ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊಳಚೆ ನೀರು ನೇರ ಮಳೆ ನೀರುಗಾಲುವೆಗೆ: 499 ಅಪಾರ್ಟ್‌ಮೆಂಟ್ ಮಾಲಿಕರಿಗೆ ನೋಟಿಸ್

|
Google Oneindia Kannada News

ಬೆಂಗಳೂರು, ಏ.5: ಬೆಂಗಳೂರು ಜಲಮಂಡಳಿಯು ಕೊಳಚೆ ನೀರನ್ನು ನೇರವಾಗಿ ಮಳೆನೀರು ಗಾಲುವೆಗೆ ಹರಿಸುತ್ತಿದ್ದ 499 ಅಪಾರ್ಟ್‌ಮೆಂಟ್‌ಗಳಿಗೆ ನೋಟಿಸ್ ನೀಡಿದೆ.

ಮಳೆ ನೀರು ಕೊಯ್ಲು ಅಳವಡಿಸಿಕೊಳ್ಳಳದ ಕಟ್ಟಡಗಳಿಗೆ ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಂಪರ್ಕವನ್ನು ಕಡಿತಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಈಗ ಕೊಳಚೆ ನೀರನ್ನು ಮಳೆ ನೀರು ಗಾಲುವೆಗೆ ಹರಿಸುತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಷ್ಟೇ ಅಲ್ಲದೆ ಅಂಥವರ ವಿರುದ್ಧ ಕ್ರಮಕ್ಕೆ ಕೂಡ ಮುಂದಾಗಿದೆ.

499 property owners issued notices for releasing sewage into drains

ಯಾವುದೇ ಕಟ್ಟಡವಾದರೂ ಕೊಳಚೆ ನೀರನ್ನು ಹರಿಸಲು ಒಳಚರಂಡಿ ಸಂಪರ್ಕ ಹೊಂದಲೇಬೇಕು. ಜಲಮಂಡಳಿಗೆ ಅರ್ಜಿ ಸಲ್ಲಿಸಿ ಒಳಚರಂಡಿ ಸಂಪರ್ಕ ಕಲ್ಪಿಸಿಕೊಂಡು ಪ್ರತಿ ತಿಂಗಳು ನಿರ್ವಹಣೆ ಶುಲ್ಕ ಪಾವತಿಸಬೇಕಿದೆ.

ಹೊಸ ಅಪಾರ್ಟ್ ಮೆಂಟ್ ಗಳಿಗೆ ಮಾತ್ರ ಎಸ್ ಟಿಪಿ ಅಳವಡಿಕೆ ಸಾಧ್ಯತೆ! ಹೊಸ ಅಪಾರ್ಟ್ ಮೆಂಟ್ ಗಳಿಗೆ ಮಾತ್ರ ಎಸ್ ಟಿಪಿ ಅಳವಡಿಕೆ ಸಾಧ್ಯತೆ!

ಅಯ್ಯಪ್ಪನಗರ, ಹೂಡಿ, ಕೊಡಿಗೆಹಳ್ಳಿ, ಮಹದೇವಪುರ, ಕೆಆರ್‌ಪುರ, ಭಟ್ಟರಹಳ್ಳಿ, ರಾಜರಾಜೇಶ್ವರಿನಗರ, ಮಾರತ್‌ಹಳ್ಳಿ, ಪಟ್ಟಂದೂರು ಅಗ್ರಹಾರ, ಕವಿಕ ಲೇಔಟ್‌, ಕೆಂಗೇರಿ, ಭೈರಸಂದ್ರ, ಮಲ್ಲೇಶಪಾಳ್ಯ, ಕಾಳೀದಾಸ ಲೇಔಟ್‌ ಸೇರಿದಂತೆ ಹಲವು ಪ್ರದೇಶಗಳಲ್ಲಿ ನಿಯಮ ಉಲ್ಲಂಘಿಸಿದ ಕುರಿತು ಜಲಮಂಡಳಿ ಪಟ್ಟಿ ತಯಾರಿಸಿದ್ದಾರೆ.

English summary
Close on the heels of deciding not to supply water to houses which haven't implemented rainwater harvesting (RWH), the Bangalore Water Supply and Sewerage Board (BWSSB) has served notices to 499 property owners for letting sewage directly into drains.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X