ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿಗರಿಗೆ ಬೀದಿನಾಯಿ ಕಾಟ: ಎರಡು ವರ್ಷದಲ್ಲಿ 52,262 ಮಂದಿಗೆ ಕಡಿತ!

|
Google Oneindia Kannada News

ಬೆಂಗಳೂರು,ಜು.20: 2020 ರಿಂದೀಚೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿ 52,262 ಜನರು ನಾಯಿ ಕಡಿತಕ್ಕೆ ಒಳಗಾಗಿದ್ದಾರೆ ಎಂದು ಪಾಲಿಕೆ ಸಮೀಕ್ಷೆಯಿಂದ ತಿಳಿದುಬಂದಿದೆ.

ಬಿಬಿಎಂಪಿ ಈಗ ನಾಯಿಗಳ ಸಂತತಿ ನಿಯಂತ್ರಣದ ಕಾರ್ಯಗಳನ್ನು ಕೈಗೊಳ್ಳಲು ಹೆಚ್ಚಿನ ಎನ್‌ಜಿಒಗಳನ್ನು ಒಳಗೊಳ್ಳುವಂತೆ ಒತ್ತಾಯಿಸಿ ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಗೆ ಮನವಿ ಮಾಡಿದೆ. ಅಲ್ಲದೆ ಈ ಸಮಸ್ಯೆಯನ್ನು ಬಗೆಹರಿಸಲು ಆ್ಯಂಟಿ ರೇಬಿಸ್ ಲಸಿಕೆಗಳನ್ನು ದೊಡ್ಡ ಪ್ರಮಾಣದಲ್ಲಿ ಲಭ್ಯವಾಗುವಂತೆ ಮಾಡಿದೆ.

ಆದಾಗ್ಯೂ, ಅನೇಕ ಸಾಮಾಜಿಕ ಕಾರ್ಯಕರ್ತರು ಮತ್ತು ಎನ್‌ಜಿಒಗಳು ಪಾವತಿಯಲ್ಲಿನ ವಿಳಂಬ ಮತ್ತು ತಮ್ಮ ದುರುಪಯೋಗದ ಕಾರಣದಿಂದ ಪಾಲಿಕೆಯೊಂದಿಗೆ ಕೆಲಸ ಮಾಡಲು ಆಸಕ್ತಿ ಹೊಂದಿಲ್ಲ ಎಂದು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಅನಿಮಲ್ ಬರ್ತ್ ಕಂಟ್ರೋಲ್ (ಎಬಿಸಿ) ಅಭಿಯಾನ ಮತ್ತು ಆ್ಯಂಟಿ ರೇಬೀಸ್ ಲಸಿಕೆ (ಎಆರ್‌ವಿ) ಕಾರ್ಯಕ್ರಮಕ್ಕಾಗಿ ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯಿಂದ ಗುರುತಿಸಲ್ಪಟ್ಟ ಎನ್‌ಜಿಒಗಳು ಪಾಲಿಕೆಯೊಂದಿಗೆ ಒಟ್ಟಾಗಿ ಪರಿಣಾಮಕಾರಿ ಕೆಲಸ ಮಾಡಬೇಕು ಎಂದು ಬಿಬಿಎಂಪಿ ಜಂಟಿ ನಿರ್ದೇಶಕ ಚಂದ್ರಯ್ಯ ಹೇಳಿದ್ದಾರೆ.

Bengaluru: 52,262 Dog bite cases in bbmp limit: survey report

ನಾಯಿ ಕಚ್ಚುವುದು ಮತ್ತು ಬೀದಿ ನಾಯಿಗಳ ಹಾವಳಿಯನ್ನು ಪರಿಹರಿಸಲು ಅನಿಮಲ್ ಬರ್ತ್ ಕಂಟ್ರೋಲ್ ಮತ್ತು ಆ್ಯಂಟಿ ರೇಬೀಸ್ ಲಸಿಕೆ ಅಭಿಯಾನಗಳನ್ನು ಹೆಚ್ಚಿಸಲಾಗಿದೆ. ನಮ್ಮಲ್ಲಿ ಹೆಚ್ಚಿನ ಎನ್‌ಜಿಒಗಳು ಮುಂದೆ ಬರುತ್ತಿಲ್ಲವಾದ್ದರಿಂದ ಹೆಚ್ಚಿನ ಎನ್‌ಜಿಒಗಳನ್ನು ಗುರುತಿಸಲು ನಾವು ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಗೆ ಪತ್ರ ಬರೆದಿದ್ದೇವೆ. ಇದರಿಂದಾಗಿ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಜಾರಿ ಮಾಡಬಹುದಾಗಿದೆ ಎಂದು ಚಂದ್ರಯ್ಯ ಹೇಳಿದರು.

