ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಒಂದು ಎಲ್‌ಇಡಿ ಬೀದಿ ದೀಪಕ್ಕೆ 52 ಸಾವಿರ: ಅಂಥದ್ದೇನಿದೆ ಅದರಲ್ಲಿ?

|
Google Oneindia Kannada News

ಬೆಂಗಳೂರು, ನವೆಂಬರ್ 29: 150 ವ್ಯಾಟ್‌ ಇರುವ ಎಲ್‌ಇಡಿ ಬೀದಿ ದೀಪವು ಮಾರುಕಟ್ಟೆಯಲ್ಲಿ 5 ಸಾವಿರ ರೂಗೆ ಲಭ್ಯವಿದ್ದರೂ ಕೂಡ ಕೆಐಎಡಿಬಿ ಎಂಜಿನಿಯರ್‌ಗಳು ಅದಕ್ಕೆ ಬರೋಬ್ಬರಿ 52,890 ರೂ ವ್ಯಯಿಸುತ್ತಿರುವುದು ಆಶ್ಚರ್ಯ ಮೂಡಿಸಿದೆ.

ಹಾಗೆಂದ ಮಾತ್ರಕ್ಕೆ ಆ ಎಲ್‌ಇಡಿ ದೀಪದಲ್ಲಿ ಏನಿದೆ ಎಂದು ಆಶ್ಚರ್ಯ ಪಡಬೇಡಿ,ಐದು ಸಾವಿರಕ್ಕೆ ಸಿಗುವ ಎಲ್‌ಇಡಿ ದೀಪ ನೀವು ಬೆಳಕನ್ನೇ ಈ ದೀಪವು ಕೂಡ ನೀಡಲಿದೆ.

ಇದು ಒಂದು ಪ್ರದೇಶದ ಎಲ್ಲಾ ದೀಪಗಳಿಗೆ ಸೇರಿ ಅಲ್ಲ, ಕೇವಲ ಒಂದೇ ಬೀದಿ ದೀಪಕ್ಕೆ ಇಷ್ಟು ಹಣವನ್ನು ವ್ಯಯಿಸಲಾಗುತ್ತಿದೆ. ಕೆಂಪೇಗೌಡ ವಿಮಾನ ನಿಲ್ದಾಣದ ಸಮೀಪದಲ್ಲಿರುವ ಏರೋಸ್ಪೇಸ್ ಪಾರ್ಕಿಗೆ 186 ಸ್ಟ್ರೀಟ್‌ಲೈಟ್‌ಗಳನ್ನು ಅಳವಡಿಸುವ ಗುತ್ತಿಗೆ ತೆಗೆದುಕೊಂಡಿತ್ತು.

52 Thousand For One LED Street Light What Is In It

ಅದರ ಜೊತೆಗೆ ವಿದ್ಯುತ್ ಕಂಬ, ಎಚ್‌ಡಿಪಿಇ ಪೈಪ್ ಅಳವಡಿಕೆಯೂ ಕೂಡ ನಡೆಯುತ್ತಿದೆ. ಪ್ರತಿ ವಿದ್ಯುತ್ ಕಂಬಕ್ಕೆ 21,055 ರೂಗಳನ್ನು ವೆಚ್ಚ ಮಾಡಲಾಗುತ್ತಿದೆ. ಎರಡು ಮೀಟರ್ ಬ್ರಾಕೆಟ್‌ಗಳಿಗೆ 3,395ರೂಗಳನನ್ಉ ವ್ಯಯಿಸಲಾಗುತ್ತಿದೆ. ಕೇಬಲ್‌ಗೆ 203 ರೂ, ಎಚ್‌ಡಿಪಿಇ ಪೈಪ್‌ಗಳಿಗೆ 321ರೂ ಹೆಚ್ಚಾಗಿ ವಹಿಸಲಾಗುತ್ತಿದೆ.

ಬೆಂಗಳೂರು ಮೆಟ್ರೋ ನಿಗಮವು 150 ವ್ಯಾಟ್ ಎಲ್‌ಇಡಿ ಬೀದಿ ದೀಪಕ್ಕೆ 11,125 ರೂ ನೀಡಿ ಖರೀದಿ ಮಾಡಿತ್ತು. ಆದರೆ ಕೆಐಎಡಿಬಿ ಒಂದು ದೀಪಕ್ಕೆ 52,890 ರೂ ಖರ್ಚು ಮಾಡುತ್ತಿದೆ. ಆದರೆ ಅಷ್ಟು ಕಡಿಮೆ ಬೆಲೆಗೆ ಸಿಕ್ಕರೂ ಯಾಕೆ ಹೆಚ್ಚು ಹಣ ವ್ಯಯಿಸುತ್ತಿದೆ ಎನ್ನುವುದೇ ಪ್ರಶ್ನೆಯಾಗಿದೆ.

English summary
KIADB engineers buy for 52,890 even though the LED street light Is available in the market for Rs 5,000.150
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X