ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ನಗರದ 5 ಕೋವಿಡ್ ಆರೈಕೆ ಕೇಂದ್ರಗಳಿಗೆ ಬೀಗ

|
Google Oneindia Kannada News

ಬೆಂಗಳೂರು, ಆಗಸ್ಟ್ 11 : ಬೆಂಗಳೂರು ನಗರದಲ್ಲಿನ ಒಟ್ಟು ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 75,428. ನಗರದಲ್ಲಿ ಒಟ್ಟು ಸರ್ಕಾರ ನಡೆಸುವ 11 ಕೋವಿಡ್ ಆರೈಕೆ ಕೇಂದ್ರಗಳಿವೆ. ಇವುಗಳಲ್ಲಿ ನೂರಾರು ಹಾಸಿಗೆಗಳು ಖಾಲಿ ಇವೆ.

Recommended Video

ಯಾರಿಗೆ ಒಲಿಯಲಿದೆ ಟೀಮ್ ಇಂಡಿಯಾ ವಿಕೆಟ್ ಕೀಪರ್ ಆಗುವ ಅವಕಾಶ | Oneindia Kannada

ಸರ್ಕಾರ ನಗರದಲ್ಲಿರುವ 5 ಕೋವಿಡ್ ಆರೈಕೆ ಕೇಂದ್ರಗಳನ್ನು ಮುಚ್ಚಲು ತೀರ್ಮಾನ ಕೈಗೊಂಡಿದೆ. ಒಂದು ವೇಳೆ ಆರೈಕೆ ಕೇಂದ್ರಗಳನ್ನು ಮುಚ್ಚಿದರೆ ನಗರದಲ್ಲಿ ಪ್ರಸ್ತುತ ಲಭ್ಯವಿರುವ 4,267 ಹಾಸಿಗೆಗಳ ಪೈಕಿ 2,614 ಹಾಸಿಗೆಗಳು ಲಭ್ಯವಾಗುವುದಿಲ್ಲ.

ಬಿಐಇಸಿ ಕೋವಿಡ್ ಆರೈಕೆ ಕೇಂದ್ರದ ನೋಡೆಲ್ ಅಧಿಕಾರಿ ಸಾವುಬಿಐಇಸಿ ಕೋವಿಡ್ ಆರೈಕೆ ಕೇಂದ್ರದ ನೋಡೆಲ್ ಅಧಿಕಾರಿ ಸಾವು

ಬೆಂಗಳೂರು ನಗರದಲ್ಲಿರುವ ಕೋವಿಡ್ ಆರೈಕೆ ಕೇಂದ್ರಗಳ ಉಸ್ತುವಾರಿಯನ್ನು ಐಎಎಸ್ ಅಧಿಕಾರಿ ರಾಜೇಂದ್ರ ಕಟಾರಿಯಾ ನೋಡಿಕೊಳ್ಳುತ್ತಿದ್ದಾರೆ. "ನಗರದ ಕೋವಿಡ್ ಆರೈಕೆ ಕೇಂದ್ರದಲ್ಲಿ ಶೇ 20ರಷ್ಟು ಬೆಡ್ ಖಾಲಿ ಇದೆ. ಆದ್ದರಿಂದ, ಕೇಂದ್ರಗಳನ್ನು ಮುಚ್ಚುವ ಆಲೋಚನೆ ಇದೆ" ಎಂದರು.

ಚಿತ್ರ: ದೇಶದಲ್ಲೇ ದೊಡ್ಡದಾದ ಬೆಂಗಳೂರಿನ ಕೋವಿಡ್ ಆರೈಕೆ ಕೇಂದ್ರ ಚಿತ್ರ: ದೇಶದಲ್ಲೇ ದೊಡ್ಡದಾದ ಬೆಂಗಳೂರಿನ ಕೋವಿಡ್ ಆರೈಕೆ ಕೇಂದ್ರ

ನಗರದಲ್ಲಿ ಸೋಮವಾರ 1,243 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ನಗರದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 75,428. ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 32,985.

