ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾಲೇಜುಗಳು ಪುನರಾರಂಭ: ಬೆಂಗಳೂರಿನ 450 ಕಡೆ ಗಂಟಲು ದ್ರವ ಮಾದರಿ ಸಂಗ್ರಹ ತಂಡ ನಿಯೋಜನೆ

|
Google Oneindia Kannada News

ಬೆಂಗಳೂರು, ನವೆಂಬರ್ 17: ಕರ್ನಾಟಕದಲ್ಲಿ ಕೊರೊನಾ ಹಾವಳಿ ಕೊಂಚ ತಗ್ಗಿದ್ದು ನವೆಂಬರ್ 17 ರಿಂದ ಕಾಲೇಜುಗಳು ಆರಂಭವಾಗಲಿವೆ.

ಮುಂಜಾಗ್ರತಾ ಕ್ರಮವಾಗಿ ಬಿಬಿಎಂಪಿ ಬೆಂಗಳೂರಿನ 450 ಕಡೆಗಳಲ್ಲಿ ಗಂಟಲು ದ್ರವ ಮಾದರಿ ಸಂಗ್ರಹ ತಂಡಗಳನ್ನು ನಿಯೋಜಿಸುತ್ತಿದೆ.

corona

ಇದೇ ನವೆಂಬರ್ 17ರಂದು ರಾಜ್ಯ ಸರ್ಕಾರ ಕಾಲೇಜುಗಳು ಪುನಾರಂಭಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ 450 ಮೊಬೈಲ್ ಸ್ವ್ಯಾಬ್ ಸಂಗ್ರಹ ತಂಡಗಳನ್ನು ನಗರದ ಶಿಕ್ಷಣ ಸಂಸ್ಥೆಗಳ ಬಳಿ ನಿಯೋಜಿಸಲಾಗುವುದು ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಘೋಷಣೆ ಮಾಡಿದೆ.

ಹಲವಾರು ಶಿಕ್ಷಣ ಸಂಸ್ಥೆಗಳು/ಕಾಲೇಜುಗಳು ಇರುವಲ್ಲಿ ಹೆಚ್ಚಿನ ತಂಡಗಳನ್ನು ಇರಿಸಲಾಗುವುದು ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಹೇಳಿದರು.

ಹಾಗೆಯೇ ಹೆಚ್ಚುವರಿಯಾಗಿ, ಬಿಬಿಎಂಪಿ ಮಿತಿಯಲ್ಲಿರುವ ಶಿಕ್ಷಣ ಸಂಸ್ಥೆಗಳು ಅಥವಾ ಕಾಲೇಜುಗಳನ್ನು ತಮ್ಮ ಹತ್ತಿರದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಮ್ಯಾಪ್ ಮಾಡಲಾಗುತ್ತದೆ. ಇಲ್ಲಿ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಬೆಳಿಗ್ಗೆ 9 ರಿಂದ ಸಂಜೆ 5 ರವರೆಗೆ ಪರೀಕ್ಷೆಗೊಳಪಡಬಹುದು.

ಮಂಗಳವಾರ ಕಾಲೇಜು ಓಪನ್; ಕೋವಿಡ್ ಪರೀಕ್ಷೆ, ಸ್ಯಾನಿಟೈಸ್ಮಂಗಳವಾರ ಕಾಲೇಜು ಓಪನ್; ಕೋವಿಡ್ ಪರೀಕ್ಷೆ, ಸ್ಯಾನಿಟೈಸ್

ಈ ತಂಡಗಳು ಸಂಗ್ರಹಿಸಲಿರುವ ಸ್ವಾಬ್ ಪರೀಕ್ಷೆಗಳ ವರದಿಗಳು 24 ಗಂಟೆಗಳ ಅವಧಿಯಲ್ಲಿ ಬರಲಿದೆ. ಪರೀಕ್ಷಾ ವರದಿಗಳನ್ನು ಐಸಿಎಂಆರ್ ಪೋರ್ಟಲ್‌ ನಲ್ಲಿ ಅಪ್‌ ಲೋಡ್ ಮಾಡಲಾಗುತ್ತದೆ.

ಪರೀಕ್ಷಾ ವರದಿಗಳ ಯಾವುದೇ ವಿಳಂಬ ತಪ್ಪಿಸಲು ವೈದ್ಯಕೀಯ ಅಧಿಕಾರಿಗಳು ಈ ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡುತ್ತಾರೆ. ಪರೀಕ್ಷೆ ರಿಪೋರ್ಟ್ ಗಳನ್ನು https://www.covidwar.karnataka.gov.in/service1 ನಲ್ಲಿ ಪ್ರವೇಶಿಸಿ ಪಿಡಿಎಫ್ ಆವೃತ್ತಿಯಲ್ಲಿ ಡೌನ್‌ಲೋಡ್ ಮಾಡಬಹುದು ಎಂದು ಹೇಳಿದೆ.

ವಿದ್ಯಾರ್ಥಿಗಳು ಕ್ರಮೇಣ ಕಾಲೇಜುಗಳಿಗೆ ಬರಲು ಪ್ರಾರಂಭಿಸುವ ನಿರೀಕ್ಷೆಯಿರುವುದರಿಂದ, ನಂತರದ ದಿನಗಳಲ್ಲಿ ಪರೀಕ್ಷಿಸಲು ತಂಡಗಳನ್ನು ಕಾಲೇಜುಗಳ ಬಳಿ ನಿಯೋಜಿಸಲಾಗುವುದು ಎಂದು ಹೇಳಿದರು.

Recommended Video

Nike ಬಿಟ್ಟು MPLಗೆ ಇನ್ಮುಂದೆ ಟೀಮ್ ಇಂಡಿಯಾದ ಉಡುಪುಗಳ ಜವಾಬ್ದಾರಿ | Oneindia Kannada

ನಗರದಲ್ಲಿ 432 ಕಾಲೇಜುಗಳಿದ್ದು, 60,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿ ಇದ್ದಾರೆ. ಕಾಲೇಜುಗಳು ಆರಂಭದಲ್ಲಿ ಸುಮಾರು ಶೇ.30ರಷ್ಟು ವಿದ್ಯಾರ್ಥಿಗಳ ಹಾಜರಾತಿಯನ್ನು ನಿರೀಕ್ಷಿಸಲಾಗುತ್ತಿದೆ ಮತ್ತು ನಮ್ಮ ಬಿಬಿಎಂಪಿ ಸ್ವ್ಯಾಬ್ ಸಂಗ್ರಹ ಘಟಕಗಳಲ್ಲಿ ಈ ಜನಸಂಖ್ಯೆಯನ್ನು 1-2 ದಿನಗಳಲ್ಲಿ ಪರೀಕ್ಷೆ ಮಾಡಬಹುದು.

English summary
As colleges are set to open on November 17, the Bruhat Bengaluru Mahanagara Palike (BBMP) announced that 450 mobile swab collection teams from Primary Health Care Centres will be deployed near educational institutions in the city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X