ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಕ್ತಪಾತ ಹಿಂಸೆಯ, ರಕ್ತದಾನ ಅಹಿಂಸೆಯ ಪ್ರತೀಕ!

By Ashwath
|
Google Oneindia Kannada News

ಬೆಂಗಳೂರು, ಜೂ.10: ಕನ್ನಡ ನಾಡು ನುಡಿಯ ರಕ್ಷಣೆಯ ಬಗ್ಗೆ ಹೋರಾಟ ನಡೆಸುತ್ತಿರುವ ಕರವೇ ಜೊತೆ ನಾವೆಲ್ಲಾ ಕರ ಜೋಡಿಸಬೇಕಿದೆ ಎಂದು ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ‌ ಶ್ರೀಪಾದರು ಹೇಳಿದ್ದಾರೆ.

ನಗರದ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಜೂ.10ರಂದು ಕರ್ನಾಟಕ ರಕ್ಷಣ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣ ಗೌಡರ 48 ಜನ್ಮದಿದ ಪ್ರಯುಕ್ತ ಆಯೋಜಿಸಲಾದ ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು.

ರಕ್ತಪಾತ ಹಿಂಸೆಯ ಪ್ರತೀಕ, ರಕ್ತದಾನ ಅಹಿಂಸೆಯ ಪ್ರತೀಕ. ಹುಟ್ಟುಹಬ್ಬದ ಸಂದರ್ಭದಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಿ ಕನ್ನಡ ಪರವಾಗಿ ಹೋರಾಟ ನಡೆಸುತ್ತಿರುವ ಕರವೇ ಸೇವೆ ಶ್ಲಾಘನೀಯ ಎಂದು ಪೇಜಾವರ ಶ್ರೀಗಳು ನಾರಾಯಣ ಗೌಡರನ್ನು ಹೊಗಳಿದರು.

48ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿರುವ ಕರವೇ ರಾಜ್ಯಾಧ್ಯಕ್ಷ ಟಿ.ಎ ನಾರಾಯಣ ಗೌಡ ಮಾತನಾಡಿ, ಹುಟ್ಟು ಹಬ್ಬ ನಿಮಿತ್ತ ಮಾತ್ರ ಆಚರಣೆ. ರಾಜ್ಯದ ಮೂಲೆ ಮೂಲೆಗಳಿಂದ ಸಾವಿರಾರು ಜನ ಬಂದು ಬೆಂಗಳೂರಿನಲ್ಲಿ ರಕ್ತದಾನ ಮಾಡಿರುವುದು ಹೊಸ ದಾಖಲೆ. ನಮ್ಮ ಕಾರ್ಯ‌ಕರ್ತರು ಹೋರಾಟದ ಸಂದರ್ಭದಲ್ಲಿ ರಕ್ತ ಕೊಟ್ಟು ನಾಡನ್ನು ಕಾಪಾಡುತ್ತಾರೆ.ಅದೇ ರೀತಿಯಾಗಿ ರಕ್ತವನ್ನು ದಾನ ಮಾಡುವ ಮೂಲಕ ಸಮಾಜ ಸಹಾಯಕ್ಕೂ ತಯಾರಿದ್ದಾರೆ ಎಂದು ತಮ್ಮ ಕಾರ್ಯ‌ಕರ್ತರನ್ನು ಅಭಿನಂದಿಸಿದರು.

ಕಾರ್ಯಕ್ರಮದಲ್ಲಿ ನಾಗಮಂಗಲದ ಆದಿಚುಂಚನಗಿರಿ ಮಹಾಸಂಸ್ಥಾನದ ನಿರ್ಮಲಾನಂದನಾಥ ಸ್ವಾಮೀಜಿ, ಕೂಡಲ ಸಂಗಮದ ಪಂಚಮಶಾಲಿ ಜಗದ್ಗುರು ಮಹಾಪೀಠದ ಜಯ ಮೃತ್ಯುಂಜಯ ಸ್ವಾಮೀಜಿ, ಚಿಕ್ಕೋಡಿ ಸಿದ್ದಸಂಸ್ಥಾನ ಮಠದ ಅಲ್ಲಮ ಪ್ರಭು ಸ್ವಾಮೀಜಿ, ಚಿತ್ರದುರ್ಗ ಮಾದಾರ ಪೀಠದ ಬಸವ ಮೂರ್ತಿ‌ ಮಾದಾರ ಚನ್ನಯ್ಯ ಸ್ವಾಮೀಜಿ ಉಪಸ್ಥಿತರಿದ್ದರು.

ಆಹಾರ ನಾಗರೀಕ ಪೂರೈಕೆ ಸಚಿವ ದಿನೇಶ್‌ ಗುಂಡುರಾವ್‌, ಮಾಜಿ ಉಪಮುಖ್ಯಮಂತ್ರಿ ಆರ್‌.ಅಶೋಕ್‌‌, ಮಾಜಿ ಕೇಂದ್ರ ಸಚಿವ ಎಂವಿ. ರಾಜಶೇಖರ್‌‌‌‌‌, ಶಾಸಕ ಅರವಿಂದ ಲಿಂಬಾವಳಿ, ಚಿತ್ರ ನಟ ಶರಣ್‌, ಉದ್ಯಮಿ ಅಶೋಕ್‌ ಖೇಣಿ ಕಾರ್ಯ‌ಕ್ರಮದಲ್ಲಿ ಭಾಗವಹಿಸಿದ್ದರು.

ಮುಂದಿನ ಪುಟದಲ್ಲಿ ಇತರೇ ಗಣ್ಯರ ಮಾತುಗಳು ನೀಡಲಾಗಿದ್ದು ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ.

