ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಏರೋ ಇಂಡಿಯಾದಲ್ಲಿ 52 ವಿಮಾನಗಳ ಪ್ರದರ್ಶನ

|
Google Oneindia Kannada News

ಬೆಂಗಳೂರು, ಜನವರಿ 25: ಬೆಂಗಳೂರಲ್ಲಿ ಫೆಬ್ರವರಿಯಲ್ಲಿ ನಡೆಯುತ್ತಿರುವ ಏರೋ ಇಂಡಿಯಾ 2019 ವೈಮಾನಿಕ ಪ್ರದರ್ಶನದಲ್ಲಿ ಒಟ್ಟು 52 ವಿಮಾನಗಳು ಭಾಗವಹಿಸುತ್ತಿವೆ.

ನೀರು ಮತ್ತು ರನ್‌ ವೇ ಮೇಲೆ ಟೇಕ್ ಆಫ್ , ಲ್ಯಾಂಡಿಂಗ್ ಆಗುವ ಬಿರೇವ್ ಬಿ-200 ಆಂಫೀಬಿಯಸ್ ಏರ್‌ ಕ್ರಾಫ್ಟ್ ಕೂಡ ಪ್ರದರ್ಶನದಲ್ಲಿ ಪಾಲ್ಗೊಳ್ಳಲಿದೆ. ಕಾಡ್ಗಿಚ್ಚು ಆರಿಸಲು, ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗೆ ಬಳಕೆಯಾಗುವ ರಷ್ಯಾ ಮೂಲದ ಈ ವಿಮಾನವನ್ನು ಪ್ರಯಾಣಿಕರ ಹಾರಾಟ ಮತ್ತು ಆಂಬುಲೆನ್ಸ್ ಆಗಿ ಕೂಡ ಬಳಕೆ ಮಾಡಲಾಗುತ್ತದೆ.

ಏರೋ ಇಂಡಿಯಾ ಪ್ರದರ್ಶನ : ವಿಮಾನ ಹಾರಾಟದಲ್ಲಿ ಬದಲಾವಣೆ ಏರೋ ಇಂಡಿಯಾ ಪ್ರದರ್ಶನ : ವಿಮಾನ ಹಾರಾಟದಲ್ಲಿ ಬದಲಾವಣೆ

ಇದೇ ಸಮಯದಲ್ಲಿ ಎಲ್‌ಸಿಎ ತೇಜಸ್ 9 ವಿಮಾನಗಳು ಹಾರಾಟ ಪ್ರದರ್ಶನ ನೀಡಲಿದೆ. ಸೂರ್ಯ ಕಿರಣ್ ಮತ್ತು ಸಾರಂಗ್ ತಂಡಗಳು ಕೂಡ ಆಕರ್ಷಕ ಏರೋಬ್ಯಾಟಿಕ್ ಪ್ರದರ್ಶನ ನೀಡಲಿವೆ. ಏರೋ ಇಂಡಿಯಾ ವೈಮಾನಿಕ ಪ್ರದರ್ಶನವು ಫೆಬ್ರವರಿ 20ರಿಂದ ಬೆಂಗಳೂರಿನಲ್ಲಿ ನಡೆಯಲಿದೆ. ಈ ಹಿನ್ನಲೆಯಲ್ಲಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಲಿದೆ.

52 flights confirmed for this year aero india exhibition

ಏರ್‌ ಶೋ ಬೆಂಗಳೂರಿನಿಂದ ಸ್ಥಳಾಂತರ : ಮೋದಿಗೆ ಎಚ್‌ಡಿಕೆ ಪತ್ರ ಏರ್‌ ಶೋ ಬೆಂಗಳೂರಿನಿಂದ ಸ್ಥಳಾಂತರ : ಮೋದಿಗೆ ಎಚ್‌ಡಿಕೆ ಪತ್ರ

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ)ನಲ್ಲಿ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ವಿಮಾನ ನಿಲ್ದಾಣದ ಪ್ರಕಟಣೆ ಹೇಳಿದೆ. ಫೆಬ್ರವರಿ 14 ರಿಂದ 24ರ ತನಕ ಹಲವು ವಿಮಾನಗಳ ಹಾರಾಟದಲ್ಲಿ ಬದಲಾವಣೆಯಾಗಲಿದೆ.

English summary
52 flights are confirmed for aero india exhibition. Every year exhibitor numbers are increasing.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X