ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಏಕ ಮುಖ ಪ್ಲಾಸ್ಟಿಕ್‌ ನಿಷೇಧಿಸಿ 4 ವರ್ಷ ಕಳೆದರೂ ಕಡಿಮೆಯಾಗಿಲ್ಲ ಬಳಕೆ

|
Google Oneindia Kannada News

ಬೆಂಗಳೂರು,ಫೆಬ್ರವರಿ 08: ಸರ್ಕಾರ ಏಕ ಬಳಕೆಯ ಪ್ಲಾಸ್ಟಿಕ್‌ಗೆ ನಿಷೇಧ ಹೇರಿ ಬರೋಬ್ಬರಿ ನಾಲ್ಕು ವರ್ಷಗಳು ಕಳೆದಿವೆ, ಆದರೂ ರಸ್ತೆಯ ಬದಿಯಲ್ಲಿ ಪ್ಲಾಸ್ಟಿಕ್ ಎಸೆಯುವುದು ಇನ್ನೂ ಕಡಿಮೆಯಾಗಿಲ್ಲ.

ಮೊದ ಮೊದಲು ಬಿಬಿಎಂಪಿ ಅಭಿಯಾನ ಆರಂಭಿಸಿ ಪ್ರತಿಯೊಂದು ಮಳಿಗೆಗಳಿಗೂ ತೆರಳಿ ಪ್ಲಾಸ್ಟಿಕ್ ಪತ್ತೆ ಹಚ್ಚಿ ದಂಡ ವಿಧಿಸುತ್ತಿದ್ದರು.

ತ್ವರಿತ ಆಮದು ಸುಂಕ ಇಳಿಕೆಗೆ ಪ್ಲಾಸ್ಟಿಕ್ ರಫ್ತು ಮಂಡಳಿ ಆಗ್ರಹತ್ವರಿತ ಆಮದು ಸುಂಕ ಇಳಿಕೆಗೆ ಪ್ಲಾಸ್ಟಿಕ್ ರಫ್ತು ಮಂಡಳಿ ಆಗ್ರಹ

ಹಸುಗಳು, ನಾಯಿಗಳು ಕಸದಲ್ಲಿರುವ ಆಹಾರವನ್ನು ತಿನ್ನಲು ಹೋಗಿ ಪ್ಲಾಸ್ಟಿಕ್‌ಗಳನ್ನು ತಿನ್ನುತ್ತವೆ, ಇಂತಹ ಮೂಕ ಪ್ರಾಣಿಗಳ ಸಾವಿಗೆ ಕಾರಣರಾಗಬೇಡಿ ಎಂದು ಪರಿಸರವಾದಿಗಳು ಒತ್ತಿ ಹೇಳಿದ್ದಾರೆ.

4 Year Ater,Single Use Platic Still Thrives Across Bengaluru Despite Ban

ಕಾಲ ಕ್ರಮೇಣ ಬಿಬಿಎಂಪಿಯು ಸುಮ್ಮನಾಗಿತ್ತು, ಅಂಗಡಿ ಮಾಲೀಕರು ಮತ್ತೆ ಪ್ಲಾಸ್ಟಿಕ್ ಬಳಕೆ ಶುರು ಮಾಡಿದ್ದಾರೆ.ಏಕ ಮುಖ ಪ್ಲಾಸ್ಟಿಕ್ ಬಳಕೆ ಹೆಚ್ಚಾಗಿದ್ದು, ನಗರದೆಲ್ಲೆಡೆ ಕಸಗಳಲ್ಲಿ ಮತ್ತೆ ಪ್ಲಾಸ್ಟಿಕ್ ಕಾಣಸಿಗುತ್ತಿದೆ. ಮದುವೆಮನೆಗಳಲ್ಲಿ, ತರಕಾರಿ ಮಾರುವವರು, ಸಣ್ಣ ರೆಸ್ಟೋರೆಂಟ್‌ಗಳಲ್ಲಿ ಪ್ಲಾಸ್ಟಿಕ್ ಬಳಕೆ ಇನ್ನೂ ಕೂಡ ಇದೆ.

ಕೇವಲ ಅಂಗಡಿ ಮಾಲೀಕರಷ್ಟೇ ಅಲ್ಲ ಜನರು ಕೂಡ ಜಾಗ್ರತರಾಗಬೇಕು, ಮನೆಯಿಂದಲೇ ಬಟ್ಟೆಯ ಚೀಲಗಳನ್ನು ಒಯ್ದರೆ ತನ್ನಿಂತಾನೆ ಪ್ಲಾಸ್ಟಿಕ್ ಕವರ್‌ಗಳ ಬಳಕೆ ಕಡಿಮೆಯಾಗುತ್ತದೆ.

Recommended Video

ಕಂದಾಯ,ಗ್ರಾಮೀಣಾಭಿವೃದ್ಧಿ ಸಿಬ್ಬಂದಿಗಳಿಗೆ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಚಾಲನೆ | Oneindia Kannada

ನಗರದ ಹೊರ ವಲಯದಲ್ಲಿ ತ್ಯಾಜ್ಯಕ್ಕೆ ಬೆಂಕಿ ಹಚ್ಚಲಾಗುತ್ತದೆ, ಅದರಲ್ಲಿ ಟನ್‌ಗಟ್ಟಲೆ ಪ್ಲಾಸ್ಟಿಕ್ ಕೂಡ ಮಿಶ್ರಿತವಾಗಿರುವುದರಿಂದ ಅಲ್ಲಿ ವಾಯು ಮಾಲಿನ್ಯ ಹೆಚ್ಚಾಗಿದೆ. ತರಕಾರಿ ಹಣ್ಣಿನ ಅಂಗಡಿಗಳು, ಬಟ್ಟೆ ಅಂಗಡಿಗಳು ಎಲ್ಲೇ ಹೋಗಲಿ ಕೈಯಲ್ಲೊಂದು ಚೀಲ ಹಿಡಿದು ಹೋಗಿ, ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿ.

English summary
Four years after the government banned single use plastic,vegetabl vendors,marriage halls,small restaurants and many other establishments across the city still use it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X