ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಶ್ಲೀಲ ಚಿತ್ರ ಕ್ಲಿಕ್ಕಿಸಿ ಹಣ ಕೇಳಿದವರ ಬಂಧನ

|
Google Oneindia Kannada News

ಬೆಂಗಳೂರು, ನ. 27 : ಚಿಕಿತ್ಸೆಗೆಂದು ವೈದ್ಯರೊಬ್ಬರನ್ನು ಮನೆಗೆ ಕರೆದುಕೊಂಡು ಹೋಗಿ, ಬಲವಂತವಾಗಿ ಕುಡಿಸಿ ಹೆಂಗಸರೊಂದಿಗೆ ಅಶ್ಲೀಲವಾಗಿ ಫೋಟೋ ತೆಗೆದು ನಂತರ ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಮಹಿಳೆ ಸೇರಿದಂತೆ ನಾಲ್ಕು ಜನರ ತಂಡವೊಂದನ್ನು ಹೈಗ್ರೌಂಡ್ಸ್ ಪೊಲೀಸರು ಬಂಧಿಸಿದ್ದಾರೆ.

ಅನೀಸ್ ಅಹ್ಮದ್, ಸಾದಿಕ್ ಪಾಷಾ , ಎಜಾಜ್, ಶಫಿ ಉಲ್ಲಾ ಮತ್ತು ಅನೀಸ್ ಅಹ್ಮದ್ ಹೆಂಡತಿ ಸುಮಯ್ಯಾಳನ್ನು ಹನಿಟ್ರ್ಯಾಪ್ ಪ್ರಕರಣದಡಿ ಬಂಧಿಸಲಾಗಿದೆ. ಪ್ರಮುಖ ಆರೋಪಿ ಅನೀಸ್ ಅಹ್ಮದ್ ಮೇಲೆ ಡಿ.ಜಿ.ಹಳ್ಳಿ, ಜೆ.ಸಿ.ನಗರ ಮತ್ತು ಹೈಗ್ರೌಂಡ್ಸ್ ಠಾಣೆಯಲ್ಲಿ ಈ ಹಿಂದೆಯೂ ಅಪರಾಧ ಪ್ರಕರಣಗಳು ದಾಖಲಾಗಿದ್ದವು.[ನಯನಾ ಕೃಷ್ಣ, ರಿಯಾಗೆ ಜಾಮೀನು ಮಂಜೂರು]

bengaluru

ಕೇಂದ್ರ ವಿಭಾಗದ ಉಪ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಶೇಷಾದ್ರಿಪುರಂ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಎಸ್. ಧನೇಶ್ ರಾವ್ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಹೈಗ್ರೌಂಡ್ಸ್ ಪೊಲೀಸ್ ಠಾಣಾ ಇನ್ಸ್‍ಪೆಕ್ಟರ್ ಶ್ರೀಧರ್, ಕಿರಣ ಪಿ.ಬಿ., ನವಾಜ್ ಖಾನ್, ಮುಫೀಜ್ ಖಾನ್, ಕೃಷ್ಣಮೂರ್ತಿ, ಉಮೇಶ್ ಭಾಗವಹಿಸಿದ್ದರು. ಆರೋಪಿಗಳಿಂದ ಕಾರು, ಆಟೋ, ದ್ವಿಚಕ್ರ ವಾಹನ, ಲ್ಯಾಪ್ ಟ್ಯಾಪ್ ಸೇರಿದಂತೆ 25 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಸರ ಅಪಹರಣಕಾರರ ಬಂಧನ
ನಿರ್ಜನ ಪ್ರದೇಶದಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯರ ಬಳಿ ವಿಳಾಸ ಕೇಳುವ ನೆಪ ಮಾಡಿ ಚಿನ್ನದ ಸರ ಅಪಹರಣ ಮಾಡುತ್ತಿದ್ದ ಮೂವರನ್ನು ಪಶ್ಚಿಮ ವಿಭಾಗದ ಕಲಾಸಿಪಾಳ್ಯ ಪೊಲೀಸರು ಬಂಧಿಸಿದ್ದಾರೆ.[ಮಹಿಳಾ ಇಂಜಿನಿಯರ್ ದೋಚಿದ ಆಟೊ ಚಾಲಕರು]

