ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರೊನಾದಿಂದ ಚೇತರಿಸಿಕೊಂಡ ಶೇ.50ರಷ್ಟು ಮಂದಿಗೆ ಅನಾರೋಗ್ಯ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 23: ಕೊರೊನಾ ಸೋಂಕಿನಿಂದ ಚೇತರಿಸಿಕೊಂಡವರಲ್ಲಿ ಶೇ.50ರಷ್ಟು ಮಂದಿಗೆ ಆರೋಗ್ಯ ಸಮಸ್ಯೆಗಳು ಕಾಡುತ್ತಿವೆ ಎಂಬುದು ತಿಳಿದುಬಂದಿದೆ.

ಕೊರೊನಾ ಸೋಂಕಿಗೊಳಗಾದ ವ್ಯಕ್ತಿ ಗುಣಮುಖರಾದರೂ ಕೂಡ ದೇಹದಲ್ಲಿ ಸಾಕಷ್ಟು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಕಾಲುಗಳಲ್ಲಿ ರಕ್ತ ಹೆಪ್ಪುಗಟ್ಟುವುದು, ಹೃದಯ ಸ್ನಾಯುವಿನ ಉರಿಯೂತ, ಆಯಾಸ, ಮನಸ್ಥಿತಿ ಬದಲಾವಣೆಗಳು, ತಲೆನೋವು ಮತ್ತು ದೇಹದಲ್ಲಿ ನೋವುಗಳು ಕಾಣಿಸಿಕೊಳ್ಳುತ್ತವೆ ಎಂದು ವೈದ್ಯರು ಹೇಳಿದ್ದಾರೆ.

ಭಾರತದಲ್ಲಿ ಮತ್ತೆ 54,366 ಕೊರೊನಾ ಸೋಂಕಿತರು ಪತ್ತೆಭಾರತದಲ್ಲಿ ಮತ್ತೆ 54,366 ಕೊರೊನಾ ಸೋಂಕಿತರು ಪತ್ತೆ

ಕೊರೊನಾ ಸೋಂಕಿನಿಂದ ಗುಣಮುಖರಾದ ಜನರಲ್ಲಿ ಎದೆ ನೋವು, ಹೃದಯ ಸಂಬಂಧಿತ ಸಮಸ್ಯೆಗಳು, ಕೀಲು ನೋವು, ದೃಷ್ಟಿ ದೋಷ, ಮರೆಗುಳಿತನದಂತಹ ಸಮಸ್ಯೆಗಳು ಕಾಡುತ್ತಿವೆ.

50 Per Cent Of Covid Patients Suffer Post-Recovery Symptoms

ಕೊರೊನಾದಿಂದ ಚೇತರಿಸಿಕೊಂಡ ಬಹಳಷ್ಟು ರೋಗಿಗಳಲ್ಲಿ ಹೃದಯ ಸಂಬಂಧಿ ಸಮಸ್ಯೆಗಳು ಕಂಡು ಬಂದಿದ್ದು, ಕೆಲವರು ಇದ್ದಕ್ಕಿದ್ದಂತೆ ಸಾವನ್ನಪ್ಪಿರುವುದೂ ಕೂಡ ವರದಿಯಾಗಿವೆ. ಜಯನಗರದಲ್ಲಿರುವ ಅಪೊಲೋ ಆಸ್ಪತ್ರೆಯಲ್ಲಿ ಜೂನ್ 23 ರಿಂದ ಇಲ್ಲಿಯವರೆಗೂ 1,400 ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಲಾಗಿದೆ. ಅದರಲ್ಲಿ 480 ಮಂದಿ ಐಸಿಯುಲ್ಲಿದ್ದು, ಮರಣ ಪ್ರಮಾಣ ಶೇ.7.8 ರಿಂದ 8.5ರ ನಡುವೆ ಇದೆ.

ಕೊರೊನಾದಿಂದ ಚೇತರಿಸಿಕೊಂಡವರಿಗೆ ಚಿಕಿತ್ಸೆ ನೀಡುವ ಸಲುವಾಗಿಯೇ ಈಗಾಗಲೇ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ, ಸೇಂಟ್ ಜಾನ್ಸ್ ವೈದ್ಯಕೀಯ ಕಾಲೇಜು ಮತ್ತು ರಾಮಯ್ಯ ಆಸ್ಪತ್ರೆಗಳು ಕ್ಲಿನಿಕ್ ಗಳನ್ನು ತೆರೆದಿವೆ.

ಕೊರೊನಾ ವೈರಸ್ ಕೇವಲ ಮನುಷ್ಯನ ದೇಹದ ಮೇಲಷ್ಟೇ ಅಲ್ಲ. ದೇಹದ ಇತರೆ ಅಂಗಾಂಗಗಳ ಮೇಲೂ ಪರಿಣಾಮ ಬೀರುತ್ತವೆ. ಕೆಲ ವ್ಯಕ್ತಿಗಳಲ್ಲಿ ಗುಣಮುಖರಾದ ವಾರಗಳು ಅಥವಾ ತಿಂಗಳುಗಳ ಬಳಿಕ ಕಾಣಿಸಿಕೊಳ್ಳುತ್ತವೆ. ಕೆಲವರಲ್ಲಿ ಈ ಸಮಸ್ಯೆಗಳು ದೀರ್ಘಕಾಲಿಕವಾಗಿಯೂ ಕಾಡುವ ಸಾಧ್ಯತೆಗಳಿವೆ ಎಂದು ತಿಳಿಸಿದ್ದಾರೆ.

Recommended Video

ನಮ್ ದೇಶ ಕೊಳಕಾಗಿದ್ಯ Trump ಹೇಳ್ತಿರೋದು ಏನು? | Oneindia Kannada

English summary
Over half of people who contract Covid-19, including people with relatively mild infections, suffer from a range of conditions for months after they recover, recent findings show.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X