ಚಿತ್ರಗಳು; ಕೋರಮಂಗಲದ ಕೋವಿಡ್ ಆರೈಕೆ ಕೇಂದ್ರ ಚಿತ್ರಗಳು; ಕೋರಮಂಗಲದ ಕೋವಿಡ್ ಆರೈಕೆ ಕೇಂದ್ರ

ಅಂಕಿ ಸಂಖ್ಯೆಗಳು ಹೇಳುವುದೇನು?

ಅಂಕಿ ಸಂಖ್ಯೆಗಳು ಹೇಳುವುದೇನು?

ಬೆಂಗಳೂರು ನಗರದ 11 ಕೋವಿಡ್ ಆರೈಕೆ ಕೇಂದ್ರಗಳಲ್ಲಿ 790 ರಿಂದ 1,100 ಹಾಸಿಗೆಗಳು ಮೊದಲ ದಿನದಿಂದಲೂ ಖಾಲಿ ಇವೆ. ಆದ್ದರಿಂದ ಕೆಲವು ಕೋವಿಡ್ ಆರೈಕೆ ಕೇಂದ್ರಗಳನ್ನು ಮುಚ್ಚಲು ತೀರ್ಮಾನ ಕೈಗೊಳ್ಳಲಾಗಿದೆ.

ಸುಮಾರು 300 ಜನರು ಡಿಸ್ಚಾರ್ಜ್

ಸುಮಾರು 300 ಜನರು ಡಿಸ್ಚಾರ್ಜ್

ಸರಾಸರಿ ಅಂಕಿ ಅಂಶಗಳ ಪ್ರಕಾರ ಬೆಂಗಳೂರು ನಗರದಲ್ಲಿ ಪ್ರತಿದಿನ 300 ಜನರು ಡಿಸ್ಚಾರ್ಜ್ ಆಗುತ್ತಿದ್ದಾರೆ. 400 ಹೊಸ ಕೋವಿಡ್ ಪ್ರಕರಣಗಳು ದಾಖಲಾಗುತ್ತಿವೆ. ಪ್ರತಿದಿನ ಶೇ 15ರಷ್ಟು ಪ್ರಕರಣಗಳನ್ನು ಮಾತ್ರ ಕೋವಿಡ್ ಆರೈಕೆ ಕೇಂದ್ರಕ್ಕೆ ಕಳಿಸಲಾಗುತ್ತಿದೆ.

ಖರ್ಚು ಕಡಿಮೆಯಾಗಲಿದೆ

ಖರ್ಚು ಕಡಿಮೆಯಾಗಲಿದೆ

ಕೋವಿಡ್ ಆರೈಕೆ ಕೇಂದ್ರದ ಬಾಡಿಗೆ, ಸಿಬ್ಬಂದಿಗಳ ವೇತನ, ನಿರ್ವಹಣೆ ವೆಚ್ಚ, ಆಹಾರದ ಖರ್ಚು ಮುಂತಾದ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಕೆಲವು ಕೋವಿಡ್ ಆರೈಕೆ ಕೇಂದ್ರಗಳನ್ನು ಮುಚ್ಚಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

10 ಸಾವಿರ ಹಾಸಿಗೆ ಆರೈಕೆ ಕೇಂದ್ರ

10 ಸಾವಿರ ಹಾಸಿಗೆ ಆರೈಕೆ ಕೇಂದ್ರ

ಬೆಂಗಳೂರು ಹೊರವಲಯದ ಬಿಐಇಸಿಯಲ್ಲಿ 10 ಸಾವಿರ ಹಾಸಿಗೆಗಳ ಆರೈಕೆ ಕೇಂದ್ರವಿದೆ. ಇಲ್ಲಿ 5 ಸಾವಿರ ಬೆಡ್‌ಗಳು ರೋಗಿಗಳಿಗೆ ಸಿದ್ಧವಾಗಿದೆ. ಆದರೆ, 1500 ಬೆಡ್‌ಗಳನ್ನು ಮಾತ್ರ ಬಳಕೆ ಮಾಡಿಕೊಳ್ಳಲಾಗುತ್ತಿದೆ.

English summary
Officials are considering to shut down 5 Covid-19 care centres in Bengaluru city. Hundreds of beds empty across the 11 CCC in city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X