ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಹಕಾರ ಸಂಸ್ಥೆಗಳಲ್ಲಿ 50 ಕೋಟಿ ಬೇನಾಮಿ ಹಣ ಪತ್ತೆ: ಸಚಿವ ಕಾಶೆಂಪುರ್

By Nayana
|
Google Oneindia Kannada News

ಬೆಂಗಳೂರು, ಆಗಸ್ಟ್ 13: ಸಹಕಾರ ಇಲಾಖೆಯಲ್ಲಿ ಆಧಾರ್‌ ಕಾರ್ಡ್‌ ಲಿಂಕ್‌ ಮಾಡಿದ ಬಳಿಕ ಸುಮಾರು 6 ಸಾವಿರ ಬೇನಾಮಿ ಖಾತೆಗಳಲ್ಲಿ 50 ಕೋಟಿ ರೂ. ಹಣ ಪತ್ತೆಯಾಗಿದೆ ಎಂದು ಸಚಿವ ಬಂಡೆಪ್ಪ ಕಾಶೆಂಪುರ್‌ ತಿಳಿಸಿದ್ದಾರೆ.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಹಕಾರ ಇಲಾಖೆಯಲ್ಲಿ ಇತ್ತೀಚೆಗೆ ಖಾತೆಗೆ ಆಧಾರ್ ಕಾರ್ಡ್‌ ಲಿಂಕ್‌ ಮಾಡಿಸಲಾಗಿತ್ತು, ಇದರ ಬಳಿಕ ಆರು ಸಾವಿರಕ್ಕೂ ಹೆಚ್ಚು ಬೇನಾಮಿ ಖಾತೆಗಳಲ್ಲಿ 50 ಕೋಟಿ ರೂ, ಹಣ ಲಭ್ಯವಾಗಿದೆ ಎಂದು ಅವರು ತಿಳಿಸಿದರು.

ವಾರದೊಳಗೆ ಸಹಕಾರ ಸಾಲಮನ್ನಾ ಆದೇಶ ಪಕ್ಕಾ: ಬಂಡೆಪ್ಪ ಕಾಶೆಂಪುರ್‌ ವಾರದೊಳಗೆ ಸಹಕಾರ ಸಾಲಮನ್ನಾ ಆದೇಶ ಪಕ್ಕಾ: ಬಂಡೆಪ್ಪ ಕಾಶೆಂಪುರ್‌

ಹಾಗಾಗಿ ಎಲ್ಲ ಸಹಕಾರಿ ಬ್ಯಾಂಕ್ ಗಳಲ್ಲಿ ಖಾತೆದಾರರ ಹೆಸರು ಹಾಗೂ ಸಾಲ ಪಡೆದವರ ಪಟ್ಟಿಯನ್ನು ಬಹಿರಂಗವಾಗಿ ನೋಟಿಸ್‌
ಬೋರ್ಡ್ ನಲ್ಲಿ ಕಡ್ಡಾಯ ವಾಗಿ ಪ್ರಕಟಿಸುವಂತೆ ಆದೇಶಿಸಲಾಗುತ್ತದೆ.
ನಬಾರ್ಡ್‌ ನಿಂದ ಸಹಾಯ ಧನ ಪಡೆಯುವ ಹಲವಾರು ಸ್ವಯಂ ಸೇವಾ ಸಂಸ್ಥೆ ಗಳು ಮೈಕ್ರೋ ಫೈನಾನ್ಸ್ ಹೆಸರಿನಲ್ಲಿ ಮೀಟರ್ ಬಡ್ಡಿ ವಿಧಿಸುತ್ತಿರುವ ಬಗ್ಗೆ ದೂರುಗಳು ಬಂದಿವೆ.

50 Crs found in unknown account: Minister Khashempur

ಈ ಬಗ್ಗೆ ಮೈಕ್ರೋ ಫೈನಾನ್ಸ್ ಸಾಲಗಳನ್ನು ವಿತರಿಸುತ್ತಿರುವ ಸಂಸ್ಥೆಗಳ ಪ್ರಮುಖರ ಸಭೆ ಕರೆದು ಚರ್ಚಿಸಲು ಉದ್ದೇಶಿಸಲಾಗಿದೆ. ವಿವಿಧ ಸಹಕಾರಿ ಬ್ಯಾಂಕ್ ಗಳು ಹಾಗೂ ಸರ್ಕಾರ ಡೆಪಾಸಿಟ್ ಮಾಡಿರುವ 48 ಕೋಟಿ ರೂ ಪಿಂಚಣಿ ಹಣವನ್ನೂ ಕೂಡ ರೈತರ ಸಾಲ ಮನ್ನಾಗೆ ಬಳಕೆ ಮಾಡಿಕೊಳ್ಳಲು ಸರ್ಕಾರ ಚಿಂತನೆ ನಡೆಸಿದೆ.ಮುಖ್ಯಮಂತ್ರಿ ಯವರೂ ಸಕಾರಾತ್ಮಕ ವಾಗಿ ಸ್ಪಂದಿಸಿದ್ದಾರೆ ಎಂದರು.

ಸಾಲಮನ್ನಾ ಆದರೂ ಆತ್ಮಹತ್ಯೆ ಮಾಡಿಕೊಂಡ ಕೆ.ಆರ್. ನಗರದ ರೈತ ಸಾಲಮನ್ನಾ ಆದರೂ ಆತ್ಮಹತ್ಯೆ ಮಾಡಿಕೊಂಡ ಕೆ.ಆರ್. ನಗರದ ರೈತ

ರೈತರಿಗೆ ತಮ್ಮ ಕೃಷಿ ಉತ್ಪನ್ನ ಒತ್ತೆ ಇಟ್ಟು ನೀಡುವ ಅಡವು ಸಾಲಗಳಿಗೆ, ಚಿನ್ನಾಭರಣ ಅಡವಿಟ್ಟುಕೊಂಡು ನೀಡುವ ಸಾಲಗಳಿಗೆ, ವಾಹನ ಖರೀದಿ ಸಾಲಗಳಿಗೆ, ಪಶು ಆಹಾರ ಖರೀದಿಗೆ ನೀಡುವ ಸಾಲಗಳಿಗೆ, ಮೀನುಗಾರಿಕೆ ಉದ್ದೇಶಕ್ಕೆ ನೀಡುವ ಸಾಲಗಳಿಗೆ, ಸ್ವ ಸಹಾಯ ಗುಂಪುಗಳಿಗೆ ಜಂಟಿ ಭಾದ್ಯತಾ ಗುಂಪುಗಳಿಗೆ ನೀಡುವ ಸಾಲಗಳಿಗೆ ಈ ಯೋಜನೆ ಅನ್ವಯವಾಗುವುದಿಲ್ಲ ಎಂದು ಹೇಳಿದರು.

English summary
Cooperative minister Bandeppa Khashempur has revealed that there were Rs.50 crores found in 6,000 accounts at cooperative societies in the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X