತು ಟ್ವಿಟರ್‌ನಲ್ಲಿ ವರ್ಚುವಲ್‌ ಲೈವ್‌ನಲ್ಲಿಯೇ ಜರುಗಲಿದೆ.

   ಇವನು ಕೊಟ್ಟ ಆಫರ್ ನೋಡಿ ಅಂಗಡಿ ಸೀಲ್ ಮಾಡಿದ ಪೊಲೀಸ್ | Oneindia Kannada

   ಬಸವನಗುಡಿಯ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದಲ್ಲಿರುವ ಗಣೇಶ ಮಂಟಪದಲ್ಲಿ ವಿನಾಯಕ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುತ್ತಿದೆ. ದೈನಂದಿನ ಪೂಜೆಯನ್ನೂ ಕೂಡ ವರ್ಚುವಲ್‌ ಆಗಿ ತೋರಿಸಲಾಗುತ್ತದೆ.

   58ನೇ ಉತ್ಸವಕ್ಕಾಗಿ ವೇದಿಕೆಯಲ್ಲಿ ಪ್ರಸಿದ್ಧ ಸಂಗೀತಗಾರರು ಮತ್ತು ಕಲಾವಿದರು ಒಟ್ಟು ಗೂಡಲಿದ್ದಾರೆ. ಒಟ್ಟು 10 ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮ ಇದೇ ಸಭಾಂಗಣದಿಂದ ನೇರಪ್ರಸಾರವಾಗಲಿದೆ. ಕಲೆ ಮತ್ತು ಸಂಗೀತ ಪ್ರಿಯರ ಮನಗೆಲ್ಲುವಂತ ಕಾರ್ಯಕ್ರಮ ನೀಡಲು ವೇದಿಕೆ ಸಜ್ಜಾಗಿದೆ.

   12 ತಾಸುಗಳ ನಿರಂತರ ಸುಗಮ ಸಂಗೀತ

   12 ತಾಸುಗಳ ನಿರಂತರ ಸುಗಮ ಸಂಗೀತ

   ಖ್ಯಾತ ಗಾಯಕರಾದ ವಿಜಯ್‌ಪ್ರಕಾಶ್ ಅವರ ಲೈವ್ ಇನ್ ಕನ್ಸರ್ಟ್, ಪ್ರವೀಣ್ ಡಿ. ನೇತೃತ್ವದಲ್ಲಿ ರಾಜ್ಯದ ಗಾಯಕರನ್ನು ಒಳಗೊಂಡ 12 ತಾಸುಗಳ ನಿರಂತರ ಸುಗಮ ಸಂಗೀತ, ರಘು ದೀಕ್ಷಿತ್ ಅವರ ಫೋಕ್ ರಾಕ್ ಮ್ಯೂಸಿಕಲ್ ಕನ್ಸರ್ಟ್ ,ಪ್ರವೀಣ್ ಗೋಡ್ಖಿಂಡಿಯವರ ಸಂಗೀತ ಕಛೇರಿ ಕಾರ್ಯಕ್ರಮಗಳು ಸಂಗೀತ ಪ್ರಿಯರ ಮನಸೂರೆಗೊಳ್ಳಲಿದೆ.

   58 ವರ್ಷಗಳ ಇತಿಹಾಸ ಹೊಂದಿರುವ ಉತ್ಸವ

   58 ವರ್ಷಗಳ ಇತಿಹಾಸ ಹೊಂದಿರುವ ಉತ್ಸವ

   ''58 ವರ್ಷಗಳಲ್ಲಿ ನಾವು ಸಾಂಸ್ಕೃತಿಕವಾಗಿ, ಆಧ್ಯಾತ್ಮಿಕವಾಗಿ ಉತ್ಸವವನ್ನು ಉತ್ಸಾಹದಿಂದ ನಡೆಸಿಕೊಂಡು ಬಂದಿದ್ದೇವೆ. ಬೆಂಗಳೂರು ಜನರ ಸುರಕ್ಷತೆ ಹಾಗೂ ಆರೋಗ್ಯವನ್ನೂ ಗಮನದಲ್ಲಿಟ್ಟುಕೊಂಡು ಈ ಬಾರಿ ವರ್ಚುವಲ್‌ ರೂಪದಲ್ಲಿಉತ್ಸವವನ್ನು ನಡೆಸಲು ತೀರ್ಮಾನಿಸಿದ್ದೇವೆ'' ಎಂದು ಬೆಂಗಳೂರು ಗಣೇಶ ಉತ್ಸವ (ಬಿಜಿಯು) ತಿಳಿಸಿದೆ.

    ವ್ಯವಸ್ಥಾಪಕ ಟ್ರಸ್ಟಿ ಎಸ್.ಎಂ. ನಂದೀಶ್

   ವ್ಯವಸ್ಥಾಪಕ ಟ್ರಸ್ಟಿ ಎಸ್.ಎಂ. ನಂದೀಶ್

   ''ಹಬ್ಬದ ಉತ್ಸಾಹವನ್ನು ಜೀವಂತವಾಗಿರಿಸುವುದಕ್ಕಾಗಿ ವರ್ಚುವಲ್ ಲೈವ್ ಅನ್ನು ಆಯ್ಕೆ ಮಾಡಿ ಕೊಳ್ಳುವ ನಿರ್ಧಾರವನ್ನು ತೆಗೆದುಕೊಂಡೆವು. ಎಲ್ಲ ಸವಾಲುಗಳ ನಡುವೆಯೂ, ಸಂಗೀತಗಾರರು ಮತ್ತು ಕಲಾವಿದರು ಪ್ರದರ್ಶನ ನೀಡಲಿದ್ದಾರೆ'' ಎಂದು ಬಿಜಿಯು ವ್ಯವಸ್ಥಾಪಕ ಟ್ರಸ್ಟಿ ಎಸ್.ಎಂ. ನಂದೀಶ್ ಹೇಳಿದರು.

   11 ದಿನಗಳ ಕಾಲ ಮಂಟಪದಲ್ಲಿ ಪೂಜೆ

   11 ದಿನಗಳ ಕಾಲ ಮಂಟಪದಲ್ಲಿ ಪೂಜೆ

   ಎಲ್ಲಾ ಸಾಂಪ್ರದಾಯಿಕ ಆಚರಣೆಗಳೊಂದಿಗೆ, ಗಣೇಶನನ್ನು 11 ದಿನಗಳ ಕಾಲ ಮಂಟಪದಲ್ಲಿ ಪೂಜಿಸಲಾಗುತ್ತಿದ್ದು, ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಸಾರ್ವಜನಿಕರಿಗೆ ವೀಕ್ಷಿಸಲು ಅವಕಾಶ ನೀಡಲಾಗುತ್ತಿದೆ ಹಾಗೂ ಮಾಸ್ಕ್ ಗಳನ್ನು ಕಡ್ಡಾಯಗೊಳಿಸಲಾಗುತ್ತಿದೆ.

   English summary
   58th Edition of Bengaluru Ganesh Utsava Goes Virtual on FB, Youtube Instagram and Twitter From August 22 (Ganesh Chaturthi day) to September 1, 2020.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X