ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಿಂದಾಲ್‌ಗೆ ಜಮೀನು: ಆಡಳಿತ ಪಕ್ಷದ ಶಾಸಕರಿಂದಲೇ ವಿರೋಧ

|
Google Oneindia Kannada News

ಬೆಂಗಳೂರು, ಮೇ 8: ರಾಜ್ಯ ಸರ್ಕಾರ ಜಿಂದಾಲ್ ಸಂಸ್ಥೆಗೆ ಜಮೀನು ನೀಡಿರುವುದಕ್ಕೆ ಆಡಳಿತ ಪಕ್ಷದಿಂದಲೇ ವಿರೋಧ ವ್ಯಕ್ತವಾಗಿದ್ದು, ಈ ಬಗ್ಗೆ ಮರುಪರಿಶೀಲನೆ ನಡೆಸುವಂತೆ ಬಿಜೆಪಿಯ 45ಕ್ಕೂ ಹೆಚ್ಚು ಶಾಸಕರು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.

ಬಿಜೆಪಿಯ ಬಂಡಾಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ಇತ್ತೀಚೆಗೆ ಶಾಸಕ ಅರವಿಂದ ಬೆಲ್ಲದ್ ಅವರ ನಿವಾಸದಲ್ಲಿ ಪಕ್ಷ ನಿಷ್ಠ ಶಾಸಕರು ಸಭೆ ಸೇರಿ ಚರ್ಚೆ ನಡೆಸಿದ್ದಾರೆ ಎನ್ನಲಾಗಿದ್ದು, ಜಿಂದಾಲ್‌ಗೆ ಜಮೀನು ನೀಡುವ ತೀರ್ಮಾನವನ್ನು ಸರ್ಕಾರ ಮರು ಪರಿಶೀಲನೆ ಮಾಡಬೇಕೆಂದು ಆಗ್ರಹಿಸಿ ಪತ್ರ ಬರೆದಿದ್ದಾರೆ ಎಂದು ತಿಳಿದು ಬಂದಿದೆ.

ಜಿಂದಾಲ್‌ಗೆ 3667 ಎಕರೆ ಭೂಮಿ ಪರಭಾರೆಗೆ ವಿರೋಧಿಸಿದ ಆನಂದ್ ಸಿಂಗ್ಜಿಂದಾಲ್‌ಗೆ 3667 ಎಕರೆ ಭೂಮಿ ಪರಭಾರೆಗೆ ವಿರೋಧಿಸಿದ ಆನಂದ್ ಸಿಂಗ್

ಶಾಸಕರಾದ ಬಸನಗೌಡ ಯತ್ನಾಳ, ಅರವಿಂದ ಬೆಲ್ಲದ, ಆರ್.ಪೂರ್ಣಿಮಾ ಸತೀಶ್ ರೆಡ್ಡಿ, ಉದಯ ಗರುಡಾಚಾರ್ಯ, ಅಭಯ್ ಪಾಟೀಲ್, ಸುನೀಲ್ ಕುಮಾರ್ ಸೇರಿದಂತೆ 45ಕ್ಕೂ ಹೆಚ್ಚು ಶಾಸಕರು ಈ ಪತ್ರಕ್ಕೆೆ ಸಹಿ ಹಾಕಿದ್ದಾರೆ ಎಂದು ತಿಳಿದು ಬಂದಿದೆ.

ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸ

ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸ

ರಾಜ್ಯ ಸರ್ಕಾರ ಏಪ್ರಿಲ್ 24 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಬಳ್ಳಾರಿ ಜಿಲ್ಲೆೆಯಲ್ಲಿರುವ ಜಿಂದಾಲ್ ಉಕ್ಕು ಕಂಪನಿಗೆ 3667 ಎಕರೆ ಸರ್ಕಾರಿ ಭೂಮಿಯನ್ನು ಅತಿ ಕಡಿಮೆ ದರಕ್ಕೆ ಶುದ್ಧ ಕ್ರಯ ಪತ್ರ ಮಾಡಿಕೊಡಲು ಒಪ್ಪಿಗೆ ನೀಡಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಇಡೀ ರಾಜ್ಯ ಕೊವಿಡ್ ಸಂಕಷ್ಟದಲ್ಲಿರುವ ಈ ಸಂದರ್ಭದಲ್ಲಿ ತೆಗೆದುಕೊಂಡಿರುವ ನಿರ್ಧಾರದ ಬಗ್ಗೆೆ ಮರು ಪರಿಶೀಲನೆ ನಡೆಸುವುದು ಸೂಕ್ತ ಎಂದು ನಿಮ್ಮ ಗಮನ ಸೆಳೆಯಲು ಪತ್ರದ ಮೂಲಕ ಪ್ರಯತ್ನ ನಡೆಸುವ ಸನ್ನಿವೇಶ ಸೃಷ್ಠಿಯಾಗಿರುವುದರ ಬಗ್ಗೆೆ ವಿಷಾದವಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಶಾಸಕರು ಅಸಮಾಧಾನ ಹೊರ ಹಾಕಿದ್ದಾಾರೆ

ಶಾಸಕರು ಅಸಮಾಧಾನ ಹೊರ ಹಾಕಿದ್ದಾಾರೆ

ಅಲ್ಲದೇ ಹಿಂದಿನ ಮೈತ್ರಿ ಸರ್ಕಾರ ಜಿಂದಾಲ್‌ಗೆ ಜಮೀನು ನೀಡುವ ತೀರ್ಮಾನ ತೆಗೆದುಕೊಂಡಾದ ಅದರ ವಿರುದ್ಧ ಸದನದ ಒಳಗೆ ಮತ್ತು ಹೊರಗೆ ನಿಮ್ಮ (ಯಡಿಯೂರಪ್ಪ) ನೇತೃತ್ವದಲ್ಲಿಯೇ ಹೋರಾಟ ನಡೆಸಲಾಗಿತ್ತು. ಅಲ್ಲದೇ ಬಿಜೆಪಿ ಯುವ ಮೋರ್ಚಾ ವತಿಯಿಂದ ಮೈತ್ರಿ ಸರ್ಕಾರದ ವಿರುದ್ಧ ನಡೆದ ವಿಧಾನಸೌಧ ಚಲೋ ಕಾರ್ಯಕ್ರಮಕ್ಕೂ ನೀವೇ ಚಾಲನೆ ನೀಡಿದೀರಿ. ಈ ವಿಚಾರವನ್ನು ಪಕ್ಷದ ಶಾಸಕಾಂಗ ಸಭೆಯಲ್ಲಿ ಚರ್ಚಿಸದೇ ತೀರ್ಮಾನ ತೆಗೆದುಕೊಂಡಿರುವ ಬಗ್ಗೆೆಯೂ ಶಾಸಕರು ಅಸಮಾಧಾನ ಹೊರ ಹಾಕಿದ್ದಾಾರೆ.

