ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು: ಎರಡನೇ ಹಂತದಲ್ಲಿ 50 ಸಾವಿರ ಮಂದಿ ಕೊರೊನಾ ಲಸಿಕೆ

|
Google Oneindia Kannada News

ಬೆಂಗಳೂರು,ಜನವರಿ 28: ನಗರದಲ್ಲಿ ಎರಡನೇ ಹಂತದಲ್ಲಿ 50 ಸಾವಿರ ಮುಂಚೂಣಿ ಕಾರ್ಯಕರ್ತರಿಗೆ ಕೊರೊನಾ ಲಸಿಕೆ ನೀಡಲಾಗುವುದು ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.

ಸರ್ಕಾರದ ನಿರ್ದೇಶನದ ಅನುಸಾರ ಎರಡನೇ ಹಂತದ ಕೋವಿಡ್‌ ಪಾಲಿಕೆ, ಜಲ ಮಂಡಳಿ, ಪೊಲೀಸ್‌ ಇಲಾಖೆ ಸಿಬ್ಬಂದಿ ಹಾಗೂ ಕಂದಾಯ ವಿಭಾಗದ ಅಧಿಕಾರಿಗಳು ಸೇರಿ 50 ಸಾವಿರ ಜನರಿಗೆ ಲಸಿಕೆ ಹಾಕಲಾಗುವುದು, ಪೋರ್ಟಲ್‌ನಲ್ಲಿ ಬಹುತೇಕ ನೋಂದಣಿ ಪ್ರಕ್ರಿಯೆ ಮುಗಿದಿದೆ ಎಂದರು.

ಕೊರೊನಾ ಲಸಿಕೆ ಅಭಿಯಾನ: ಬಿಬಿಎಂಪಿ ಹೊರವಲಯದಲ್ಲಿ ಕಳಪೆ ಸಾಧನೆಕೊರೊನಾ ಲಸಿಕೆ ಅಭಿಯಾನ: ಬಿಬಿಎಂಪಿ ಹೊರವಲಯದಲ್ಲಿ ಕಳಪೆ ಸಾಧನೆ

ಮೊದಲನೇ ಹಂತದಲ್ಲಿ 1.83 ಲಕ್ಷ ಆರೋಗ್ಯ ಕಾರ್ಯಕರ್ತರು ಲಸಿಕೆ ಪಡೆಯಲು ಕೋವಿನ್‌ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ.ಈವರೆಗೆ ಸುಮಾರು 50 ಸಾವಿರಕ್ಕೂ ಅಧಿಕ ಮಂದಿ ಲಸಿಕೆ ಪಡೆದಿದ್ದಾರೆ. ಲಸಿಕೆ ಹಾಕಿಸಿಕೊಳ್ಳದವರಿಗೆ ಜಾಗೃತಿ ಮೂಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

50 Thousand People To Be Vaccinated In Phase-2 In Bengaluru

ಕೋವಿಡ್‌ ವೇಳೆ ಮುಂಚೂಣಿ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿದವರಿಗೆ ಎರಡನೇ ಹಂತದಲ್ಲಿ ಲಸಿಕೆ ನೀಡಲಾಗುತ್ತಿದ್ದು, ಸೇರಿ 50 ಸಾವಿರ ಜನ ಕೊರೊನಾ ವಾರಿಯರ್ಸ್‌ಗಳನ್ನು ಗುರುತಿಸಲಾಗಿದ್ದು, ಈಗಾಗಲೇ 30 ಸಾವಿರ ಜನರ ಪಟ್ಟಿ ಸಿದ್ಧಪಡಿಸಿಕೊಳ್ಳಲಾಗಿದೆ.

ಮೂರನೇ ಹಂತದಲ್ಲಿ 50 ವರ್ಷ ಮೇಲಿನ ಮತ್ತು 50 ವರ್ಷದೊಳಗಿನ ಅನ್ಯ ಖಾಯಿಲೆಯಿಂದ ಬಳಲುವವರ ಪಟ್ಟಿಯನ್ನು ಮಾರ್ಚ್ ಅಂತ್ಯದೊಳಗೆ ಸಿದ್ಧಪಡಿಸಬೇಕಾಗಿದೆ ಎಂದು ತಿಳಿಸಿದರು.

English summary
The BBMP on Wednesday held a meeting with the Covid-19 task force and decided that 50,000 will get vaccinated in the second phase.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X