ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದೀಪಾವಳಿ ನೆಪ, ಟಿಕೆಟ್ ದರ ದುಪ್ಪಟ್ಟು: 550 ಖಾಸಗಿ ಬಸ್‌ಗಳ ವಿರುದ್ಧ ದೂರು

|
Google Oneindia Kannada News

ಬೆಂಗಳೂರು, ನವೆಂಬರ್ 5: ದೀಪಾವಳಿ ನೆಪವೊಡ್ಡಿ ದುಪ್ಪಟ್ಟು ಟಿಕೆಟ್ ದರ ವಸೂಲಿ ಮಾಡುತ್ತಿದ್ದ 550 ಖಾಸಗಿ ಬಸ್‌ಗಳ ಮೇಲೆ ಸಾರಿಗೆ ಇಲಾಖೆ ದೂರು ದಾಖಲಿಸಿಕೊಂಡಿದೆ.

ದೀಪಾವಳಿ ವಿಶೇಷ ಪುರವಣಿ

ಇತ್ತೀಚೆಗೆ ಖಾಸಗಿ ಬಸ್‌ಗಳ ಟಿಕೆಟ್ ದಂಧೆಯ ಕುರಿತು ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಸೂಚನೆ ನೀಡಿದ್ದು, ದುಪ್ಪಟ್ಟು ಟಿಕೆಟ್ ದರ ಹೆಚ್ಚಳ ಮಾಡುವ ಖಾಸಗಿ ಬಸ್‌ಗಳ ಮಾಲೀಕರ ಮೇಲೆ ಕೇಸ್ ಹಾಕುವಂತೆ ತಿಳಿಸಿದ್ದರು. ಹಾಗಾಗಿ ಸಾರಿಗೆ ಇಲಾಖೆಯು 550ಕ್ಕೂ ಹೆಚ್ಚು ಖಾಸಗಿ ಬಸ್‌ಗಳ ಮೇಲೆ ದೂರು ದಾಖಲಿಸಿದೆ.

ಬೇಕಾಬಿಟ್ಟಿ ದರ ವಸೂಲಿ ಮಾಡುವ ಖಾಸಗಿ ಬಸ್‌ಗಳ ವಿರುದ್ಧ ಕ್ರಮ: ಸಿಎಂಬೇಕಾಬಿಟ್ಟಿ ದರ ವಸೂಲಿ ಮಾಡುವ ಖಾಸಗಿ ಬಸ್‌ಗಳ ವಿರುದ್ಧ ಕ್ರಮ: ಸಿಎಂ

ಹಬ್ಬಗಳ ಸೀಸನ್ ಬಂತೆಂದರೆ ಸಾಕು ಶುರು ಖಾಸಗಿ ಬಸ್‌ಗಳ ಟಿಕೆಟ್ ದಂಧೆ, ಒಂದಲ್ಲಾ ಎರಡಲ್ಲಾ ಕೆಲವೊಮ್ಮೆ ಮೂರು ಪಟ್ಟು ದರ ಹೆಚ್ಚಳ ಮಾಡಿದ್ದಿದೆ. ದೀಪಾವಳಿಗೆಂದು ಕೆಎಸ್‌ಆರ್‌ಟಿಸಿ 1500ಕ್ಕೂ ಹೆಚ್ಚು ಬಸ್‌ಗಳಿ ನಿಯೋಜನೆ ಮಾಡಿದೆ. ಆದರೆ ಆ ಬಸ್‌ಗಳು ತುಂಬಿ ಹೋಗಿವೆ. ತ್ವರಿತವಾಗಿ ಊರಿಗೆ ತೆರಳಬೇಕೆಂದರೆ ಖಾಸಗಿ ಬಸ್‌ಗಳನ್ನೇ ಅವಲಂಬಿಸಬೇಕಾಗಿದೆ. ಹಾಗೆ ಹೋಗಬೇಕಾದರೆ ಬಸ್‌ ಕಂಡಕ್ಟರ್ ಹೇಳಿದಷ್ಟು ಹಣವನ್ನು ತೆರವು ಅನಿವಾರ್ಯತೆ ಕೂಡ ಎದುರಾಗಿದೆ.

550 buses booked for high fares

ಖಾಸಗಿ ಬಸ್‌ಗಳ ಹಾವಳಿಯನ್ನು ತಪ್ಪಿಸಲು ಸರ್ಕಾರ ಪಣತೊಟ್ಟಿದೆ, ಸಾರ್ವಜನಿಕರ ನೆರವಿಗೆ ಬಂದಿದೆ. ಇಷ್ಟು ಬಸ್‌ಗಳ ಮೇಲೆ ದೂರು ದಾಖಲಿಸಿರುವುದರಿಂದ ಉಳಿದ ಖಾಸಗಿ ಬಸ್‌ಗಳು ಎಚ್ಚೆತ್ತುಕೊಳ್ಳಬಹುದು ಎನ್ನುವುದು ಅಧಿಕಾರಿಗಳ ಅಭಿಪ್ರಾಯವಾಗಿದೆ.

ದೀಪಾವಳಿಗೆ ಕೆಎಸ್‌ಆರ್‌ಟಿಸಿ ಇಂದ 1500 ಹೆಚ್ಚುವರಿ ಬಸ್‌ದೀಪಾವಳಿಗೆ ಕೆಎಸ್‌ಆರ್‌ಟಿಸಿ ಇಂದ 1500 ಹೆಚ್ಚುವರಿ ಬಸ್‌

ಶುಕ್ರವಾರ ಹಾಗೂ ಶನಿವಾರ 11 ತಂಡಗಳು ಕಾರ್ಯಾಚರಣೆ ನಡೆಸಿದ್ದವು, 40 ಪೊಲೀಸ್ ರು ಹಾಗೂ 20 ಸಾರಿಗೆ ಇಲಾಖೆ ಅಧಿಕಾರಿಗಳು ತಮಕೂರು ರಸ್ತೆ, ಮೈಸೂರು ರಸ್ತೆ, ಗೊರಗುಂಟೆ ಪಾಳ್ಯ, ಆನಂದ ರಾವ್ ವೃತ್ತ, ಮಡಿವಾಳ, ಸಿಲ್ಕ್ ಬೋರ್ಡ್ ಜಂಕ್ಷನ್, ದೇವನಹಳ್ಳಿಯಲ್ಲಿ ಬಸ್ ತಪಾಸಣೆ ನಡೆಸಿದ್ದಾರೆ. ತಪಾಸಣೆ ನವೆಂಬರ್ ಎರಡನೇ ವಾರದವರೆಗೂ ಮುಂದುವರೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

English summary
Transport department officials have booked over 550 private buses for charging exorbitant fares during the festive season. The drive, conducted on Friday and Saturday, is expected to continue till November second week.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X