ರಾಜ್ಯದ ಬೊಕ್ಕಸಕ್ಕೆೆ ದೊಡ್ಡ ನಷ್ಟ

ರಾಜ್ಯದ ಬೊಕ್ಕಸಕ್ಕೆೆ ದೊಡ್ಡ ನಷ್ಟ

ಮೈತ್ರಿ ಸರ್ಕಾರ ಜಮೀನು ನೀಡಲು ತೀರ್ಮಾನ ಮಾಡಿದಾಗ ಕಿಕ್ ಬ್ಯಾಕ್ ಪಡೆದಿದೆ ಎಂದು ಆರೋಪ ಮಾಡಿದ್ದೇವು. ಈಗ ರಾಜ್ಯ ಸರ್ಕಾರ ಕಡಿಮೆ ದರಕ್ಕೆೆ ಜಿಂದಾಲ್‌ಗೆ ಜಮೀನು ನೀಡಲು ತೀರ್ಮಾನಿಸಿರುವುದರಿಂದ ಬಿಜೆಪಿ ಸರ್ಕಾರ ಎಷ್ಟು ಕಿಕ್ ಬ್ಯಾಕ್ ಪಡೆದಿದೆ ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿವೆ. ಅಷ್ಟೊಂದು ಬೆಲೆ ಬಾಳುವ ಭೂಮಿಯನ್ನು ಕೇವಲ 1.28 ಲಕ್ಷ ರೂ.ಗೆ ಕ್ರಯ ಪತ್ರ ಮಾಡಲು ಮುಂದಾಗಿರುವುದು ರಾಜ್ಯದ ಬೊಕ್ಕಸಕ್ಕೆೆ ದೊಡ್ಡ ನಷ್ಟ ಮಾಡಿದಂತಾಗುತ್ತದೆ. ಹೀಗಾಗಿ, ರಾಜ್ಯ ಸರ್ಕಾರ ಈಗ ತೆಗೆದುಕೊಂಡಿರುವ ತೀರ್ಮಾನವನ್ನು ಮರು ಪರಿಶೀಲನೆ ನಡೆಸಬೇಕು ಮತ್ತು ಈ ವಿಚಾರದ ಬಗ್ಗೆೆ ಪಕ್ಷದ ಶಾಸಕಾಂಗ ಸಭೆಯಲ್ಲಿ ಮತ್ತೊಮ್ಮೆ ಚರ್ಚೆಗೆ ಅವಕಾಶ ಕಲ್ಪಿಸಿಕೊಡಬೇಕು ಎಂದು ಶಾಸಕರು ಸಿಎಂಗೆ ಬರೆದಿದ್ದಾರೆ ಎಂದು ತಿಳಿದು ಬಂದಿದೆ.

Recommended Video

ತರಕಾರಿ ತೆಗೆದುಕೊಳ್ಳಲು ಬಂದವರ ಮೇಲೆ ಪೋಲೀಸರ ದರ್ಪ | Oneindia Kannada
ರಾಜ್ಯ ಸರ್ಕಾರದಿಂದ ಸ್ಪಷ್ಟನೆ ಕೇಳಿದ ಹೈಕಮಾಂಡ್

ರಾಜ್ಯ ಸರ್ಕಾರದಿಂದ ಸ್ಪಷ್ಟನೆ ಕೇಳಿದ ಹೈಕಮಾಂಡ್

ಇನ್ನು ಈ ಬಗ್ಗೆ ಬಿಜೆಪಿ ಹೈಕಮಾಂಡ್ ರಾಜ್ಯ ಸರ್ಕಾರದಿಂದ ಸ್ಪಷ್ಟನೆ ಕೇಳಿದ್ದು, ಮೊದಲು ವಿರೋಧಿಸಿದ ಯೋಜನೆಗೆ ಈಗ ಅನುಮತಿ ನೀಡಿರುವುದಕ್ಕೆ ಗರಂ ಆಗಿದೆ. ಈ ಬಗ್ಗೆ ಸ್ಪಷ್ಟನೆ ನೀಡಲು ಬಸವರಾಜ ಬೊಮ್ಮಾಯಿ ಹಾಗೂ ಬಿ.ವೈ ವಿಜಯೇಂದ್ರ ನೇತೃತ್ವದ ತಂಡ ದೆಹಲಿಗೆ ತೆರಳಿದೆ. ಮೇಲ್ನೋಟಕ್ಕೆ ಇದರ ಹಿಂದೆ ಭಾರೀ ಭ್ರಷ್ಟಾಚಾರ ನಡೆದಿದೆಯೇ ಎನ್ನುವ ಆರೋಪ ಕೇಳಿಬರುತ್ತಿದ್ದು, ಕೊರೊನಾ ಗದ್ದಲದಲ್ಲಿ ಸದ್ದಿಲ್ಲದೇ ಜಿಂದಾಲ್ ಸಂಸ್ಥೆೆಗೆ ಪರಭಾರೆ ಮಾಡಿರುವುದು ಸ್ವಪಕ್ಷಿಯರೇ ಪ್ರಶ್ನಿಸುವಂತಾಗಿದೆ.

English summary
Over 45 BJP MLAs have written a letter to Chief Minister Yediyurappa demanding that the state government reconsider giving land to Jindal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X