ಎನ್‌ಜಿಒಗಳಿಗೆ ಸಕಾಲದಲ್ಲಿ ಹಣ ಪಾವತಿ ಮಾಡದೆ, ಮೂಲಸೌಕರ್ಯ ಕಲ್ಪಿಸದೆ ಸತಾಯಿಸುತ್ತಿದೆ ಎಂದು ಕಾರ್ಯಕರ್ತರು ಬಿಬಿಎಂಪಿಯನ್ನು ದೂರಿದ್ದಾರೆ. ಬಿಬಿಎಂಪಿಯಲ್ಲಿ ಎಬಿಸಿ ಅಥವಾ ಎಆರ್‌ವಿ ಅಭಿಯಾನದ ಉದ್ದೇಶವು ಯಶಸ್ವಿಯಾದಂತ್ತಿಲ್ಲ. ಎಬಿಸಿ ಕೇಂದ್ರಗಳನ್ನು ಸ್ಥಾಪಿಸಲು ಮತ್ತು ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್‌ಗಳನ್ನು (ಎಸ್‌ಒಪಿ) ಅನುಸರಿಸುವ ಬಗ್ಗೆ ಪಾಲಿಕೆಯು ಸ್ವಲ್ಪವು ತಲೆಕೆಡಿಸಿಕೊಳ್ಳದ ಕಾರಣ ಎನ್‌ಜಿಒಗಳು ನಿರಾಸಕ್ತಿ ತೋರುತ್ತಿವೆ.

Bengaluru: 52,262 Dog bite cases in bbmp limit: survey report

ಕಂಪ್ಯಾಶನ್‌ ಅನ್ಲಿಮಿಟೆಡ್ ಪ್ಲಸ್ ಆಕ್ಷನ್ (ಸಿಯುಪಿಎ) ಸಂಸ್ಥೆ ದಕ್ಷಿಣ ವಲಯದಲ್ಲಿ ಎಬಿಸಿ ಮತ್ತು ಎಆರ್‌ವಿ ಕಾರ್ಯಕ್ರಮಗಳನ್ನು ನಡೆಸುತ್ತಿತ್ತು. ಆದರೆ ಅವರು ಇತ್ತೀಚೆಗೆ ಕಾರ್ಯಕ್ರಮದಿಂದ ಹೊರಬಂದಿದ್ದಾರೆ. ಎಎಎಸ್‌ಎಆರ್‌ಎ ಮತ್ತು ಸಿಎಆರ್‌ಇ ನಂತಹ ಇನ್ನೂ ಕೆಲವು ಎನ್‌ಜಿಒಗಳು ಬಿಬಿಎಂಪಿಯೊಂದಿಗೆ ಕೆಲಸ ಮಾಡಲು ನಿರಾಕರಿಸಿವೆ ಎಂದು ಪ್ರಾಣಿ ಹಕ್ಕುಗಳ ಕಾರ್ಯಕರ್ತೆ ನವೀನ ಕಾಮತ್ ಹೇಳಿದ್ದಾರೆ.

ಇಲ್ಲಿ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್‌ಗಳನ್ನು ರಾಜಿ ಮಾಡಿಕೊಳ್ಳಬೇಕು. ಒಂದು ಮೋರಿಯಲ್ಲಿ ಹಲವಾರು ನಾಯಿಗಳನ್ನು ಶಸ್ತ್ರಚಿಕಿತ್ಸೆಯ ನಂತರ ಇರಿಸಲಾಗುತ್ತದೆ ಹಾಗೂ ಅವುಗಳನ್ನು ಅಕಾಲಿಕವಾಗಿ ಬಿಡುಗಡೆ ಮಾಡಲಾಗುತ್ತದೆ. ಯಲಹಂಕ ಹೊರತುಪಡಿಸಿ, ಯಾವುದೇ ಎಬಿಸಿ ಕೇಂದ್ರಗಳು ಪರಿಣಾಮಕಾರಿಯಾಗಿ ನಡೆಯುತ್ತಿಲ್ಲ ಎಂದು ಮತ್ತೊಬ್ಬ ಕಾರ್ಯಕರ್ತ ಹೇಳಿದ್ದಾರೆ.

English summary
A corporation survey revealed that 52,262 people have been bitten by dogs under the Burhat Bangalore Mahanagara Palike (BBMP) since 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X