ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶೀಘ್ರದಲ್ಲೇ ಸ್ಥಾಪನೆಯಾಗಲಿದೆ 40 ಬೆಂಗಳೂರು ಒನ್ ಕೇಂದ್ರ

|
Google Oneindia Kannada News

ಬೆಂಗಳೂರು, ಜನವರಿ 14 : ಇ-ಆಡಳಿತ ಇಲಾಖೆ ಉದ್ಯಾನ ನಗರಿ ಬೆಂಗಳೂರಿನಲ್ಲಿ 40 ಬೆಂಗಳೂರು ಒನ್ ಕೇಂದ್ರಗಳನ್ನು ಆರಂಭಿಸಲು ನಿರ್ಧರಿದೆ. ಸದ್ಯ, 95ಕ್ಕೂ ಅಧಿಕ ಬೆಂಗಳೂರು ಒನ್ ಕೇಂದ್ರಗಳು ಜನರಿಗೆ 100ಕ್ಕೂ ಅಧಿಕ ಸರ್ಕಾರಿ ಸೇವೆಗಳನ್ನು ನೀಡುತ್ತಿವೆ.

ಬೆಂಗಳೂರು ನಗರದಲ್ಲಿ ಬೆಳೆಯುತ್ತಿರುವ ಜನಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ಹೆಚ್ಚುವರಿಯಾಗಿ 40 ಬೆಂಗಳೂರು ಒನ್ ಕೇಂದ್ರಗಳನ್ನು ತೆರೆಯಲು ನಿರ್ಧರಿಸಲಾಗಿದೆ. ಮುಂದಿನ ಎರಡು ತಿಂಗಳಿನಲ್ಲಿ ನಗರದ ವಿವಿಧ ಪ್ರದೇಶಗಳಲ್ಲಿ ನೂತನ ಕೇಂದ್ರಗಳು ಕಾರ್ಯಾಚರಂಭ ಮಾಡಲಿದೆ. [ಬೆಂಗಳೂರು ಒನ್ ವೆಬ್ ಸೈಟ್]

bangaloreone

ಬೆಂಗಳೂರು ನಗರದಲ್ಲಿ ಸದ್ಯ ಎರಡು ಮೊಬೈಲ್ ಕೇಂದ್ರಗಳು ಸೇರಿದಂತೆ 95 ಕೇಂದ್ರಗಳಿವೆ. ಬಿಬಿಎಂಪಿ, ಬಿಡಿಎ, ಜಲಮಂಡಳಿ ಸೇರಿಂದತೆ ವಿವಿಧ ಇಲಾಖೆಗಳ 100ಕ್ಕೂ ಅಧಿಕ ಸೇವೆಗಳು ಈ ಕೇಂದ್ರಗಳಲ್ಲಿ ಲಭ್ಯವಿದೆ. ಬೆಳಯುತ್ತಿರುವ ನಗರದ ವ್ಯಾಪ್ತಿ ನೋಡಿಕೊಂಡು 40 ಕೇಂದ್ರಗಳನ್ನು ಹೊಸದಾಗಿ ತೆರೆಯಲು ನಿರ್ಧರಿಸಲಾಗಿದೆ. [ಜನನ ಪ್ರಮಾಣ ಪತ್ರ ಪಡೆಯುವುದು ಹೇಗೆ?]

ಸಮಯ ಬದಲಾವಣೆ : ಬೆಂಗಳೂರು ನಗರದ ವಿವಿಧ ಬಡಾವಣೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬೆಂಗಳೂರು ಒನ್ ಕೇಂದ್ರಗಳ ಕಚೇರಿಯ ಸಮಯ ಜನವರಿ 1 ರಿಂದ ಬದಲಾವಣೆಯಾಗಿದೆ. ಮೊದಲ ಪಾಳಿ ಬೆಳಗ್ಗೆ 8 ರಿಂದ ಮಧ್ಯಾಹ್ನ 1-30 ರವರೆಗೆ ಹಾಗೂ ಎರಡನೇ ಪಾಳಿ ಮಧ್ಯಾಹ್ನ 2 ರಿಂದ ರಾತ್ರಿ 7 ಗಂಟೆವರೆಗೆ ಕಾರ್ಯನಿರ್ವಹಿಸಲಿವೆ.

English summary
Department of e-Governance is opening 40 more BangaloreOne centers in the city soon. At present, city has 95 BangaloreOne centers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X