ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಐತಿಹಾಸಿಕ ರಾಗೀಗುಡ್ಡ ಆಂಜನೇಯ ದೇವಾಲಯದಲ್ಲಿ ಡಿ. 4ರಿಂದ 51ನೇ ಹನುಮಜ್ಜಯಂತಿ ಸಂಭ್ರಮ

|
Google Oneindia Kannada News

ಬೆಂಗಳೂರು, ಡಿ 3: ನಗರದ ಜಯನಗರ ಒಂಬತ್ತನೇ ಬಡಾವಣೆಯಲ್ಲಿರುವ ಪುರಾಣಪ್ರಸಿದ್ದ ರಾಗೀಗುಡ್ಡ ಶ್ರೀಪ್ರಸನ್ನ ಆಂಜನೇಯಸ್ವಾಮಿ ದೇವಾಲಯದಲ್ಲಿ, ಹನ್ನೆರಡು ದಿನಗಳ 51ನೇ ಹನುಮಜ್ಜಯಂತಿ - 2019 ಉತ್ಸವ, ಬುಧವಾರದಿಂದ (ಡಿ 4) ಆರಂಭಗೊಳ್ಳಲಿದೆ.

ಕಳೆದ ಸುಮಾರು ಐದು ದಶಕಗಳಿಂದ, ಭಗವಂತನ ಸೇವೆಯ ಜೊತೆಗೆ ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ, ಆರೋಗ್ಯ ಮತ್ತು ಸಾಮಾಜಿಕ ಕೆಲಸಗಳ ಮೂಲಕ ರಾಗೀಗುಡ್ಡ ದೇವಾಲಯ ಮನೆಮಾತಾಗಿದೆ.

ಶ್ರೀಪ್ರಸನ್ನ ಆಂಜನೇಯಸ್ವಾಮಿ ಭಕ್ತ ಮಂಡಳಿ ಟ್ರಸ್ಟ್, ಡಿಸೆಂಬರ್ 4ರಿಂದ 15ರವರೆಗೆ, ಹನ್ನೆರಡು ದಿನಗಳ ಕಾಲ, ಹನುಮಜ್ಜಯಂತಿ ಉತ್ಸವವನ್ನು ವೈಭವ, ಭಕ್ರಿ ಶ್ರದ್ದಾಪೂರ್ವಕವಾಗಿ ಆಚರಿಸುತ್ತದೆ.

ಜಯನಗರಕ್ಕೆ ಮತ್ತೊಂದು ಗರಿ; ಪ್ರಕೃತಿ ವನ ಲೋಕಾರ್ಪಣೆಜಯನಗರಕ್ಕೆ ಮತ್ತೊಂದು ಗರಿ; ಪ್ರಕೃತಿ ವನ ಲೋಕಾರ್ಪಣೆ

ಕೆ.ಆರ್.ನಗರದ ಯಡತೊರೆ ಯೋಗಾನಂದೇಶ್ವರ ಮಠದ ಶಂಕರಭಾರತಿ ಶ್ರೀಗಳು, ಹನುಮಜ್ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ಶ್ರೀಗಳು, ವಿದ್ವಾಂಸರಿಗೆ ಸನ್ಮಾನವನ್ನು ಮಾಡಿ, ಆಶೀರ್ವಚನ ನೀಡಲಿದ್ದಾರೆ. ಪ್ರಮುಖ ಕಾರ್ಯಕ್ರಮಗಳ ವಿವರ ಇಂತಿದೆ:

 51st Hanumajjayanthi Celebration 2019 From Dec 4th Dec 15th At Anjaneya Swamy Temple, Ragigudda, Bengaluru

09.12.2019
ಹನುಮಜ್ಜಯಂತಿ ಪ್ರಯುಕ್ತ, ಬೆಳಗ್ಗೆ 9ಗಂಟೆಗೆ, ಮಧು ಅಭಿಷೇಕ, ಪವಮಾನ ಹೋಮ, ಆಂಜನೇಯ ಲಕ್ಷಾರ್ಚನೆ
ಸಂಜೆ 6.30ಕ್ಕೆ ದಾಸವಾಣಿ ಸಾಂಸ್ಕೃತಿಕ ಕಾರ್ಯಕ್ರಮ.

10.12.2019
ಬೆಳಗ್ಗೆ 9ಗಂಟೆಗೆ, ಫಲಾಭಿಷೇಕ, ರಾಜರಾಜೇಶ್ವರಿ ಹೋಮ, ಲಲಿತಾ ಸಹಸ್ರನಾಮ ಹೋಮ
ಸಂಜೆ 4.30ಕ್ಕೆ ಲಲಿತಾ ಸಹಸ್ರನಾಮ ಕುಂಕುಮಾರ್ಚನೆ.

15.12.2019
ಬೆಳಗ್ಗೆ 9ಗಂಟೆಗೆ, ಶತರುದ್ರ ಕ್ಷೀರಾಭಿಷೇಕ, ಚಂಡಿಕಾ ಹೋಮ, ವಜ್ರ ಕಿರೀಟ ಸಹಿತ ವಜ್ರ ಕವಚ ಧಾರಣೆ
ಸಂಜೆ 6.30ಕ್ಕೆ ಸಂಕಷ್ಟಹರ ಗಣಪತಿ ವ್ರತ

English summary
51st Hanumajjayanthi Celebration 2019 From Dec 4th Dec 15th At Anjaneya Swamy Temple, Ragigudda, Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X