ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ಭಾರೀ ಗಾತ್ರದ ಮಗು ಜನನ!

|
Google Oneindia Kannada News

ಬೆಂಗಳೂರು, ಜನವರಿ 22: ಸಾಮಾನ್ಯವಾಗಿ ಹುಟ್ಟುವಾಗ ಶಿಶುಗಳು 1 ರಿಂದ 2.5 ಕೆಜಿ ತೂಕವಿರುತ್ತವೆ. ಆದರೆ, ಬೆಂಗಳೂರಿನಲ್ಲಿ ಭಾರೀ ತೂಕದ ಮಗುವೊಂದು ಜನಿಸಿ ಅಚ್ಚರಿಗೆ ಕಾರಣವಾಗಿದೆ. ಬೆಂಗಳೂರಿನ ವಾಣಿ ವಿಲಾಸ ಆಸ್ಪತ್ರೆಯಲ್ಲಿ ಬರೋಬ್ಬರಿ 5.9 ಕೆಜಿ ತೂಕದ ಮಗುವೊಂದು ಜನಿಸಿದೆ.

ಸರಸ್ವತಿ ಮತ್ತು ಯೋಗೇಶ್ ದಂಪತಿಗೆ ವಾಣಿ ವಿಲಾಸ ಆಸ್ಪತ್ರೆಯಲ್ಲಿ ಜನವರಿ 18 ರಂದು ಬೆಳಿಗ್ಗೆ 5.9 ಕೆಜಿ ತೂಕದ ಮಗು ಜನಿಸಿದೆ. ಕೆಲವೊಮ್ಮೆ ತಾಯಿಗೆ ಮಧುಮೇಹದ ಸಮಸ್ಯೆಯಿದ್ದರೆ ಮಗುವಿನ ತೂಕ ಸಾಮಾನ್ಯಕ್ಕಿಂತ ಹೆಚ್ಚಾಗುತ್ತದೆ. ಆದರೆ, ಈ ಭಾರಿ ಗಾತ್ರದ ಮಗುವಿನ ತಾಯಿ ಸರಸ್ವತಿಗೆ ಮಧುಮೇಹವಿರಲಿಲ್ಲ. ಆದರೂ, ಕೂಡ 5.9 ಕೆಜಿ ತೂಕದ ಆರೋಗ್ಯವಂತ ಮಗು ಹುಟ್ಟಿರುವುದು ಆಶ್ಚರ್ಯ ಮೂಡಿಸಿದೆ ಎಂದು ವೈದ್ಯರು ಹೇಳಿದ್ದಾರೆ.

ಹಿರಿಯೂರಲ್ಲಿ ಕಳೆದುಕೊಂಡಿದ್ದ ಮಗು ಇಂದು ತಂದೆಯ ಮಡಿಲು ಸೇರಿತುಹಿರಿಯೂರಲ್ಲಿ ಕಳೆದುಕೊಂಡಿದ್ದ ಮಗು ಇಂದು ತಂದೆಯ ಮಡಿಲು ಸೇರಿತು

ಭಾರೀ ತೂಕದ ಮಗುವಾಗಿರುವ ಕಾರಣ ಹೆರಿಗೆ ವೇಳೆ ಚಿಕಿತ್ಸೆ ನೀಡಲು ಸಾಕಷ್ಟು ತೊಂದರೆ ಆಗಬಹುದು ಮತ್ತು ಆರೋಗ್ಯ ಸಮಸ್ಯೆ ಕಾಡಬಹುದು ಎಂದು ಅಂದಾಜಿಸಲಾಗಿತ್ತು. ಆದರೆ, ನಮ್ಮೆಲ್ಲಾ ಊಹೆಗಳು ಹುಸಿಯಾಗಿದ್ದು, ವೈದ್ಯ ಲೋಕಕ್ಕೆ ಅಚ್ಚರಿ ಮೂಡಿಸುವ ರೀತಿಯಲ್ಲಿ ಹೆರಿಗೆ ಸುಲಲಿತವಾಗಿ ನಡೆಯಿತು ಎಂದು ವೈದ್ಯರು ಹೇಳಿದ್ದಾರೆ.

5.90 KG Baby Is Born In Bengaluru

ತಾಯಿ ಹಾಗೂ ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. ಮಗು ಹುಟ್ಟಿದ ಕೂಡಲೇ ತೀವ್ರ ನಿಗಾಘಟಕದಲ್ಲಿ ಇಡಲಾಗಿತ್ತು. ನಂತರ ಸಾಮಾನ್ಯ ವಾರ್ಡ್‌ಗೆ ಶಿಫ್ಟ್ ಮಾಡಲಾಗಿದೆ. ಮುಂದಿನ ಮೂರು ದಿನ ಆಸ್ಪತ್ರೆಯಲ್ಲಿಯೇ ತಾಯಿ ಮಗುವಿನ ಆರೋಗ್ಯದ ಮೇಲೆ ನಿಗಾವಹಿಸಿ ಆಸ್ಪತ್ರೆಯಿಂದ ಬಿಡುಗಡೆ ಮಾಡುವ ಬಗ್ಗೆ ನಿರ್ಧರಿಸಲಾಗುವುದು ಎಂದು ವಾಣಿ ವಿಲಾಸ ವೈದ್ಯರು ತಿಳಿಸಿದ್ದಾರೆ.

English summary
Normally babies weigh 1 to 2.5 kg at birth. However, the birth of a baby girl in Bengaluru was a surprise. A baby weighing 5.9 kg was born at Vani Vilas Hospital, Bangalore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X