ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರೊನಾ ಸಂಬಂಧಿತ ಸೇವೆಗೆ 500 ಓಲಾ ವಾಹನಗಳು ಸಿದ್ಧ

|
Google Oneindia Kannada News

ಬೆಂಗಳೂರು, ಮಾರ್ಚ್ 30: ಕೊರೊನಾ ಸಂಬಂಧಿತ ಸೇವೆಗೆ 500 ವಾಹನಗಳನ್ನು ನೀಡಲು ಓಲಾ ಸಂಸ್ಥೆ ಮುಂದಾಗಿದೆ. ಈ ಕುರಿತು ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರಿಗೆ ಓಲಾ ಮುಖ್ಯಸ್ಥರು ಮಾಹಿತಿ ನೀಡಿದ್ದಾರೆ.

Recommended Video

ಒಂದು ವಾರದಿಂದ ಒಬ್ಬರೂ ದೇವರ ದರ್ಶನಕ್ಕೆ ಬಂದಿಲ್ಲ | Veerendra Hedge | Dharmastala

ಡಾ. ಸಿ.ಎನ್‌.ಅಶ್ವತ್ಥನಾರಾಯಣ ಅವರಿಗೆ ಭಾನುವಾರ ಕರೆ ಮಾಡಿದ್ದ ಓಲಾ ಸಂಸ್ಥಾಪಕ ಭವಿಶ್ ಅರ್ಗವಾಲ್, ''ನಮ್ಮ ಸಂಸ್ಥೆಯ 500 ಕ್ಯಾಬ್ ಗಳನ್ನು ಸರ್ಕಾರ ತನ್ನ ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳಬಹುದು'' ಎಂದು ಹೇಳಿದ್ದಾರೆ.

ಕೊರೊನಾ ಭೀತಿ: ದೇಶದಲ್ಲಿ ಓಲಾ ಕ್ಯಾಬ್ ಶೇರ್ ರೈಡ್ ಸೇವೆ ಸ್ಥಗಿತಕೊರೊನಾ ಭೀತಿ: ದೇಶದಲ್ಲಿ ಓಲಾ ಕ್ಯಾಬ್ ಶೇರ್ ರೈಡ್ ಸೇವೆ ಸ್ಥಗಿತ

ಸದ್ಯ ಓಲಾ ಕ್ಯಾಬ್ ಗಳು ಬೆಂಗಳೂರು, ಮೈಸೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಯಾವ ಜಿಲ್ಲೆಗಳಿಗೆ ಎಷ್ಟು ಕ್ಯಾಬ್ ಗಳನ್ನು ಬಳಸಿಕೊಳ್ಳಬೇಕು ಎಂಬುದನ್ನು ಸರ್ಕಾರ ನಿರ್ಧರಿಸಲಿದೆ.

500 Ola Cabs ready for Coronavirus service

ಓಲಾ ಕ್ಯಾಬ್ ಸೇವೆ ಬಳಸಿಕೊಳ್ಳುವ ಕುರಿತಂತೆ ಆಯಾ ಜಿಲ್ಲೆಯ ಅಧಿಕಾರಿಗಳ ಜತೆ ಮಾತುಕತೆ ನಡೆಸಿರುವ ಡಾ. ಅಶ್ವತ್ಥನಾರಾಯಣ, ''ಕೊರೊನಾ ಸಂಬಂಧಿತ ಸೇವೆಗಳಿಗೆ ಯಾವುದೇ ಸಂದರ್ಭದಲ್ಲಿ ಬೇಕಾದರೂ ಓಲಾ ಕ್ಯಾಬ್ ಬಳಸಿಕೊಳ್ಳಬಹುದು'' ಎಂದು ತಿಳಿಸಿದ್ದಾರೆ.

ವೈದ್ಯ ಸಿಬ್ಬಂದಿ ಸೇರಿದಂತೆ ಅಗತ್ಯ ಸೇವೆ ಸಲ್ಲಿಸುತ್ತಿರುವವರ ಓಡಾಟಕ್ಕೆ ಈ ಕ್ಯಾಬ್ ಗಳನ್ನು ಬಳಸಿಕೊಳ್ಳಲು ಅವಕಾಶವಿದೆ. ಔಷಧ, ಇನ್ನತರ ಅಗತ್ಯ ವಸ್ತುಗಳ ಪೂರೈಕೆ ಹಾಗೂ ತುರ್ತು ಸಂದರ್ಭದಲ್ಲಿ ಕ್ಯಾಬ್ ಗಳನ್ನು ಬಳಸಿಕೊಳ್ಳಬಹುದು.

English summary
500 Ola Cabs ready for Coronavirus service says DCM Dr. Ashwath Narayan
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X