ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಹಿಳೆಯರ ಕಲಾಕುಂಚದಿಂದ ಅರಳಿದ ಚಿತ್ರಕಲಾ ಪ್ರದರ್ಶನ

By Nayana
|
Google Oneindia Kannada News

Recommended Video

Karnataka Chitrakala Parishath : ಚಿತ್ರಕಲಾ ಪ್ರದರ್ಶನ ಮಾಡಿದ ಆಕಾಂಕ್ಷ ಸಂಸ್ಥೆಯ 50 ಮಹಿಳೆಯರು

ಬೆಂಗಳೂರು, ಜೂನ್ 7: ಮಹಿಳಾ ದಿನದ ಅಂಗವಾಗಿ ಆರಂಭಿಸಲಾಗಿತ್ತು. ಈಗ ಐದು ವರ್ಷ ಆಗಿದೆ. ಯುವತಿಯರಿಂದ ಹಿಡಿದು ಹಿರಿಯರವರೆಗೆ ಸ್ತ್ರೀ ಕಲಾವಿದರಿಗೆ ಅಭಿವ್ಯಕ್ತಿಯ ವೇದಿಕೆಯಾಗಿದೆ ಎಂದು ಹಿರಿಯ ಕಲಾವಿದೆ ಶ್ಯಾಮಲಾ ಅಭಿಪ್ರಾಯಪಟ್ಟರು.

ಆಕಾಂಕ್ಷ ಸಂಸ್ಥೆಯಿಂದ 5 ನೇ ಆವೃತ್ತಿಯ ಚಿತ್ರಕಲಾ ಪ್ರದರ್ಶನವನ್ನು ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಆಯೋಜಿಸಿದ್ದರು. ಅದರಲ್ಲಿ 50 ಮಂದಿ ಮಹಿಳೆಯರಿಂದ 500 ಕ್ಕೂ ಹೆಚ್ಚು ಚಿತ್ರಕಲೆಗಳ ಪ್ರದರ್ಶನ ನಡೆಯಿತು. ಕಲಾವಿದರು ಅವರ ಅಭಿಪ್ರಾಯವನ್ನು ಹಂಚಿಕೊಂಡರು.

ಚಿತ್ರಕಲಾ ಪರಿಷತ್ : ಜೂನ್‌ 7 ರವರೆಗೆ ಮಹಿಳಾ ಚಿತ್ರಕಲಾ ಪ್ರದರ್ಶನಚಿತ್ರಕಲಾ ಪರಿಷತ್ : ಜೂನ್‌ 7 ರವರೆಗೆ ಮಹಿಳಾ ಚಿತ್ರಕಲಾ ಪ್ರದರ್ಶನ

ಮತ್ತೊಬ್ಬ ಕಲಾವಿದೆ ವೇದಾ ಮಾತನಾಡಿ, ಮೊದಲ ಬಾರಿಗೆ ಮಹಿಳೆಯರಿಗಾಗಿಯೇ ಈ ರೀತಿಯ ವೇದಿಕೆ ಕಲ್ಪಿಸಿದಾಗ ಇಲ್ಲಿ ಪ್ರದರ್ಶನಗೊಂಡ ವರ್ಣಚಿತ್ರಗಳನ್ನು ನೋಡಿ ಅನೇಕರು ಭಾವುಕರಾಗಿದ್ದರು. ಐದು ವರ್ಷಗಳಲ್ಲಿ ವೃತ್ತಿಪರವಾಗಿ ಈ ವೇದಿಕೆ ಪರಿವರ್ತನೆಯಾಗುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.

500 paintings exhibit in Akanksha fifth edition

ಮೊದಲು ಮಹಿಳಾ ದಿನಾಚರಣೆಯೆಂದು ಆಕಾಂಕ್ಷ ಪ್ರಾರಂಭಿಸಿದಾಗ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿತ್ತು. 80 ವರ್ಷದ ವೃದ್ಧರು ಕೂಡ ಭಾಗವಹಿಸಿದ್ದರು. ಕಲೆ ವಯಸ್ಸಿಲ್ಲ, ಮಕ್ಕಳಿಂದ ಹಡಿದು ವೃದ್ಧರವರೆಗೂ ಪಾಲ್ಗೊಳ್ಳಬಹುದಾಗಿದೆ.

ಕಲೆಯಲ್ಲಿ ಒಳ್ಳೆಯ ಕಲೆ, ಕೆಟ್ಟ ಕಲೆ ಎನ್ನುವುದು ಇಲ್ಲ ಕಲೆಗೆ ಒಂದೇ ಅರ್ಥ, ವೃದ್ಧರೊಬ್ಬರು ಬಿಡಿಸಿದ ಚಿತ್ರಕಲೆ ಅತಿ ಹೆಚ್ಚು ಬಿಕರಿಯಾಗಿತ್ತು. ಅವರ ಮಕ್ಕಳು ಮೊಮ್ಮಕ್ಕಳೆಲ್ಲರೂ ಬಂದು ಅವರಿಗೆ ಪ್ರೋತ್ಸಾಹ ನೀಡಿದ್ದರು.

ಕಲಾವಿದರು ಲಾಯರ್‌ ಆಗಿರಲಿ, ಎಂಜಿನಿಯರ್ ಆಗಿರಲಿ, ಶಿಕ್ಷಕರಾಗಿಲಿ, ಅನಕ್ಷಸ್ಥರಾಗಿದ್ದರೂ ಕೂಡ ಅವರಿಗೆ ನಾವು ಒಂದೇ ರೀತಿಯ ಗೌರವನ್ನು ನೀಡುತ್ತೇವೆ ಯಾವುದೇ ಬೇಧ ಭಾವವಿಲ್ಲ ಎಂದು ಹೇಳಿದರು.

English summary
Fifth edition of Painting exhibition by Akanksha, a cultural organization held at Chitrakala prishat in Bengaluru. Around 50 women were exhibited more than 500 painting on this occasion.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X