ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೊಸ ರಸ್ತೆ ನಿರ್ಮಾಣ; ನೆಲಮಂಗಲ-ಬೆಂಗಳೂರು ವಿಮಾನ ನಿಲ್ದಾಣ

|
Google Oneindia Kannada News

ಬೆಂಗಳೂರು, ಜೂನ್ 25 : ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಯಾಣಿಕರಿಗೆ ಬೆಂಗಳೂರು ನಗರದ ಸಂಚಾರ ದಟ್ಟಣೆ ಕಡಿಮೆ ಸಾಕಷ್ಟು ಪ್ರಯತ್ನ ನಡೆಯುತ್ತಿದೆ. ಈಗ 39 ಕಿ. ಮೀ. ಮತ್ತೊಂದು ರಸ್ತೆ ನಿರ್ಮಾಣ ಮಾಡಲಾಗುತ್ತಿದೆ.

Recommended Video

ಜನಸಾಮಾನ್ಯರಿಗೆ ಒಂದು ನ್ಯಾಯ, ರಾಜಕಾರಣಿಗಳಿಗೊಂದು ನ್ಯಾಯ | Oneindia Kannada

ಯಾವುದೇ ಸಂಚಾರ ದಟ್ಟಣೆ ಇಲ್ಲದೇ ನೆಲಮಂಗಲ-ಮಧುರೆ-ರಾಜಾನಕುಂಟೆ ಮೂಲಕ ದೇವನಹಳ್ಳಿಯಲ್ಲಿರುವ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲಾಗುತ್ತಿದೆ. 39 ಕಿ. ಮೀ. ರಸ್ತೆ ನಿರ್ಮಾನ ಮಾಡುವುದಕ್ಕೆ 310 ಕೋಟಿ ರೂ. ಖರ್ಚು ಮಾಡಲಾಗುತ್ತಿದೆ.

ಶಿವಮೊಗ್ಗ ವಿಮಾನ ನಿಲ್ದಾಣ; ಯೋಜನೆಯ ಮುಖ್ಯಾಂಶಗಳು ಶಿವಮೊಗ್ಗ ವಿಮಾನ ನಿಲ್ದಾಣ; ಯೋಜನೆಯ ಮುಖ್ಯಾಂಶಗಳು

ಸಿಗ್ನಲ್ ಮುಕ್ತವಾಗಿರುವ ಈ 4 ಪಥದ ರಸ್ತೆ ನಿರ್ಮಾಣ ಕಾರ್ಯ ಪೂರ್ಣಗೊಂಡರೆ ತುಮಕೂರು, ಹಾಸನ, ಮಂಡ್ಯ, ಚಿಕ್ಕಮಗಳೂರು ಸೇರಿದಂತೆ ರಾಷ್ಟ್ರೀಯ ಹೆದ್ದಾರಿ 4ರ ಮೂಲಕ ಬರುವ ಜನರು ಸುಲಭವಾಗಿ ವಿಮಾನ ನಿಲ್ದಾಣಕ್ಕೆ ಪ್ರಯಾಣ ಬೆಳೆಸಬಹುದಾಗಿದೆ.

ಕರ್ನಾಟಕದ 11,760 ಕಿ.ಮೀ ರಸ್ತೆ ಮೇಲ್ದರ್ಜೆಗೆ: ಗ್ರಾಮೀಣ ರಸ್ತೆಗಳೆಷ್ಟು? ಕರ್ನಾಟಕದ 11,760 ಕಿ.ಮೀ ರಸ್ತೆ ಮೇಲ್ದರ್ಜೆಗೆ: ಗ್ರಾಮೀಣ ರಸ್ತೆಗಳೆಷ್ಟು?

 4 Lane New By Pass Will Connect Nnelamangala to KIA

ನೆಲಮಂಗಲದ ಮೂಲಕ ಈ ರಸ್ತೆ ದೇವನಹಳ್ಳಿಗೆ ಸಂಪರ್ಕವನ್ನು ಕಲ್ಪಿಸುತ್ತದೆ. ಈ ರಸ್ತೆ ನಿರ್ಮಾಣದಿಂದಾಗಿ ನೆಲಮಂಗಲದ, ರಾಜಾನಕುಂಟೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ರಿಯಲ್ ಎಸ್ಟೇಟ್ ಉದ್ಯಮಕ್ಕೂ ಸಹಕಾರಿಯಾಗಲಿದೆ. ಭೂಮಿ ಖರೀದಿಗೆ ಪೈಪೋಟಿ ನಡೆಯಲಿದೆ.

ಬೆಂಗಳೂರು-ಮಾಗಡಿ ನಾಲ್ಕು ಪಥದ ರಸ್ತೆ ಕಾಮಗಾರಿಗೆ ಜುಲೈನಲ್ಲಿ ಚಾಲನೆಬೆಂಗಳೂರು-ಮಾಗಡಿ ನಾಲ್ಕು ಪಥದ ರಸ್ತೆ ಕಾಮಗಾರಿಗೆ ಜುಲೈನಲ್ಲಿ ಚಾಲನೆ

ಒಟ್ಟು 39 ಕಿ. ಮೀ. ರಸ್ತೆಯನ್ನು 310 ಕೋಟಿ ರೂ. ಅನುದಾನದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. 2.5 ವರ್ಷದಲ್ಲಿ ಈ ಯೋಜನೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ನೆಲಮಂಗಲದಿಂದ ಮಧುರೆ (ಕೋಡಿಪಾಳ್ಯ) 15 ಕಿ. ಮೀ. ಮೊದಲ ಹಂತದಲ್ಲಿ ಪೂರ್ಣಗೊಳ್ಳಲಿದೆ.

ಮಧುರೆಯಿಂದ ರಾಜಾನಕುಂಟೆ 15 ಕಿ. ಮೀ ಮಾರ್ಗ 2ನೇ ಹಂತದಲ್ಲಿ ನಡೆಯಲಿದೆ. ನಾರಾಯಣಪುರ ಬಳಿ ರೈಲ್ವೆ ಮೇಲ್ಸೇತುವೆ, ರಾಜಾನಾಕುಂಟೆ ಬಳಿ ಇರುವ ಹಾಲಿ ಮೇಲ್ಸೇತುವೆ ವಿಸ್ತರಣೆ ಮತ್ತು ಮಧುರೆ ಕೆರೆ ಕೋಡಿ ವಿಸ್ತರಣೆ ಕಾಮಕಾರಿಯೂ ಇದರಲ್ಲಿ ಸೇರಿದೆ.

English summary
39 Km new by pass road will be come up to connect Nnelamangala to Kempegowda international airport, Bengaluru. 4 lane signal free road cost around 310 crore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X