ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕುಡಿದು ವಾಹನ ಏರಿದವರಿಗೆ ದಂಡ ಹಾಕಿ ಮತ್ತಿಳಿಸಿದ ಬೆಂಗಳೂರು ಪೊಲೀಸರು

|
Google Oneindia Kannada News

ಬೆಂಗಳೂರು, ಜನವರಿ 01: ಹೊಸ ವರ್ಷದ ಹಿಂದಿನ ದಿನ ರಾತ್ರಿ ಕುಡಿದು ಮತ್ತೇರಿಸಿಕೊಂಡು ಗಾಡಿ ಹತ್ತಿದವರಿಗೆ ಪೊಲೀಸರು ದಂಡ ವಿಧಿಸಿದ್ದಾರೆ.

ಹೊಸ ವರ್ಷದ ಪಾರ್ಟಿ ಮುಗಿಸಿಕೊಂಡು ಮತ್ತಿನ ಗಮ್ಮತ್ತಿನಲ್ಲಿ ಗಾಡಿಯಲ್ಲಿ ತೆರಳುತ್ತಿದ್ದವರನ್ನು ಹಿಡಿದು ಶಿಕ್ಷೆ ನೀಡಲೆಂದೇ ಕಾದಿದ್ದ ಪೊಲೀಸರು 426 ಡ್ರಂಕ್ ಆಂಡ್ ಡ್ರೈವ್ ಕೇಸುಗಳನ್ನು ಹಾಕಿದ್ದಾರೆ.

ಪೂರ್ವ ವಿಭಾಗದಲ್ಲಿ 99 ಡ್ರಂಕ್ ಆಂಡ್ ಡ್ರೈವ್ ಕೇಸುಗಳು ದಾಖಲಾಗಿದೆ. ಪಶ್ಚಿಮ ವಿಭಾಗದಲ್ಲಿ 254 ಡ್ರಂಕ್ ಆಂಡ್ ಡ್ರೈವ್ ಕೇಸುಗಳು ದಾಖಲಾಗಿದೆ, ಉತ್ತರ ವಿಭಾಗದಲ್ಲಿ 73 ಡ್ರಂಕ್ ಆಂಡ್ ಡ್ರೈವ್ ಕೇಸುಗಳು ದಾಖಲಾಗಿವೆ. ಇವೆಲ್ಲವೂ ನಿನ್ನೆ ರಾತ್ರಿ ಒಂದು ದಿನದಲ್ಲಿಯೇ ದಾಖಲಾಗಿರುವ ಕೇಸುಗಳಾಗಿವೆ.

426 Drunk And Drive Cases Lodged In Bengaluru On December 31 Night

ಹೊಸ ಸಂಚಾರಿ ನಿಯಮದ ಪ್ರಕಾರ ಡ್ರಂಕ್ ಆಂಡ್ ಡ್ರೈವ್ ಕೇಸುಗಳಿಗೆ 10,000 ಸಾವಿರ ದಂಡ ತೆರಬೇಕಾಗಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಡ್ರಂಕ್ ಆಂಡ್ ಡ್ರೈವ್ ಕೇಸುಗಳು ಕಡಿಮೆ ಆಗಿವೆ. ಈ ಬಾರಿ ಮೆಟ್ರೋ ಸಂಚಾರ ವಿಸ್ತರಣೆ ಮತ್ತು ಟ್ಯಾಕ್ಸಿ, ಆಟೋ ಲಭ್ಯತೆ ಹೆಚ್ಚಿಗೆ ಇದ್ದ ಕಾರಣ ಮತ್ತು ಅಧಿಕ ದಂಡದ ಭಯದಿಂದ ಹೆಚ್ಚು ಮಂದಿ ಕುಡಿದು ವಾಹನ ಚಾಲನೆ ಮಾಡಿಲ್ಲ.

English summary
426 drunk and drive cases has been lodged in Bengaluru on December 31 night.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X