ಕರವೇ ಬಲಿಷ್ಠ ಸಂಘಟನೆ

ಕರವೇ ಬಲಿಷ್ಠ ಸಂಘಟನೆ

ಯಾವುದೇ ಸರ್ಕಾರ ರಾಜ್ಯದಲ್ಲಿದ್ದರೂ ಕನ್ನಡ ಪರವಾಗಿ ರಾಜಕೀಯ ರಹಿತವಾಗಿ ಕರವೇ ನಿರಂತರವಾಗಿ ಹೋರಾಟ ನಡೆಸಿಕೊಂಡು ಬಂದಿದೆ. ಬಹಳಷ್ಟು ಸಂಘಟನೆಗಳು ಸ್ಥಾಪನೆಯಾದ ಮೂರೇ ದಿನದಲ್ಲಿ ಒಡೆದು ಚೂರು ಚೂರಾಗುತ್ತದೆ. ಆದರೆ ಕರವೇ ಸ್ಥಾಪನೆಯಾದ ದಿನದಿಂದ ಇಲ್ಲಿಯವರೆಗೆ ಚೂರಾಗದೇ ಕಾರ್ಯ‌ಕರ್ತರ ಸಂಖ್ಯೆ ಪ್ರತಿವರ್ಷ ಹೆಚ್ಚಾಗುತ್ತಿದೆ. ನಿಜಕ್ಕೂ ಇದು ಹೆಮ್ಮೆಯ ವಿಚಾರ
ಆರ್‌.ಅಶೋಕ್‌, ಮಾಜಿ ಉಪಮುಖ್ಯಮಂತ್ರಿ

 ಹೋರಾಟಗಾರರಿಗೆ ಸ್ಪೂರ್ತಿ:‌

ಹೋರಾಟಗಾರರಿಗೆ ಸ್ಪೂರ್ತಿ:‌

"ಕರ್ನಾಟಕಕ್ಕೆ ಹಿಂದಿಗಿಂತಲೂ ಇಂದು ಹೋರಾಟ ಹೆಚ್ಚಿನ ಅಗತ್ಯವಿದೆ. ಬಹಳಷ್ಟು ಕನ್ನಡಿಗರಿಗೆ ಯಾವ ರೀತಿ ಹೋರಾಟ ನಡೆಸಬೇಕು ಎನ್ನುವುದೇ ಗೊತ್ತಿರಲಿಲ್ಲ. ಅಂತವರನ್ನು ಒಗ್ಗೂಡಿಸಿ ರಾಜಕೀಯ ರಹಿತವಾಗಿ ಹೋರಾಟ ನಡೆಸಿ ನಾನು ನಿಮ್ಮೊಂದಿಗೆ ಇದ್ದೇನೆ ಎಂದು ತೋರಿಸಿ ನಾಯಕ"
ಚಂದ್ರಶೇಖರ ಕಂಬಾರ,ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ

 ಒಗ್ಗಟ್ಟಾಗಿ ಕೆಲಸ ಮಾಡಬೇಕಿದೆ:

ಒಗ್ಗಟ್ಟಾಗಿ ಕೆಲಸ ಮಾಡಬೇಕಿದೆ:

"ನಗರದಲ್ಲಿ ಅನ್ಯಭಾಷಿಕರ ಸಂಖ್ಯೆ ಹೆಚ್ಚಾಗುತ್ತಿದೆ. ಕೆಲವೇ ಕೆಲವು ಬಡಾವಣೆಯಲ್ಲಿ ಕನ್ನಡಿಗರು ವಾಸಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಭಾಷೆಯ ಬಗ್ಗೆ ಹೋರಾಟ ನಡೆಸುತ್ತಿರುವ ಕರವೇ ಜೊತೆ ನಾವೆಲ್ಲಾ ಒಗ್ಗಟ್ಟಾಗಿ ಕೆಲಸ ಮಾಡಬೇಕಿದೆ "
‌ ಕಟ್ಟೆ ಸತ್ಯನಾರಾಯಣ, ಮೇಯರ್‌ ಬಿಬಿಎಂಪಿ

 ನಾರಾಯಣ ಗೌಡರು ಬರೆದ ಕೃತಿ ಲೋಕಾರ್ಪ‌ಣೆ

ನಾರಾಯಣ ಗೌಡರು ಬರೆದ ಕೃತಿ ಲೋಕಾರ್ಪ‌ಣೆ

ಆತ್ಮಕಥನ 'ಕ್ರಾಂತಿಯುಗ- ಭಾಗ- 1', ಕರವೇ ಕಾರ್ಯಕರ್ತರಿಗೊಂದು ದಾರಿ ದೀಪ 'ಕನ್ನಡ ಜ್ಞಾನ ಪುಸ್ತಕ', 'ಪ್ರೇಮ ಸಂಭ್ರಮ' ಕವನ ಸಂಕಲನ, ' ಪ್ರೇಮ ಸಂಭ್ರಮ' ಧ್ವನಿ ಸುರುಳಿ, ಕಿರು ಚಿತ್ರ ವಿಡಿಯೋ 'ನಾಡ ಸೇನಾನಿ'ಯನ್ನು ಗಣ್ಯರು ಬಿಡುಗಡೆಗೊಳಿಸಿದರು.

English summary
T. A. Narayana Gowda, the president of the pro-Kannada organization Karnataka Rakshana Vedike (KRV) celebrated his 48th birthday on June 10 in Bangalore. Narayana Gowda was born on 10 June 1966 to Ananthaiah and Gowramma in Malekal Tirupati, Arasikere taluk of Hassan District.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X