ಮೈಸೂರಿನ ಸನಾವುಲ್ಲಾ, ಗಂಗೊಂಡನಹಳ್ಳಿ, ಸಾದಿಕ್ ಮತ್ತು ಕೇರಳದ ಸುದೇಶ್ ಕುಮಾರ್ ಬಂಧಿತರು. ಇವರಿಂದ 20 ಲಕ್ಷ ರೂ. ಮೌಲ್ಯದ 765 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ಮತ್ತೊಬ್ಬ ಆರೋಪಿ ಇಬ್ರಾಹಿಂ ತಲೆಮರೆಸಿಕೊಂಡಿದ್ದಾನೆ.ಇವರ ಬಂಧನದಿಂದ ವಿವಿಧ ಕಲಾಸಿಪಾಳ್ಯ, ವಿಜಯನಗರ, ಕೆಂಗೇರಿ, ಚಂದ್ರಲೇಔಟ್ ತಿಲಕ್ ನಗರ ಮತ್ತು ಮಡಿವಾಳ ಸೇರಿದಂತೆ ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದ 30 ಪ್ರಕರಣ ಬೆಳಕಿಗೆ ಬಂದಂತಾಗಿದೆ.

ಕಲಾಸಿಪಾಳ್ಯ ಇನ್ಸ್ ಪೆಕ್ಟರ್ ಜಿ.ಎಸ್.ಅನಿಲ್ ಕುಮಾರ್ ರವರ ನೇತೃತ್ವದಲ್ಲಿ ಪಿಎಸ್‍ಐ ಎನ್.ಸಿ.ಮಲ್ಲಿಕಾರ್ಜುನ, ಎಎಸ್‍ಐ ಶಿವಣ್ಣ ಮತ್ತು ಸಿಬ್ಬಂದಿ ಸರಗಳ್ಳರನ್ನು ಬಂಧಿಸಿದ್ದಾರೆ.

ಖಾಸಗಿ ಬಸ್ ಕದ್ದವ ಸೆರೆ ಸಿಕ್ಕ
ಖಾಸಗಿ ಬಸ್ ಕದ್ದು ಮಾಯವಾಗಿದ್ದ ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲೂಕಿನ ನಾರಾಯಣರೆಡ್ಡಿ ಎಂಬಾತನ್ನು ಬಂಧಿಸಿರುವ ಉಪ್ಪಾರಪೇಟೆ ಪೊಲೀಸರು 16 ಲ್ಷ ರೂ. ಮೌಲ್ಯದ ಕದ್ದ ಬಸ್ ವಶಪಡಿಸಿಕೊಂಡಿದ್ದಾರೆ.

bus

ಉಪ್ಪಾರಪೇಟೆ ಠಾಣಾ ವ್ಯಾಪ್ತಿಯಲ್ಲಿ ನಿಲ್ಲಿಸಿದ್ದ ಬಸ್ ಕಳವು ಮಾಡಿದ್ದ ರೆಡ್ಡಿ ಬುಧವಾರ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಉಪ್ಪಾರಪೇಟೆ ಇನ್ಸ್ ಪೆಕ್ಟರ್ ಆರ್. ಪ್ರಕಾಶ್, ಪಿಎಸ್‍ಐ ಶರಣಪ್ಪ, ಐ. ಹದ್ಲಿ, ಉಪೇಂದ್ರಗೌಡ, ಭಾಸ್ಕರ್, ಅಕ್ರಂ, ಆನಂದಕುಮಾರ್, ಶಿವಾನಂದ ಮತ್ತಿತರರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

English summary
Bengaluru: 5 people including a women has been arrested for allegedly blackmailing a famous hospital doctor. They captured some pictures of doctor in a bad manner and to start blackmail.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X